ಕ್ರಿಕೆಟ್

ಅಂಪೈರ್ ನಿದ್ದೆ ಮಾಡ್ತಿದ್ದನಾ..?: ಕೆಎಲ್ ರಾಹುಲ್ ನಾಟ್ ಔಟ್ ಎಂದ ಅಭಿಮಾನಿಗಳು. ಕಾರಣ ಏನು ಗೊತ್ತಾ?

Srinivasamurthy VN

ದುಬೈ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಭಾರತ-ಪಾಕಿಸ್ತಾನ ಪಂದ್ಯ ಮುಕ್ತಾಯವಾಗಿದ್ದು, ಭಾರತದ ವಿರುದ್ಧ ಪಾಕ್ 10 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಆದರೆ ಇತ್ತ ಭಾರತ ತಂಡದ ಅಭಿಮಾನಿಗಳು ಮಾತ್ರ ಪಂದ್ಯ ಆನ್ ಫೀಲ್ಜ್ ಅಂಪೈರ್ ಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹೌದು.. ಭಾರತದ ಸೋಲಿಗೂ ಅಂಪೈರ್ ಗಳಿಗೆ ಏನುಕಾರಣ? ಅಭಿಮಾನಿಗಳ ಆಕ್ರೋಶವೇಕೆ ಎಂಬ ಪ್ರಶ್ನೆಗೆ ಉತ್ತರ.. ಕೆಎಲ್ ರಾಹುಲ್.. ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡದ ಪರ ಆರಂಭಿಕ ಆಟಗಾರರಾಗಿ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಕಣಕ್ಕಿಳಿದರು.

ಆದರೆ, ಟೀಮ್ ಇಂಡಿಯಾ ಆರಂಭದಲ್ಲಿಯೇ ಆರಂಭಿಕ ಆಟಗಾರರ ವಿಕೆಟ್‍ಗಳನ್ನು ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ಭಾರತದ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಇಬ್ಬರೂ ಸಹ ಪಾಕಿಸ್ತಾನದ ಪ್ರಮುಖ ಬೌಲರ್ ಶಾಹೀನ್ ಅಫ್ರಿದಿ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. 

ಕೆಎಲ್ ರಾಹುಲ್ ನಿನ್ನೆಯ ಪಂದ್ಯದಲ್ಲಿ 3 ರನ್ ಗಳಿಸಿ ಔಟಾಗಿ ನಿರಾಶೆ ಮೂಡಿಸಿದ್ದರು. ಶಾಹೀನ್ ಅಫ್ರಿದಿ ಎಸೆದ 2ನೇ ಓವರ್ ನ ಮೊದಲ ಎಸೆತದಲ್ಲಿಯೇ ರಾಹುಲ್ ಕ್ಲೀನ್ ಬೋಲ್ಡ್ ಆಗಿದ್ದರು. ಆದರೆ, ಕೆಎಲ್ ರಾಹುಲ್ ಔಟ್ ಆಗುತ್ತಾ ಇದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಆನ್ ಫೀಲ್ಡ್ ಅಂಪೈರ್ ಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.  ಕಾರಣ ನೋಬಾಲ್..

ಕೆಎಲ್ ರಾಹುಲ್ ರನ್ನು ಔಟ್ ಮಾಡಲು ಶಾಹೀನ್ ಅಫ್ರಿದಿ ಎಸೆದ ಎಸೆತ ನೋಬಾಲ್ ಆಗಿತ್ತು ಎಂದು ಹೇಳಲಾಗಿದೆ. ಆ ಎಸೆತವನ್ನು ಎಸೆದ ಶಾಹೀನ್ ಅಫ್ರಿದಿ ತಮ್ಮ ಕಾಲನ್ನು ಸಂಪೂರ್ಣವಾಗಿ ಕ್ರೀಸ್‌ನಿಂದ ಹೊರಹಾಕಿದ್ದರು. ಆದರೂ ಸಹ ಅದನ್ನು ತೀರ್ಪುಗಾರರು ಗಮನಿಸದೇ ಔಟ್ ಕೊಟ್ಟಿದ್ದು ಸರಿಯಲ್ಲ ಎಂದು ಟ್ವಿಟ್ಟರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಲ್ಲದೆ ಈ ಸಂಬಂಧ ಫೋಟೋಗಳನ್ನು ಕೂಡ ಅಪ್ಲೋಡ್ ಮಾಡಿದ್ದು, ಈ ಫೋಟೋಗಳು ವೈರಲ್ ಆಗುತ್ತಿವೆ.
 

SCROLL FOR NEXT