ಹೈದರಾಬಾದ್ ತಂಡಕ್ಕೆ 8 ವಿಕೆಟ್ ಗಳ ಗೆಲುವು 
ಕ್ರಿಕೆಟ್

ಐಪಿಎಲ್ 2023: ಪಂಜಾಬ್ ವಿರುದ್ಧ ಹೈದರಾಬಾದ್ ತಂಡಕ್ಕೆ 8 ವಿಕೆಟ್ ಗೆಲುವು

ಹೈದರಾಬಾದ್ ನಲ್ಲಿ ನಡೆದ ಪಂಜಾಬ್- ಹೈದರಾಬಾದ್ ತಂಡಗಳ ನಡುವಿನ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ 8 ವಿಕೆಟ್ ಗಳ ಗೆಲುವು ಸಾಧಿಸಿದೆ. 

ಹೈದರಾಬಾದ್: ಹೈದರಾಬಾದ್ ನಲ್ಲಿ ನಡೆದ ಪಂಜಾಬ್- ಹೈದರಾಬಾದ್ ತಂಡಗಳ ನಡುವಿನ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ 8 ವಿಕೆಟ್ ಗಳ ಗೆಲುವು ಸಾಧಿಸಿದೆ. 

ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಸನ್ ರೈಸರ್ಸ್ ತಂಡ ಪಂಜಾಬ್ ತಂಡವನ್ನು ನಿಗದಿತ 20 ಓವರ್ ಗಳಲ್ಲಿ 143 ರನ್ ಗಳಿಗೆ ಕಟ್ಟಿ ಹಾಕಿತು.  ಶಿಖರ್ ಧವನ್ (66 ಎಸೆತಗಳಲ್ಲಿ 99) ಏಕಾಂಗಿ ಹೋರಾಟದ ಪರಿಣಾಮವಾಗಿ  ಪಂಜಾಬ್ ತಂಡ 143 ರನ್ ಗಳಿಸಲು ಸಾಧ್ಯವಾಯಿತು. ಧವನ್ ಹೊರತುಪಡಿಸಿದರೆ ಸ್ಯಾಮ್ ಕರ್ರನ್ 22 ರನ್ ಗಳನ್ನು ಗಳಿಸಿದ್ದು ಹೊರತುಪಡಿಸಿದರೆ ಬಹುತೇಕ ಉಳಿದ ಎಲ್ಲಾ ಬ್ಯಾಟ್ಸ್ ಮನ್ ಗಳೂ 2 ಅಂಕಿ ರನ್ ಗಳಿಸಲು ಸಾಧ್ಯವಾಗದೇ ವಿಫಲರಾದರು. 

ಹೈದರಾಬಾದ್ ತಂಡದ ಪರ ಮಯಾಂಕ್ ಮಾರ್ಕಾಂಡೆ 15 ರನ್ ನೀಡಿ 4 ವಿಕೆಟ್ ಗಳಿಸಿ ಅತ್ಯುತ್ತಮ ಬೌಲರ್ ಎನಿಸಿದರು. ಉಮ್ರನ್ ಮಲೀಕ್ 32 ರನ್ ನೀಡಿ 2 ವಿಕೆಟ್ ಗಳಿಸಿದರೆ, ಭುವನೇಶ್ವರ್ ಕುಮಾರ್ 33 ರನ್ ನೀಡಿ 1 ವಿಕೆಟ್, ಮಾರ್ಕೊ ಜಾನ್ಸೆನ್ 16 ರನ್ ನೀಡಿ 2 ವಿಕೆಟ್ ಗಳಿಸಿದರು. 

ಪಂಜಾಬ್ ನೀಡಿದ ಗುರಿ ಬೆನ್ನತ್ತಿದ ಹೈದರಾಬಾದ್ ತಂಡಕ್ಕೆ ಆರಂಭದಲ್ಲೇ ಹ್ಯಾರಿ ಬ್ರೂಕ್ (14 ಎಸೆತಗಳಲ್ಲಿ 13 ರನ್) ವಿಕೆಟ್ ಉರುಳಿದ್ದು ಅಘಾತ ಉಂಟುಮಾಡಿತ್ತು.  ಮತ್ತೋರ್ವ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ 20 ಎಸೆತಗಳಲ್ಲಿ 21 ರನ್ ಗಳಿಸಿದರೆ, ರಾಹುಲ್ ತ್ರಿಪಾಟಿ 48 ಎಸೆತಗಳಲ್ಲಿ 74 ರನ್ ಗಳಿಸಿ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ಶಿಖರ್ ಧವನ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು. ಈ ಐಪಿಎಲ್ ಸೀಸನ್ ನಲ್ಲಿ ಹೈದರಾಬಾದ್ ತಂಡದ ಮೊದಲ ಗೆಲುವು ಇದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಉಕ್ರೇನ್ ವಿರುದ್ಧ ರಷ್ಯಾದ ದೀರ್ಘ ಸಂಘರ್ಷಕ್ಕೆ ಭಾರತವೇ ಕಾರಣ, ಇದು 'ಮೋದಿ ಯುದ್ಧ': White House ವ್ಯಾಪಾರ ಸಲಹೆಗಾರ ಪೀಟರ್ ನವರೊ

ಚಾಮುಂಡೇಶ್ವರಿ ದೇವಿ ಸುತ್ತ ನಡೆಯುತ್ತಿರುವ ರಾಜಕೀಯ ತೀವ್ರ ಬೇಸರ ತರಿಸಿದೆ: ಪ್ರಮೋದಾದೇವಿ ಒಡೆಯರ್

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

Minneapolis Shooter: 'Trump ಸಾವು.. ಭಾರತ ಸರ್ವನಾಶ': ಅಮೆರಿಕ ದಾಳಿಕೋರನ ಬಂದೂಕಿನ ಮೇಲೆ ಶಾಕಿಂಗ್ ಬರಹ!

Anchor Anushree Marriage: ರೋಷನ್ ಜೊತೆ ಸಪ್ತಪದಿ ತುಳಿದ ಆ್ಯಂಕರ್ ಅನುಶ್ರೀ

SCROLL FOR NEXT