ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ 
ಕ್ರಿಕೆಟ್

ಅಕ್ಟೋಬರ್ 5ರಿಂದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಆರಂಭ; ನವೆಂಬರ್ 19ರಂದು ಅಹ್ಮದಾಬಾದ್ ನಲ್ಲಿ ಫೈನಲ್ ಪಂದ್ಯ

ಭಾರತ ಆತಿಥ್ಯ ವಹಿಸಿರುವ ಐಸಿಸಿ ಏಕದಿನ ಕ್ರಿಕೆಟ್​ ವಿಶ್ವ ಕಪ್​ (World Cup 2023) ಟೂರ್ನಿ ಮುಂಬರುವ ಅಕ್ಟೋಬರ್​ 5ರಿಂದ ಆರಂಭಗೊಂಡು ನವೆಂಬರ್​ 19ರವರೆಗೆ ನಡೆಯಲಿದ್ದು, ಅಹ್ಮದಾಬಾದ್ ನಲ್ಲಿ ನವೆಂಬರ್ 19ರಂದು ಫೈನಲ್ ಪಂದ್ಯ ನಡೆಯಲಿದೆ ಎಂದು ಇಎಸ್​ಪಿಎನ್​ ಕ್ರಿಕ್​ ಇನ್ಫೋ ವರದಿ ಮಾಡಿದೆ.

ಮುಂಬೈ: ಭಾರತ ಆತಿಥ್ಯ ವಹಿಸಿರುವ ಐಸಿಸಿ ಏಕದಿನ ಕ್ರಿಕೆಟ್​ ವಿಶ್ವ ಕಪ್​ (World Cup 2023) ಟೂರ್ನಿ ಮುಂಬರುವ ಅಕ್ಟೋಬರ್​ 5ರಿಂದ ಆರಂಭಗೊಂಡು ನವೆಂಬರ್​ 19ರವರೆಗೆ ನಡೆಯಲಿದ್ದು, ಅಹ್ಮದಾಬಾದ್ ನಲ್ಲಿ ನವೆಂಬರ್ 19ರಂದು ಫೈನಲ್ ಪಂದ್ಯ ನಡೆಯಲಿದೆ ಎಂದು ಇಎಸ್​ಪಿಎನ್​ ಕ್ರಿಕ್​ ಇನ್ಫೋ ವರದಿ ಮಾಡಿದೆ.

ಭಾರತದ ಆತಿಥ್ಯದಲ್ಲಿ ನಡೆಯಲಿರುವ ಏಕ ದಿನ ಕ್ರಿಕೆಟ್​ ವಿಶ್ವ ಕಪ್​ (World Cup 2023) ಅಕ್ಟೋಬರ್​ 2ರಿಂದ ಆರಂಭಗೊಂಡು ನವೆಂಬರ್​ 19ರವರೆಗೆ ನಡೆಯಲಿದೆ. ಬಿಸಿಸಿಐ ಪಂದ್ಯಗಳಿಗೆ ಆತಿಥ್ಯ ವಹಿಸಲಿರುವ 12 ನಗರಗಳ ಪಟ್ಟಿ ಸಿದ್ಧಗೊಳಿಸಿದ್ದು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ಫೈನಲ್ ಪಂದ್ಯ ನವೆಂಬರ್ 19ರಂದು ನಡೆಯಲಿದೆ. 

ಟೂರ್ನಿಯಲ್ಲಿ ಒಟ್ಟು 48 ಪಂದ್ಯಗಳು ನಡೆಯಲಿದ್ದು ಒಟ್ಟು 46 ದಿನಗಳ ಕಾಲ ವಿಶ್ವ ಕಪ್ ಆಯೋಜನೆಗೊಳ್ಳಲಿದೆ. ಬೆಂಗಳೂರು, ಚೆನ್ನೈ, ದೆಹಲಿ, ಧರ್ಮಶಾಲಾ, ಗುವಾಹಟಿ, ಹೈದರಾಬಾದ್, ಕೋಲ್ಕತ್ತಾ, ಲಕ್ನೋ, ಇಂದೋರ್, ರಾಜ್‌ಕೋಟ್ ಮತ್ತು ಮುಂಬೈ ಪಂದ್ಯಗಳು ಆಯೋಜನೆಗೊಳ್ಳಲಿರುವ ಇತರ ನಗರಗಳಾಗಿವೆ.  ಆದರೆ, ಯಾವ ಪಂದ್ಯಗಳು ಎಲ್ಲಿ ನಡೆಯುತ್ತವೆ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಅದೇ ರೀತಿ ಕೆಲವು ನಗರಗಳಲ್ಲಿ ಅಭ್ಯಾಸ ಪಂದ್ಯಗಳನ್ನೂ ಆಯೋಜಿಸಲಾಗಿದೆ. ಭಾರತದ ನಾನಾ ನಗರಗಳಲ್ಲಿ ಮಳೆ ಬರುವ ಪರಿಸ್ಥಿತಿಯನ್ನು ಅವಲೋಕಿಸಿಕೊಂಡು ವೇಳಾಪಟ್ಟಿಯನ್ನು ಸಿದ್ಧಪಡಿಸುವುದು ಬಿಸಿಸಿಐ ಉದ್ದೇಶವಾಗಿದೆ.

ಸಾಮಾನ್ಯವಾಗಿ ಐಸಿಸಿ ವಿಶ್ವಕಪ್ ವೇಳಾಪಟ್ಟಿಯನ್ನು ಕನಿಷ್ಠ ಒಂದು ವರ್ಷ ಮುಂಚಿತವಾಗಿ ಪ್ರಕಟಿಸುತ್ತದೆ. ಆದರೆ ಈ ಬಾರಿ ಬಿಸಿಸಿಐ ಭಾರತ ಸರ್ಕಾರದಿಂದ ಅಗತ್ಯ ಅನುಮತಿಗಳನ್ನು ಪಡೆಯಬೇಕಾಗಿದೆ. ಪಂದ್ಯಾವಳಿಗೆ ತೆರಿಗೆ ವಿನಾಯಿತಿ ನೀಡುವುದು ಮತ್ತು ಪಾಕಿಸ್ತಾನ ತಂಡಕ್ಕೆ ವೀಸಾ ಕ್ಲಿಯರೆನ್ಸ್ ನೀಡುವುದು ಬಾಕಿ ಉಳಿದಿರುವ ಸಮಸ್ಯೆಗಳಾಗಿವೆ. ಕಳೆದ ವಾರಾಂತ್ಯದಲ್ಲಿ ದುಬೈನಲ್ಲಿ ನಡೆದ ಐಸಿಸಿಯ ತ್ರೈಮಾಸಿಕ ಸಭೆ ನಡೆದಿದೆ. ಅದರಲ್ಲಿ ಪಾಕಿಸ್ತಾನ ತಂಡಕ್ಕೆ ಭಾರತ ಸರ್ಕಾರದಿಂದ ವೀಸಾ ಕೊಡಿಸುವ ಭರವಸೆಯನ್ನು ಬಿಸಿಸಿಐ ಕೊಟ್ಟಿದೆ.

2016ರ ಟಿ20 ವಿಶ್ವ ಕಪ್​ ಹಾಗೂ 2018ರ ಚಾಂಪಿಯನ್ಸ್ ಟ್ರೋಫಿ ಭಾರತದಲ್ಲಿ ಆತಿಥ್ಯದಲ್ಲಿ ನಡೆದಿತ್ತು. 2021ರ ಟಿ20 ವಿಶ್ವ ಕಪ್​ ಭಾರತಕ್ಕೆ ಸಿಕ್ಕಿದ್ದರೂ ಕೊರೊನಾ ಕಾರಣಕ್ಕೆ ಅದನ್ನು ಯುಎಇನಲ್ಲಿ ನಡೆಸಲಾಗಿತ್ತು.

ಏನಿದು ಟ್ಯಾಕ್ಸ್ ಸಮಸ್ಯೆ?
ಐಸಿಸಿ ಆತಿಥ್ಯದ ಒಪ್ಪಂದದ ಪ್ರಕಾರ ಆತಿಥೇಯ ಕ್ರಿಕೆಟ್ ಸಂಸ್ಥೆ ಅಲ್ಲಿನ ಸರಕಾರದಿಂದ ತೆರಿಗೆ ವಿನಾಯಿತಿಯನ್ನು ಕೊಡಿಸಬೇಕು. ಅದರಂತೆ ಹಾಲಿ ಆವೃತ್ತಿಯ ವಿಶ್ವ ಕಪ್​ನಲ್ಲಿ ಐಸಿಸಿ 43 ಕೋಟಿ ರೂಪಾಯಿ ಆದಾಯ ಪಡೆಯಲಿದೆ. ಅದಕ್ಕೆ ಭಾರತದಲ್ಲಿ ಸುಮಾರು ಶೇಕಡಾ 20ರಷ್ಟು ತೆರಿಗೆಯಿದೆ. ಆ ವಿನಾಯಿತಿಯನ್ನು ಬಿಸಿಸಿಐ ಕೊಡಿಸಬೇಕಾಗಿದೆ. ಒಂದು ವೇಳೆ ಕೊಡದೇ ಹೋದರೆ ಆತಿಥೇಯರಿಗೆ ನೀಡಬೇಕಾದ ಲಾಭಾಂಶದಲ್ಲಿ ಕಡಿತ ಮಾಡಲಾಗುತ್ತದೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

IPL 2026: MI vs RCB; ವಾಂಖೆಡೆ ಕ್ರೀಡಾಂಗಣದಲ್ಲಿ ಇತಿಹಾಸ ಬರೆದ ಬೆಂಗಳೂರು, ಅತ್ಯಧಿಕ ಮೊತ್ತ!

ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

SCROLL FOR NEXT