ಏಷ್ಯಾ ಕಪ್ 2023: ಪಾಕಿಸ್ತಾನ ವಿರುದ್ದ ಶ್ರೀಲಂಕಾಗೆ ವಿರೋಚಿತ ಜಯ, ಫೈನಲ್ ಗೆ ಲಗ್ಗೆ
ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ ಹಂತದ ನಿರ್ಣಾಯಕ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ದ ಶ್ರೀಲಂಕಾ ತಂಡ ವಿರೋಚಿತ ಗೆಲುವು ಸಾಧಿಸಿದ್ದು, ಟೂರ್ನಿಯ ಫೈನಲ್ ತಲುಪಿದೆ.
ಕೊಲಂಬೋ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ ಹಂತದ ನಿರ್ಣಾಯಕ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ದ ಶ್ರೀಲಂಕಾ ತಂಡ ವಿರೋಚಿತ ಗೆಲುವು ಸಾಧಿಸಿದ್ದು, ಟೂರ್ನಿಯ ಫೈನಲ್ ತಲುಪಿದೆ.
ಪಾಕಿಸ್ತಾನ ನೀಡಿದ 252ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಶ್ರೀಲಂಕಾ ತಂಡ ಕುಶಾಲ್ ಮೆಂಡಿಸ್ (91 ರನ್), ಸಮರ ವಿಕ್ರಮ (48ರನ್) ಮತ್ತು ಚರಿತ್ ಅಸಲಂಕಾ (49ರನ್) ರ ಅಮೋಘ ಬ್ಯಾಟಿಂಗ್ ನೆರವಿನಿಂದ 8 ವಿಕೆಟ್ ನಷ್ಟಕ್ಕೆ 252ರನ್ ಗಳಿಸಿ 2 ವಿಕೆಟ್ ಅಂತರದ ವಿರೋಚಿತ ಗೆಲುವು ಸಾಧಿಸಿತು.
ಪಾಕಿಸ್ತಾನ ಇನ್ನೇನು ಗೆದ್ದೇ ಬಿಟ್ಟಿತು ಎನ್ನುಲಾಗಲೇ ಪಂದ್ಯದ ಕೊನೆಯ ಹಂತದಲ್ಲಿ ಬೌಂಡರಿ ಗಿಟ್ಟಿಸಿದ ಅಸಲಂಕಾ ಕೊನೆಯ ಎಸೆತದಲ್ಲಿ 2 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಆ ಮೂಲಕ ಶ್ರೀಲಂಕಾ ತಂಡ 12ನೇ ಬಾರಿಗೆ ಏಷ್ಯಾಕಪ್ ಫೈನಲ್ ಗೇರುವಂತೆ ಮಾಡಿದರು.
ಈ ಗೆಲುವಿನ ಮೂಲಕ ಶ್ರೀಲಂಕಾ ಟೂರ್ನಿಯ ಫೈನಲ್ ಗೇರಿದ್ದು, ಫೈನಲ್ ನಲ್ಲಿ ಪ್ರಶಸ್ತಿಗಾಗಿ ಭಾರತದೊಂದಿಗೆ ಸೆಣಸಲಿದೆ.
ಪಾಕಿಸ್ತಾನ ಪರ ಇಫ್ತಿಕಾರ್ ಅಹ್ಮದ್ 3 ವಿಕೆಟ್ ಪಡೆದರೆ, ಶಾಹೀನ್ ಅಫ್ರಿದಿ 2 ಮತ್ತು ಶದಾಬ್ ಖಾನ್ 1 ವಿಕೆಟ್ ಪಡೆದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.