ಭಾರತ ಕ್ರಿಕೆಟ್ ತಂಡ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಎಂಎಸ್ ಧೋನಿ (MS Dhoni) ಶೀಘ್ರವೇ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.
ಎಂಎಸ್ ಧೋನಿಗೆ ಸ್ನಾಯುಗಳಿಗೆ ಸಂಬಂಧಿಸಿದ ಗಾಯವಾಗಿದ್ದು, ಚಿಕಿತ್ಸೆಗಾಗಿ ಲಂಡನ್ ಗೆ ತೆರಳಲಿದ್ದಾರೆ ಎಂದು ಸಿಎಸ್ ಕೆ (CSK) ಮೂಲಗಳು ತಿಳಿಸಿವೆ. ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡ ಬಳಿಕ ಧೋನಿ ಐಪಿಎಲ್ ನಿವೃತ್ತಿಯ ಬಗ್ಗೆ ನಿರ್ಧರಿಸಲಿದ್ದಾರೆ.
IPL2024 ಆವೃತ್ತಿಯಲ್ಲಿ ಸಿಎಸ್ ಕೆ ಆರ್ ಸಿಬಿ ವಿರುದ್ಧ ಸೋಲುಕಂಡು ಪ್ಲೇ ಆಫ್ ನಿಂದ ಹೊರಗೆ ಉಳಿದಿದೆ. 5 ಬಾರಿ ಚಾಂಪಿಯನ್ ಆಗಿರುವ ತಂಡ ಇದು ಮೂರನೇ ಬಾರಿಗೆ ಪ್ಲೇ ಆಫ್ ನಿಂದ ಹೊರಬಿದ್ದಿದೆ. ಎಂಎಸ್ ಧೋನಿ ಚೇತರಿಸಿಕೊಳ್ಳುವುದಕ್ಕೆ ಕನಿಷ್ಟ 5-6 ತಿಂಗಳು ಅಗತ್ಯವಿದೆ ಎಂದು ತಂಡದ ಮೂಲಗಳು ತಿಳಿಸಿವೆ.
ಸಿಎಸ್ ಕೆ ಪ್ಲೇ ಆಫ್ ನಿಂದ ಹೊರಗೆ ಉಳಿಯುತ್ತಿದ್ದಂತೆಯೇ ಈ ಐಪಿಎಲ್ ಸೀಸನ್ ತಂಡದ ಪರ ಧೋನಿಯ ಅಂತಿಮ ಪಂದ್ಯವಾಗಲಿದೆ ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ ಎಂಎಸ್ ಧೋನಿ ನಿವೃತ್ತಿಯ ನಿರ್ಧಾರವನ್ನು ಪ್ರಕಟಿಸಿಲ್ಲ. ಭಾನುವಾರದ ಪಂದ್ಯದ ನಂತರ ಮನೆಗೆ ಮರಳಿದ್ದಾರೆ.