ಕೆಎಲ್ ರಾಹುಲ್ 
ಕ್ರಿಕೆಟ್

IPL 2025 Auction: ಆರ್ ಸಿಬಿ ಅಭಿಮಾನಿಗಳಿಗೆ ನಿರಾಸೆ, 14 ಕೋಟಿಗೆ ಕೆ.ಎಲ್ ರಾಹುಲ್ ಡೆಲ್ಲಿ ಪಾಲು!

ಮೊದಲ ದಿನದ ಹರಾಜು ಪ್ರಕ್ರಿಯೆಯಲ್ಲಿ ಕಳೆದ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದ ಕನ್ನಡಿಗ ಕೆ.ಎಲ್. ರಾಹುಲ್ ಅವರನ್ನು ಖರೀದಿಸಲು ಲಕ್ನೋ ಪ್ರಾಂಚೈಸಿ ಮುಂದಾಗಲಿಲ್ಲ.

ಜಿದ್ದಾ: ಸೌದಿ ಅರಬೀಯಾದ ಜಿದ್ದಾದಲ್ಲಿ IPL 2025 ಆಟಗಾರರ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಕನ್ನಡಿಗ ಕೆ.ಎಲ್. ರಾಹುಲ್ 14 ಕೋಟಿ ರೂ.ಗೆ ಡೆಲ್ಲಿ ಪಾಲಾಗಿದ್ದಾರೆ.

ಮೊದಲ ದಿನದ ಹರಾಜು ಪ್ರಕ್ರಿಯೆಯಲ್ಲಿ ಕಳೆದ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದ ಕನ್ನಡಿಗ ಕೆ.ಎಲ್. ರಾಹುಲ್ ಅವರನ್ನು ಖರೀದಿಸಲು ಲಕ್ನೋ ಪ್ರಾಂಚೈಸಿ ಮುಂದಾಗಲಿಲ್ಲ. ಕಳೆದ ಬಾರಿ ಲಕ್ನೋ ತಂಡದ ಮಾಲೀಕರೊಂದಿಗಿನ ಮಾತಿನ ಚಕಮಕಿಯಿಂದ ಕೆ. ಆರ್. ರಾಹುಲ್ RCB ಗೆ ಬರಬೇಕೆಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟ್ ಮಾಡುತ್ತಿದ್ದರು.

ಆದರೆ, ಐಪಿಎಲ್ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅವರನ್ನು 14 ನೀಡಿ ಖರೀದಿಸಿರುವುದರಿಂದ RCB ಅಭಿಮಾನಿಗಳಿಗೆ ನಿರಾಸೆ ಆಗಿದೆ.

ಕಳೆದ ಬಾರಿ ತಂಡ ಮುನ್ನಡೆಸಿದ್ದ ರಿಷಭ್ ಪಂತ್ ಅವರನ್ನು ಬಿಡುಗಡೆ ಮಾಡಿದ್ದ ಡೆಲ್ಲಿ, ಈ ಬಾರಿ ರಾಹುಲ್ ಗೆ ನಾಯಕತ್ವದ ಹೊಣೆ ನೀಡುವ ಸಾಧ್ಯತೆಯಿದೆ. ರೂ.2 ಕೋಟಿ ಮುಖ ಬೆಲೆ ಹೊಂದಿದ್ದ ರಾಹುಲ್ ಅವರನ್ನು ಖರೀದಿಸಲು RCB ಹಾಗೂ KKR ಆರಂಭದಲ್ಲಿ ಉತ್ಸಾಹ ತೋರಿದವು. ಆದರೆ, ಅಂತಿಮವಾಗಿ ಅವರನ್ನು ಡೆಲ್ಲಿ ತನ್ನ ಪ್ರಾಂಚೈಸಿಗೆ ಸೇರಿಸಿಕೊಂಡಿತು. ರಿಷಭ್ ಪಂತ್ ಈ ಬಾರಿ ಅತಿ ಹೆಚ್ಚಿನ ಮೊತ್ತ ರೂ. 27 ಕೋಟಿಗೆ ಲಖನೌ ಸೂಪರ್ ಜೈಂಟ್ಸ್ ಪ್ರಾಂಚೈಸಿ ಖರೀದಿಸಿದೆ.

ಉಳಿದಂತೆ ಆರ್ ಸಿಬಿಯ ಮೊಹಮ್ಮದ್ ಸಿರಾಜ್ 12. 25 ಕೋಟಿಗೆ ಗುಜರಾತ್ ಟೈಟನ್ಸ್ ಪಾಲಾಗಿದ್ದಾರೆ. ಲಿಯಾಮ್ ಲಿವಿಂಗ್ ಸ್ಟೋನ್ ರೂ. 8.75 ಕೋಟಿಗೆ RCB ಖರೀದಿಸಿದೆ. ಯಜುವೇಂದ್ರ ಚಾಹಲ್ ಅವರನ್ನು ರೂ.18 ಕೋಟಿಗೆ ಪಂಜಾಬ್ ಕಿಂಗ್ಸ್ ಖರೀದಿಸಿದೆ. ಡೇವಿಡ್ ಮಿಲ್ಲರ್ ಅವರು ರೂ. 7.5 ಕೋಟಿಗೆ ಲಖನೌ ಸೂಪರ್ ಜೈಂಟ್ಸ್ ಖರೀದಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ರಾಜ್ಯಕ್ಕೆ 3,705 ಕೋಟಿ ರೂ. ತೆರಿಗೆ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ..!

ಪೇಸ್‌ಮೇಕರ್‌ ಅಳವಡಿಕೆ ಯಶಸ್ವಿ: ಮಲ್ಲಿಕಾರ್ಜುನ ಖರ್ಗೆ ಆರೋಗ್ಯ ಸ್ಥಿರ, ಆಸ್ಪತ್ರೆಯಿಂದ ಡಿಸ್‌ಚಾರ್ಜ್

Karur stampede: ನಟ ಮತ್ತು ಟಿವಿಕೆ ಅಧ್ಯಕ್ಷ ವಿಜಯ್ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ

Karnataka Rains- ಬೆಂಗಳೂರು ಸೇರಿ ರಾಜ್ಯಾದ್ಯಂತ ಅ.9ರವರೆಗೆ ಮಳೆ

ರಾಹುಲ್ ಒಬ್ಬಂಟಿ ಅಲ್ಲ, ಅವರೊಂದಿಗೆ ಕೋಟ್ಯಾಂತರ ಕಾರ್ಯಕರ್ತರಿದ್ದಾರೆಂಬುದನ್ನು ಕೊಲೆಗಡುಕ ಮನಸ್ಸುಗಳಿಗೆ ತಿಳಿದಿರಲಿ: BJPಗೆ ಸಿಎಂ ಸಿದ್ದರಾಮಯ್ಯ

SCROLL FOR NEXT