ಭಾರತ ತಂಡದ ಬ್ಯಾಟಿಂಗ್ 
ಕ್ರಿಕೆಟ್

2nd T20I: ಭಾರತ ಸ್ಫೋಟಕ ಬ್ಯಾಟಿಂಗ್, ಬಾಂಗ್ಲಾದೇಶ ವಿರುದ್ಧ ಹಲವು ದಾಖಲೆ ನಿರ್ಮಾಣ

ಬಾಂಗ್ಲಾದೇಶ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ ತಂಡ ಬಾಂಗ್ಲಾದೇಶಕ್ಕೆ ಗೆಲ್ಲಲು ಬೃಹತ್ ಗುರಿ ನೀಡಿದ್ದು, ಹಲವು ದಾಖಲೆಗಳ ನಿರ್ಮಾಣವಾಗಿದೆ.

ನವದೆಹಲಿ: ಬಾಂಗ್ಲಾದೇಶ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ ತಂಡ ಬಾಂಗ್ಲಾದೇಶಕ್ಕೆ ಗೆಲ್ಲಲು ಬೃಹತ್ ಗುರಿ ನೀಡಿದ್ದು, ಹಲವು ದಾಖಲೆಗಳ ನಿರ್ಮಾಣವಾಗಿದೆ.

ಹೌದು.. ಇಂದು ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಟಿ20 ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡ ನಿಗಧಿತ 20 ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 221ರನ್ ಪೇರಿಸಿದೆ.

ಭಾರತ ಪರ ನಿತೀಶ್ ರೆಡ್ಡಿ (74 ರನ್) ಮತ್ತು ರಿಂಕು ಸಿಂಗ್ (53 ರನ್) ಸ್ಫೋಟಕ ಅರ್ಧಶತಕ ಗಳಿಸಿದರೆ, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕೇವಲ 19 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 2 ಬೌಂಡರಿಗಳ ನೆರವಿನಿಂದ 32 ರನ್ ಪೇರಿಸಿದರು. ಈ ಮೂಲಕ ಭಾರಕದ ಬೃಹತ್ ಮೊತ್ತಕ್ಕೆ ಕಾರಣರಾದರು.

ಇನ್ನು ಈ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ತಂಡ ಹಲವು ದಾಖಲೆಗಳನ್ನು ನಿರ್ಮಿಸಿದೆ.

ಬಾಂಗ್ಲಾದೇಶ ವಿರುದ್ಧ ಗರಿಷ್ಠ ಸಿಕ್ಸರ್

ಇಂದಿನ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶ ಬೌಲರ್ ಗಳ ವಿರುದ್ಧ ಅಕ್ಷರಶಃ ಸವಾರಿ ಮಾಡಿದ್ದು, ಬರೊಬ್ಬರಿ 15 ಸಿಕ್ಸರ್ ಗಳು ಹರಿದುಬಂದಿವೆ. ಈ ಪೈಕಿ ಭಾರತದ ನಿತೀಶ್ ರೆಡ್ಡಿ 7, ರಿಂಕು ಸಿಂಗ್ ಮೂರು, ಹಾರ್ದಿಕ್ ಪಾಂಡ್ಯಾ ಮತ್ತು ರಿಯಾನ್ ಪರಾಗ್ ತಲಾ 2 ಸಿಕ್ಸರ್ ಸಿಡಿಸಿದ್ದಾರೆ. ಅಂತೆಯೇ ಅರ್ಶ್ ದೀಪ್ ಸಿಂಗ್ 1 ಸಿಕ್ಸರ್ ಸಿಡಿಸಿದ್ದಾರೆ.

Most sixes in a T20I vs Bangladesh

  • 15 by India Delhi 2024

  • 14 by WI Mirpur 2012

  • 13 by India North Sound 2024

ಗರಿಷ್ಟ ರನ್ ಕೊಟ್ಟ ಬಾಂಗ್ಲಾ ಸ್ಪಿನ್ನರ್ಸ್

ಇಂದಿನ ಪಂದ್ಯದಲ್ಲಿ ಬಾಂಗ್ಲಾದೇಶ ಸ್ಪಿನ್ನರ್ ಗಳು ಕಳಪೆ ಬೌಲಿಂಗ್ ಮಾಡಿದ್ದು, ಬರೊಬ್ಬರಿ 14.50 ಸರಾಸರಿಯಲ್ಲಿ 8 ಓವರ್ ನಲ್ಲಿ 116ರನ್ ಬಿಟ್ಟು ಕೊಟ್ಟಿದ್ದಾರೆ. ಇದು ಭಾರತದ ವಿರುದ್ಧ ಬಾಂಗ್ಲಾದೇಶ ಸ್ಪಿನ್ನರ್ ಗಳ ಕಳಪೆ ಪ್ರದರ್ಶನವಾಗಿದೆ.

14.50 (3/116 in 8 overs) - the worst ever ER for Bangladesh spinners in a T20 International (5+ overs)

ಬಾಂಗ್ಲಾ ವಿರುದ್ಧ 2ನೇ ಗರಿಷ್ಠ ಮೊತ್ತ

ಇನ್ನು ಇಂದು ಭಾರತ ತಂಡ ಗಳಿಸಿದ 221ರನ್ ಗಳಿಕೆ ಟಿ20ಯಲ್ಲಿ ಬಾಂಗ್ಲಾದೇಶ ವಿರುದ್ಧ ಬಂದ 2ನೇ ಗರಿಷ್ಠ ಮೊತ್ತವಾಗಿದೆ. ಈ ಹಿಂದೆ 2017ರಲ್ಲಿ ದಕ್ಷಿಣ ಆಫ್ರಿಕಾ ತಂಡ 224 ರನ್ ಗಳಿಸಿತ್ತು. ಇದು ಬಾಂಗ್ಲಾದೇಶ ವಿರುದ್ಧ ದಾಖಲಾದ ಗರಿಷ್ಠ ಮೊತ್ತವಾಗಿದೆ.

Highest T20I totals vs Bangladesh

  • 224/4 by SA Potchefstroom 2017

  • 221/9 by India Delhi 2024

  • 214/6 by SL Colombo RPS 2018

  • 210/4 by SL Sylhet 2018

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

SCROLL FOR NEXT