ಹೈದರಾಬಾದ್: ಬಾಂಗ್ಲಾದೇಶ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು ಭಾರತೀಯ ಬ್ಯಾಟರ್ ಗಳು ಬಾಂಗ್ಲಾ ಬೌಲರ್ ಗಳ ಬೆವರಿಳಿಸಿದ್ದಾರೆ.
ಹೈದರಾಬಾದ್ ನಲ್ಲಿ ನಡೆಯುತ್ತಿರುವ ಮೂರನೇ ಟಿ20 ಪಂದ್ಯದಲ್ಲಿ ಮೊದಲು ಭಾರತ ಬ್ಯಾಟಿಂಗ್ ಮಾಡಿತು. ಸಂಜು ಸ್ಯಾಮ್ಸನ್ ಮತ್ತು ಸೂರ್ಯಕುಮಾರ್ ಅಬ್ಬರ ಬ್ಯಾಟಿಂಗ್ ನಡೆಸಿದರು. ಸ್ಫೋಟಕ ಬ್ಯಾಟಿಂಗ್ ಮಾಡಿದ್ದ ಸ್ಯಾಮ್ಸನ್ 40 ಎಸೆತಗಳಲ್ಲಿ 100 ರನ್ ಪೇರಿಸಿ ವೇಗದ ಶತಕ ಸಿಡಿಸಿದರು. 8 ಸಿಕ್ಸ್ ಮತ್ತು 11 ಬೌಂಡರಿ ನೆರವಿನಿಂದ ಸ್ಯಾಮ್ಸನ್ 111 ರನ್ ಗಳಿಸಿ ಔಟಾದರು. ಇನ್ನು ಸೂರ್ಯಕುಮಾರ್ ಸಹ 23 ಎಸೆತಗಳಲ್ಲಿ 50 ರನ್ ಪೇರಿಸಿದರು. 5 ಸಿಕ್ಸರ್ 8 ಬೌಂಡರಿಗಳ ನೆರವಿನಿಂದ 35 ಎಸೆತಗಳಲ್ಲಿ 75 ರನ್ ಬಾರಿಸಿ ಔಟಾದರು.
ನಂತರ ಬಂದ ಹಾರ್ದಿಕ್ ಪಾಂಡ್ಯ ಸಹ ಸ್ಫೋಟಕ ಬ್ಯಾಟಿಂಗ್ ಮಾಡಿ 4 ಸಿಕ್ಸರ್ ಮತ್ತು 4 ಬೌಂಡರಿ ಸಿಡಿಸಿ 18 ಎಸೆತಗಳಲ್ಲಿ 47 ರನ್ ಬಾರಿಸಿ ಔಟಾದರು. ಇನ್ನು ರಿಯಾನ್ ಪರಾಗ್ 13 ಎಸೆತಗಳಲ್ಲಿ 34 ರನ್ ಸಿಡಿಸಿ ಔಟಾದರು. ಒಟ್ಟಾರೆ ನಿಗದಿತ ಓವರ್ ನಲ್ಲಿ ಭಾರತ 6 ವಿಕೆಟ್ ನಷ್ಟಕ್ಕೆ 297 ರನ್ ಬಾರಿಸಿದೆ. ಇದು ಟಿ20 ಕ್ರಿಕೆಟ್ ನಲ್ಲಿ ಭಾರತ ತಂಡ ಅತ್ಯಧಿಕ ಮೊತ್ತವಾಗಿದೆ.