ಮ್ಯಾಟ್ ಹೆನ್ರಿ 
ಕ್ರಿಕೆಟ್

1st Test: ಭಾರತದ ವಿರುದ್ಧ ಅದ್ಭುತ ಬೌಲಿಂಗ್, ದಾಖಲೆ ಬರೆದ ಕಿವೀಸ್ ವೇಗಿ Matt Henry; ಎಲೈಟ್ ಗ್ರೂಪ್ ಸೇರ್ಪಡೆ!

ರೋಹಿತ್ ಶರ್ಮಾ ಪಡೆಯನ್ನು ಕೇವಲ 46 ರನ್ ಗೆ ಕಟ್ಟಿಹಾಕಿದ ನ್ಯೂಜಿಲೆಂಡ್ ವೇಗಿ ಮ್ಯಾಟ್ ಹೆನ್ರಿ (Matt Henry) ಅಪರೂಪದ ದಾಖಲೆ ಬರೆದು ಎಲೈಟ್ ಗ್ರೂಪ್ ಸೇರ್ಪಡೆಯಾಗಿದ್ದಾರೆ.

ಬೆಂಗಳೂರು: ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಮೂಲಕ ರೋಹಿತ್ ಶರ್ಮಾ ಪಡೆಯನ್ನು ಕೇವಲ 46 ರನ್ ಗೆ ಕಟ್ಟಿಹಾಕಿದ ನ್ಯೂಜಿಲೆಂಡ್ ವೇಗಿ ಮ್ಯಾಟ್ ಹೆನ್ರಿ (Matt Henry) ಅಪರೂಪದ ದಾಖಲೆ ಬರೆದು ಎಲೈಟ್ ಗ್ರೂಪ್ ಸೇರ್ಪಡೆಯಾಗಿದ್ದಾರೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ಮ್ಯಾಟ್ ಹೆನ್ರಿ ಕೇವಲ 13.2 ಓವರ್ ಗಳನ್ನು ಎಸೆದು 3 ಮೇಡನ್ ನೊಂದಿಗೆ 15 ರನ್ ನೀಡಿ 5 ವಿಕೆಟ್ ಗಳನ್ನು ಕಬಳಿಸಿದರು.

ಆ ಮೂಲಕ ನ್ಯೂಜಿಲೆಂಡ್ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಕೀರ್ತಿಗೆ ಪಾತ್ರರಾದರು. ಅಂತೆಯೇ ತಮ್ಮ ಈ ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ ಮ್ಯಾಟ್ ಹೆನ್ರಿ ಅಪರೂಪದ ದಾಖಲೆ ಬರೆದು ಎಲೈಟ್ ಗ್ರೂಪ್ ಸೇರ್ಪಡೆಯಾಗಿದ್ದಾರೆ.

ಭಾರತದಲ್ಲಿ ಉತ್ತಮ ಪ್ರದರ್ಶನ

ಇನ್ನು ಭಾರತದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ 4ನೇ ವೇಗಿ ಎಂಬ ಕೀರ್ತಿಗೆ ಮ್ಯಾಟ್ ಹೆನ್ರಿ ಭಾಜನರಾಗಿದ್ದು, ಈ ಹಿಂದೆ 2012ರಲ್ಲಿ ಇದೇ ನ್ಯೂಜಿಲೆಂಡ್ ತಂಡದ ಟಿಮ್ ಸೌಥಿ 64 ರನ್ ಗೆ 7 ವಿಕೆಟ್ ಕಬಳಿಸಿದ್ದರು. ಇದು ಭಾರತ ನೆಲದಲ್ಲಿ ಬೌಲರ್ ಒಬ್ಬರ ಉತ್ತಮ ಪ್ರದರ್ಶನವಾಗಿದೆ. ಇದಕ್ಕೂ ಮೊದಲು 1999ರಲ್ಲಿ ಮೊಹಾಲಿಯಲ್ಲಿ ಇದೇ ನ್ಯೂಜಿಲೆಂಡ್ ನ ಡಿಯೋನ್ ನ್ಯಾಶ್ 27 ರನ್ ಗೆ 6 ವಿಕೆಟ್ ಪಡೆದಿದ್ದರು.

Best figure for New Zealand pacers in India

  • 7/64 - Tim Southee vs IND, Bengaluru, 2012

  • 6/27 - Dion Nash vs IND, Mohali, 1999

  • 6/49 - Richard Hadlee vs IND, Wankhede, 1988

  • 5/15 - Matt Henry vs IND, Bengaluru, 2024*

ವೇಗದ 100 ವಿಕೆಟ್

ಇದೇ ವೇಳೆ ಇಂದು ಬೆಂಗಳೂರಿನಲ್ಲಿ 5 ವಿಕೆಟ್ ಕಬಳಿಸುವ ಮೂಲಕ ಮ್ಯಾಟ್ ಹೆನ್ರಿ ತಮ್ಮ ವಿಕೆಟ್ ಗಳಿಕೆಯನ್ನು 100ಕ್ಕೆ ಏರಿಸಿಕೊಂಡಿದ್ದು ಮಾತ್ರವಲ್ಲದೇ ನ್ಯೂಜಿಲೆಂಡ್ ಪರ ವೇಗದ 100 ವಿಕೆಟ್ ಸಾಧನೆ ಮಾಡಿದ ಜಂಟಿ 2ನೇ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ.

ಮ್ಯಾಟ್ ಹೆನ್ರಿ 26 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದು ಇಷ್ಟೇ ಪಂದ್ಯಗಳಲ್ಲಿ ನೂರು ವಿಕೆಟ್ ಪಡೆದಿದ್ದ ನೀಲ್ ವ್ಯಾಗ್ನರ್ ರೊಂದಿಗೆ ಜಂಟಿ 2ನೇ ಸ್ಥಾನದಲ್ಲಿದ್ದಾರೆ. 25 ಪಂದ್ಯಗಳಲ್ಲಿ 100 ವಿಕೆಟ್ ಸಾಧನೆ ಮಾಡಿದ್ದ ರಿಚರ್ಡ್ ಹ್ಯಾಡ್ಲಿ ಅಗ್ರ ಸ್ಥಾನದಲ್ಲಿದ್ದಾರೆ.

Fastest to 100 Test wickets for New Zealand (matches)

  • 25 - Richard Hadlee

  • 26 - Neil Wagner

  • 26 - Matt Henry*

  • 27 - Bruce Taylor

ಅಂತೆಯೇ ಈ ಪಂದ್ಯದಲ್ಲಿ ಮ್ಯಾಟ್ ಹೆನ್ರಿ ಕೇವಲ 15ರನ್ ನೀಡಿ 5 ವಿಕೆಟ್ ಕಬಳಿಸಿ ನ್ಯೂಜಿಲೆಂಡ್ ತಂಡದ ಮೋಸ್ಟ್ ಎಕನಾಮಿಕ್ ಬೌಲರ್ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ.

- 5/15 by Matt Henry is the most economical five-wicket haul by a New Zealand bowler in Test cricket.

ವೇಗಿಗಳಿಗೆ ಎಲ್ಲ 10 ವಿಕೆಟ್

ಇನ್ನು ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಎಲ್ಲ ವಿಕೆಟ್ ಗಳೂ ನ್ಯೂಜಿಲೆಂಡ್ ತಂಡದ ವೇಗಿಗಳ ಪಾಲಾಗಿದೆ. ಈ ಪೈಕಿ ಟಿಮ್ ಸೌಥಿ 1, ಮ್ಯಾಟ್ ಹೆನ್ರಿ 5 ಮತ್ತು ವಿಲಿಯಂ ಓರೌರ್ಕೆ 4 ವಿಕೆಟ್ ಪಡೆದಿದ್ದಾರೆ. 2012ರಲ್ಲಿ ಇದೇ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ತಂಡದ ವಿರುದ್ಧ ನ್ಯೂಜಿಲೆಂಡ್ ವೇಗಿಗಳು ಇಂತಹುದೇ ಸಾಧನೆ ಮಾಡಿದ್ದರು.

Last two instances when visiting pacers took all 10 wickets against India in a Test innings

  • by New Zealand, Bengaluru 2012

  • by New Zealand, Bengaluru, 2024*

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

SCROLL FOR NEXT