ಚಿನ್ನಸ್ವಾಮಿ ಕ್ರೀಡಾಂಗಣ 
ಕ್ರಿಕೆಟ್

Bengaluru weather: ನಿರ್ಣಾಯಕ ಘಟ್ಟದಲ್ಲಿ 1st Test; 'ಮಳೆ'ರಾಯನ ಕೈಯಲ್ಲಿ New Zealand ಗೆಲುವಿನ ಭವಿಷ್ಯ, ಇಲ್ಲಿದೆ ನಾಳಿನ ಹವಾಮಾನ ವರದಿ!

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯ ಇದೀಗ ಬಹುತೇಕ ನ್ಯೂಜಿಲೆಂಡ್ ಪರ ವಾಲಿದೆ. ಅದ್ಭುತ ಬೌಲಿಂಗ್ ಪ್ರದರ್ಶನ ಬಂದರೆ ಮಾತ್ರ ಪಂದ್ಯದ ಮೇಲೆ ಭಾರತ ಹಿಡಿತ ಸಾಧಿಸಬಹುದು. ಆದರೆ ಮಳೆ ಬಿದ್ದರೆ...

ಬೆಂಗಳೂರು: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ನಿರ್ಣಾಯಕ ಘಟ್ಟ ತಲುಪಿದ್ದು, 2ನೇ ಇನ್ನಿಂಗ್ಸ್ ನಲ್ಲಿ ಭಾರತ 462 ರನ್ ಗಳಿಸಿ ಕಿವೀಸ್ ಗೆ ಗೆಲ್ಲಲು 107ರನ್ ಗಳ ಸಾಧಾರಣ ಗುರಿ ನೀಡಿದೆ. ನಾಳೆ ಮಳೆಯ ಪರಿಸ್ಥಿತಿ ಮೇಲೆ ಪಂದ್ಯದ ಫಲಿತಾಂಶ ನಿಂತಿದೆ.

ಹೌದು.. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯ ಕುತೂಹಲಕಾರಿ ಘಟ್ಟ ತಲುಪಿದ್ದು, 2ನೇ ಇನ್ನಿಂಗ್ಸ್ ನಲ್ಲಿ ಭಾರತ ತಂಡ ಭರ್ಜರಿ ಬ್ಯಾಟಿಂಗ್ ನಡೆಸಿದೆ.

ಆದರೂ ಭಾರತ ತಂಡದ ಮಧ್ಯಮ ಕ್ರಮಾಂಕದ ದಿಢೀರ್ ಕುಸಿತ ಪಂದ್ಯ ನ್ಯೂಜಿಲೆಂಡ್ ನತ್ತ ವಾಲುವಂತೆ ಮಾಡಿದ್ದು, ಪಂದ್ಯ ಇದೀಗ ಬಹುತೇಕ ನ್ಯೂಜಿಲೆಂಡ್ ಪರ ವಾಲಿದೆ. ಅದ್ಭುತ ಬೌಲಿಂಗ್ ಪ್ರದರ್ಶನ ಬಂದರೆ ಮಾತ್ರ ಪಂದ್ಯದ ಮೇಲೆ ಭಾರತ ಹಿಡಿತ ಸಾಧಿಸಬಹುದು.

ಆದರೆ ನ್ಯೂಜಿಲೆಂಡ್ ಪ್ರಬಲ ಬ್ಯಾಟಿಂಗ್ ಲೈನ್ ಅಪ್ ಎದುರು ಇದು ಕಷ್ಟಸಾಧ್ಯ ಎಂದು ಹೇಳಲಾಗುತ್ತಿದೆ.

ಕೈಕೊಟ್ಟ ಕೆಳ ಕ್ರಮಾಂಕ

ಭಾರತ ತಂಡದ ತಂಡದ ಕೆಳಕ್ರಮಾಂಕ ಸ್ವಲ್ಪ ಸಮಯ ನೆಲಕಚ್ಚಿ ಆಡಿದ್ದರೆ, ಕಿವೀಸ್​ಗೆ ಸಿಕ್ಕ ಟಾರ್ಗೆಟ್​ ಇನ್ನು ಹೆಚ್ಚಿರುತ್ತಿತ್ತು. ಆದರೆ ಕನ್ನಡಿಗ ರಾಹುಲ್, ರವೀಂದ್ರ ಜಡೇಜಾ ಹಾಗೂ ಅಶ್ವಿನ್ ಸರಿಯಾದ ಸಮಯದಲ್ಲಿ ತಂಡಕ್ಕೆ ಕೈಕೊಟ್ಟರು. ಈ ಮೂವರು ಆಟಗಾರರಿಂದ ತಂಡ ಬೆಟ್ಟದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿತ್ತು. ಆದರೆ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡ ಈ ಮೂವರು ತಂಡದೊಂದಿಗೆ ಅಭಿಮಾನಿಗಳಿಗೂ ಭಾರಿ ನಿರಾಸೆ ಮೂಡಿಸಿದರು.

'ಮಳೆ'ರಾಯನ ಕೈಯಲ್ಲಿ ಕಿವೀಸ್ ಗೆಲುವಿನ ಭವಿಷ್ಯ

ಇನ್ನು ಭಾರತ ನೀಡಿರುವ 107ರನ್ ಗಳ ಸಾಧಾರಣ ಗುರಿಯನ್ನು ಬೆನ್ನು ಹತ್ತಿರುವ ನ್ಯೂಜಿಲೆಂಡ್ ತಂಡಕ್ಕೆ ಮಳೆಯದ್ದೇ ದೊಡ್ಡ ಚಿಂತೆಯಾಗಿದ್ದು, ಇಂದೂ ಕೂಡ ಮಳೆಯಿಂದಾಗಿಯೇ ದಿನದಾಟವನ್ನು ಬೇಗನೇ ಮುಕ್ತಾಯಗೊಳಿಸಲಾಗಿದೆ. ನಾಳೆ ಕೂಡ ಬೆಂಗಳೂರಿನಲ್ಲಿ ಮಳೆ ಆರ್ಭಟ ಜೋರಾಗಿರಲಿದ್ದು, ನಾಳೆ ಮಳೆ ಬಂದು ಸಂಪೂರ್ಣ ದಿನದಾಟ ಸ್ಥಗಿತವಾದರೆ ಆಗ ಪಂದ್ಯ ಡ್ರಾದಲ್ಲಿ ಕೊನೆಯಾಗುತ್ತದೆ. ಹೀಗಾಗಿ ನ್ಯೂಜಿಲೆಂಡ್ ಕ್ರಿಕೆಟ್ ಅಭಿಮಾನಿಗಳು ಮಳೆ ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಭಾರತ ಕ್ರಿಕೆಟ್ ಅಭಿಮಾನಿಗಳು ಮಾತ್ರ ನಾಳೆ ಮಳೆ ಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ಇಷ್ಟಕ್ಕೂ ನಾಳೆ ಮಳೆ ಬರುತ್ತದೆಯೇ? ನಾಳಿನ ಹವಾಮಾನ ವರದಿ ಏನು ಹೇಳುತ್ತದೆ?

ಹವಾಮಾನ ಇಲಾಖೆ ವರದಿ ಪ್ರಕಾರ ನಾಳೆ ಅಂದರೆ ಭಾನುವಾರ ಬೆಂಗಳೂರಿನಲ್ಲಿ ಶೇ.90ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಆದರೆ ನಾಳೆ ಮಳೆ ಎಷ್ಟು ಹೊತ್ತು ಸುರಿಯುತ್ತದೆ ಎಂಬುದರ ಮೇಲೆ ಪಂದ್ಯದ ಫಲಿತಾಂಶ ಭವಿಷ್ಯ ನಿಂತಿದೆ. ಈ ಹಿಂದೆ ಪಂದ್ಯದ ಮೊದಲ ದಿನ ಇಡೀ ದಿನ ಮಳೆ ಸುರಿದ ಪರಿಣಾಮ ಆ ದಿನದಾಟ ಟಾಸ್ ಕೂಡ ಕಾಣದೇ ರದ್ದಾಗಿತ್ತು.

ಹೀಗಾಗಿ 2ನೇ ದಿನದಿಂದ ಪಂದ್ಯ ಆರಂಭವಾಗಿತ್ತು. ನಾಳೆ ಕೂಡ ಭರ್ಜರಿ ಮಳೆಯಾಗುವ ಸಾಧ್ಯತೆ ಇದ್ದು, ನಾಳೆ ಬೆಳಗ್ಗೆ ನಗರದಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಮಧ್ಯಾಹ್ನದ ಹೊತ್ತಿಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಅಂತೆಯೇ ಸಂಜೆ ವೇಳೆ ಭಾರಿ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ಹೇಳುತ್ತದೆ.

ಭಾರತ ನ್ಯೂಜಿಲೆಂಡ್ ಗೆ ಗೆಲ್ಲಲು ಕೇವಲ 107ರನ್ ಗಳ ಚಿಕ್ಕ ಗುರಿ ನೀಡಿದ್ದು, ಸವಾಲು ಚಿಕ್ಕದಿರುವುದರಿಂದ ನ್ಯೂಜಿಲೆಂಡ್ ಗೆ ಪಂದ್ಯ ಗೆಲ್ಲಲು ಒಂದೇ ಒಂದು ಸೆಷನ್ ಆಟದ ಸಮಯ ಸಿಕ್ಕರೂ ಅವರು ಗೆಲುವಿಗಾಗಿ ಪ್ರಯತ್ನಿಸಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ

'ನನ್ನ ಚೋಲಿ ಬಗ್ಗೆ 6 ಜನರಿಂದ ಪ್ಯಾನಲ್ ಡಿಸ್ಕಷನ್, ಸಂಸ್ಕೃತಿ ಬಟ್ಟೆಯಲ್ಲಲ್ಲ, ಹೃದಯದಲ್ಲಿದೆ': ರಾಖಿ ಜಾಹೀರಾತು ವಿವಾದ ಬಗ್ಗೆ ಮೌನ ಮುರಿದ ನಟಿ Kriti Sanon

ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್'ಗೆ ಕೊನೆಗೂ ಮುಹೂರ್ತ ಫಿಕ್ಸ್; ನಾಳೆಯೇ ಮೀಸಲಾತಿ ಪಟ್ಟಿ ಪ್ರಕಟ

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ