ರೋಹಿತ್ ಶರ್ಮಾ 
ಕ್ರಿಕೆಟ್

IPL 2025: ಸತತ ವೈಫಲ್ಯ; ರೋಹಿತ್ ಶರ್ಮಾ, ಧೋನಿ ಕುರಿತು ವ್ಯಾಪಕ ಟೀಕೆ!

3 ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ ಗಳಿಸಿರುವುದು ಕೇವಲ 21 ರನ್. ಹೀಗಾಗಿ ಸದ್ಯ ನಡೆಯುತ್ತಿರುವ ಐಪಿಎಲ್ ನಲ್ಲಿ ರೋಹಿತ್ ಶರ್ಮಾ ಅವರ ಕಳಪೆ ಫಾರ್ಮ್ ಬಗ್ಗೆ ಅಭಿಮಾನಿಗಳು ಹಾಗೂ ಪರಿಣಿತರು ತೀವ್ರವಾಗಿ ಟೀಕಿಸುತ್ತಿದ್ದಾರೆ.

ಮುಂಬೈ: ಸೋಮವಾರ ರಾತ್ರಿ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್- ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಐಪಿಎಲ್ 2025 ಪಂದ್ಯದಲ್ಲಿ ರೋಹಿತ್ ಶರ್ಮಾ 13 ರನ್ ಗಳಿಸಿ ಔಟಾಗುವ ಮೂಲಕ ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿದರು.

3 ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ ಗಳಿಸಿರುವುದು ಕೇವಲ 21 ರನ್. ಹೀಗಾಗಿ ಸದ್ಯ ನಡೆಯುತ್ತಿರುವ ಐಪಿಎಲ್ ನಲ್ಲಿ ರೋಹಿತ್ ಶರ್ಮಾ ಅವರ ಕಳಪೆ ಫಾರ್ಮ್ ಬಗ್ಗೆ ಅಭಿಮಾನಿಗಳು ಹಾಗೂ ಪರಿಣಿತರು ತೀವ್ರವಾಗಿ ಟೀಕಿಸುತ್ತಿದ್ದಾರೆ.

ಅವರು ಕ್ರೀಸ್‌ನಲ್ಲಿದ್ದ ಅಲ್ಪಾವಧಿಯಲ್ಲಿ ಒಂದು ಸಿಕ್ಸರ್ ಹೊಡೆದರು. ಆದರೆ ಅಂತಿಮವಾಗಿ ಆಂಡ್ರೆ ರಸೆಲ್ ಓವರ್ ನಲ್ಲಿ ಔಟಾದರು. ಅವರ ಫಾರ್ಮ್‌ ಬಗ್ಗೆ ಸಾಮಾಜಿಕ ಜಾಲತಾಣ ಬಳಕೆದಾರರು ತೀವ್ರವಾಗಿ ನಿರಾಸೆಗೊಂಡಿದ್ದು, MS ಧೋನಿಯೊಂದಿಗೆ ವ್ಯಾಪಕವಾಗಿ ಟೀಕಾ ಪ್ರಹಾರ ನಡೆಸುತ್ತಿದ್ದಾರೆ.

ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಅಶ್ವನಿ ಕುಮಾರ್ ದಾಖಲೆಯ ನಾಲ್ಕು ವಿಕೆಟ್ ಮತ್ತು ರಿಯಾನ್ ರಿಕಲ್ಟನ್ ಅವರ ಅಜೇಯ 62 ರನ್ ಗಳಿಂದ ಮುಂಬೈ ಇಂಡಿಯನ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಎಂಟು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಪಂಜಾಬ್‌ನ ಝಂಜೇರಿಯ 23 ವರ್ಷದ ಅಶ್ವನಿ ಐಪಿಎಲ್ ಚೊಚ್ಚಲ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ದೀಪಕ್ ಚಹರ್ 2, ಟ್ರೆಂಟ್ ಬೌಲ್ಟ್ 1 ಮತ್ತು ಹಾರ್ದಿಕ್ ಪಾಂಡ್ಯ 1 ವಿಕೆಟ್ ಪಡೆಯುವುದರೊಂದಿಗೆ ಕೆಕೆಆರ್ ತಂಡವನ್ನು 16.2 ಓವರ್ ಗಳಲ್ಲಿ ಕೇವಲ 116 ರನ್ ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ರೋಹಿತ್ ಶರ್ಮಾ (13) ರನ್ ಗಳಿಗೆ ಔಟಾದ ಬಳಿಕ ರಿಯಾನ್ ರಿಕೆಲ್ಟನ್ (41 ಎಸೆತಗಳಲ್ಲಿ ಅಜೇಯ 62), ಸೂರ್ಯ ಕುಮಾರ್ ಯಾದವ್ 9 ಎಸೆತಗಳಲ್ಲಿ ಅಜೇಯ 27 ರನ್ ಗಳಿಸುವುದರೊಂದಿಗೆ ಮುಂಬೈ ಇಂಡಿಯನ್ಸ್ ತಂಡ ಕೆಕೆಆರ್ ವಿರುದ್ಧ ಸುಲಭ ಗೆಲುವು ದಾಖಲಿಸಿತು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Minneapolis Shooting: ICE ಅಧಿಕಾರಿಗಳ ಗುಂಡೇಟಿಗೆ ಮತ್ತೊಬ್ಬ ವ್ಯಕ್ತಿ ಬಲಿ; ಜನರ ಆಕ್ರೋಶ, ಭುಗಿಲೆದ್ದ ಪ್ರತಿಭಟನೆ

ವಿದೇಶದಿಂದ ಕಪ್ಪು ಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಹಾಕ್ತೀವಿ ಅಂದರು. ಹಾಕಿದ್ರಾ?: BJP ವಿರುದ್ಧ ಸಿದ್ದರಾಮಯ್ಯ ಕಿಡಿ

ಬಡವರು ತಮ್ಮ ಹಕ್ಕುಗಳಿಗಾಗಿ ಹೋರಾಡದಿದ್ದರೆ ಹಿಟ್ಲರ್- ಮುಸೊಲಿನಿಯಂತವರು ದೇಶ ಆಳುತ್ತಾರೆ: ಮಲ್ಲಿಕಾರ್ಜುನ ಖರ್ಗೆ

'ಮದುವೆ ಮನೆಯಲ್ಲಿ ಬೇರೊಬ್ಬ ಮಹಿಳೆ ಜೊತೆ ಹಾಸಿಗೆಯಲ್ಲಿ ರೆಡ್​​ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಪಲಾಶ್: ಭಾರತೀಯ ಮಹಿಳಾ ಕ್ರಿಕೆಟಿಗರು ಆತನನ್ನು ಥಳಿಸಿದ್ದರು'

'ರೇವಣ್ಣ ಕುಟುಂಬ ಮುಗಿಸಲು SIT ಅಧಿಕಾರಿಗಳಿಗೆ ನಮ್ಮ ಎದುರಾಳಿಗಳಿಂದ ಉಡುಗೊರೆ: JDS ಎಲ್ಲಿದೆ ಎನ್ನುವವರಿಗೆ ಇಲ್ಲಿರುವ ಜನಸ್ತೋಮವೇ ಉತ್ತರ'

SCROLL FOR NEXT