ಧೋನಿ ಮ್ಯಾಜಿಕಲ್ ರನೌಟ್ 
ಕ್ರಿಕೆಟ್

Thala For Reason: 'ಯಪ್ಪಾ.. ಹಿಂಗೂ ರನೌಟ್ ಮಾಡ್ಬಹುದಾ'; LSG ವಿರುದ್ಧ CSK ನಾಯಕ MS Dhoni ರನೌಟ್ Video ವೈರಲ್

ಕಳೆದ ಕೆಲ ಪಂದ್ಯಗಳಲ್ಲಿ ಅದ್ಭುತ ಸ್ಟಂಪಿಂಗ್​ನೊಂದಿಗೆ ಗಮನ ಸೆಳೆದಿದ್ದ ಧೋನಿ, ಈ ಬಾರಿ ವಿಚಿತ್ರ ರೀತಿಯಲ್ಲಿ ರನೌಟ್ ಮಾಡಿ ಮತ್ತೆ ಅಭಿಮಾನಿಗಳು ಆಶ್ಚರ್ಯಚಕಿತರಾಗುವಂತೆ ಮಾಡಿದ್ದಾರೆ.

ಲಖನೌ: ಐಪಿಎಲ್ ಟೂರ್ನಿಯ ನಿನ್ನೆಯ ಎಲ್ ಸಿಜಿ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ವಿಚಿತ್ರ ರನೌಟ್ ಮಾಡಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದಾರೆ.

ಲಖನೌನ ಎಕಾನ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯದಲ್ಲಿ CSK ನಾಯಕ ಹಾಗೂ ವಿಕೆಟ್ ಕೀಪರ್ ವಿಚಿತ್ರ ರನೌಟ್ ಮಾಡಿದ್ದಾರೆ. ಹೌದು ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ 43 ವರ್ಷದ ಮಹೇಂದ್ರ ಸಿಂಗ್ ಧೋನಿ (MS Dhoni) ಅವರ ವಿಕೆಟ್ ಕೀಪಿಂಗ್ ಮ್ಯಾಜಿಕ್ ಮುಂದುವರೆದಿದೆ.

ಕಳೆದ ಕೆಲ ಪಂದ್ಯಗಳಲ್ಲಿ ಅದ್ಭುತ ಸ್ಟಂಪಿಂಗ್​ನೊಂದಿಗೆ ಗಮನ ಸೆಳೆದಿದ್ದ ಧೋನಿ, ಈ ಬಾರಿ ವಿಚಿತ್ರ ರೀತಿಯಲ್ಲಿ ರನೌಟ್ ಮಾಡಿ ಮತ್ತೆ ಅಭಿಮಾನಿಗಳು ಆಶ್ಚರ್ಯಚಕಿತರಾಗುವಂತೆ ಮಾಡಿದ್ದಾರೆ.

ಅಂತಿಮ ಓವರ್ ನಲ್ಲಿ ಧೋನಿ ಮ್ಯಾಜಿಕಲ್ ರನೌಟ್

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ಪರ ಕೊನೆಯ ಓವರ್​ನಲ್ಲಿ ಅಬ್ದುಲ್ ಸಮದ್ ಬ್ಯಾಟಿಂಗ್ ಮಾಡುತ್ತಿದ್ದರು. ಇತ್ತ ಸಿಎಸ್​ಕೆ ಪರ ಮತೀಶ ಪತಿರಾಣ ಬೌಲಿಂಗ್ ಮಾಡುತ್ತಿದ್ದರು. 20ನೇ ಓವರ್​ನ 2ನೇ ಎಸೆತವನ್ನು ಪತಿರಾಣ ವೈಡ್ ಎಸೆದಿದ್ದಾರೆ. ಚೆಂಡು ದೂರ ಸಾಗಿ ವಿಕೆಟ್ ಕೀಪರ್ ಕೈ ಸೇರುವಷ್ಟರಲ್ಲಿ ಒಂದು ರನ್ ಕಲೆಹಾಕಲು ನಾನ್ ಸ್ಟ್ರೈಕ್​ನಿಂದ ರಿಷಭ್ ಪಂತ್ ಓಡಿದ್ದಾರೆ. ಅತ್ತ ಕಡೆಯಿಂದ ಅಬ್ದುಲ್ ಸಮದ್ ನಾನ್​ ಸ್ಟ್ರೈಕ್​ನತ್ತ ಓಡಿ ಬರುವಷ್ಟರಲ್ಲಿ ಧೋನಿ ಅಂಡರ್ ಆರ್ಮ್ ಥ್ರೋ ಎಸೆದರು. ಚೆಂಡು ಗಾಳಿಯಲ್ಲಿ ತೇಲುತ್ತಾ ಬಂದು ನೇರವಾಗಿ ವಿಕೆಟ್​ಗೆ ಬಡಿದಿದೆ.

ವಿಡಿಯೋ ವೈರಲ್

ಈ ಅದ್ಭುತ ಅಂಡರ್ ಆರ್ಮ್ ಥ್ರೋ ರನೌಟ್ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಧೋನಿಯ ಕೀಪಿಂಗ್ ಚಮತ್ಕಾರಕ್ಕೆ ಅಭಿಮಾನಿಗಳು ಮೆಚ್ಚುಗೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಸತತ ಸೋಲಿನ ಬಳಿಕ ಕೊನೆಗೂ ಗೆದ್ದ ಚೆನ್ನೈ

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್​ಗಳಲ್ಲಿ ಕಲೆಹಾಕಿದ್ದು 166 ರನ್​ಗಳು ಮಾತ್ರ. ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ 19.3 ಓವರ್​ಗಳಲ್ಲಿ 168 ರನ್ ಬಾರಿಸಿ 5 ವಿಕೆಟ್​ಗಳ ಜಯ ಸಾಧಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್