ಹಾರ್ದಿಕ್ ಪಾಂಡ್ಯ, ಮಹಿಕಾ ಶರ್ಮಾ 
ಕ್ರಿಕೆಟ್

T20I ಇತಿಹಾಸದಲ್ಲಿ ಹಾರ್ದಿಕ್ ಪಾಂಡ್ಯ ಐತಿಹಾಸಿಕ ದಾಖಲೆ: ಗರ್ಲ್ ಫ್ರೆಂಡ್ ಮಹಿಕಾ ಪೋಸ್ಟ್ ವೈರಲ್!

ಅರ್ಶ್ ದೀಪ್ ಸಿಂಗ್ 109 ವಿಕೆಟ್ ಪಡೆದಿದ್ದು, ಜಸ್ಪ್ರೀತ್ ಬೂನ್ರಾ 101 ವಿಕೆಟ್ ಪಡೆದುಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯ 100 ವಿಕೆಟ್ ಪಡೆದ ಭಾರತದ ಮೂರನೇ ಬೌಲರ್ ಎನಿಸಿಕೊಂಡರು.

ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ T20I ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಟಿ20 ಕ್ರಿಕೆಟ್ ನಲ್ಲಿ 100 ವಿಕೆಟ್‌ಗಳನ್ನು ತಲುಪಿದ ಅರ್ಶ್‌ದೀಪ್ ಸಿಂಗ್ ಮತ್ತು ಜಸ್‌ಪ್ರೀತ್ ಬುಮ್ರಾ ಅವರ ದಾಖಲೆಯನ್ನು ಅವರು ಹಂಚಿಕೊಂಡಿದ್ದಾರೆ. ಟಿ20 ಕ್ರಿಕೆಟ್ ನಲ್ಲಿ 1000 ರನ್ ಹಾಗೂ 100 ವಿಕೆಟ್‌ಗಳನ್ನು ಪಡೆದ ವಿಶ್ವದ ಮೊದಲ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅರ್ಶ್ ದೀಪ್ ಸಿಂಗ್ 109 ವಿಕೆಟ್ ಪಡೆದಿದ್ದು, ಜಸ್ಪ್ರೀತ್ ಬೂನ್ರಾ 101 ವಿಕೆಟ್ ಪಡೆದುಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯ 100 ವಿಕೆಟ್ ಪಡೆದ ಭಾರತದ ಮೂರನೇ ಬೌಲರ್ ಎನಿಸಿಕೊಂಡರು.ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ 32 ವರ್ಷದ ಪಾಂಡ್ಯ ಈ ಸಾಧನೆ ಮಾಡಿದ್ದಾರೆ.

ಬ್ಯಾಟಿಂಗ್ ನಲ್ಲಿ ಹಾರ್ದಿಕ್ ಪಾಂಡ್ಯ 122 ಪಂದ್ಯಗಳಲ್ಲಿ 28.10 ರ ಸರಾಸರಿಯಲ್ಲಿ 1,939 ರನ್ ಗಳಿಸಿದ್ದಾರೆ, ಆರು ಅರ್ಧಶತಕಗಳು ಮತ್ತು 101 ಸಿಕ್ಸರ್‌ಗಳೊಂದಿಗೆ 141.53 ಸ್ಟ್ರೈಕ್ ರೇಟ್ ಹೊಂದಿದ್ದಾರೆ.

ಹಾರ್ದಿಕ್ ಪಾಂಡ್ಯ ಈ ಐತಿಹಾಸಿಕ ದಾಖಲೆ ಮಾಡುತ್ತಿದ್ದಂತೆಯೇ ಅವರ ಗರ್ಲ್ ಫ್ರೆಂಡ್ ಮಹಿಕಾ ಶರ್ಮಾ ಮಾಡಿರುವ ಪೋಸ್ಟ್ ವೈರಲ್ ಆಗಿದೆ. 100Babyyyyyy Rockstar Legend hero ಎಂಬ ಟೈಟಲ್ ನಡಿ ಪೋಸ್ಟ್ ಮಾಡಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿಯಲ್ಲಿ ವಾಯು ಗುಣಮಟ್ಟ ತೀವ್ರ ಕುಸಿತ: 5ನೇ ತರಗತಿವರೆಗಿನ ವಿದ್ಯಾರ್ಥಿಗಳ ದೈಹಿಕ ತರಗತಿಗಳಿಗೆ ಬ್ರೇಕ್!

ಪಹಲ್ಗಾಮ್ ಉಗ್ರ ದಾಳಿ: 1,597 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ NIA; ಉನ್ನತ LeT ಕಮಾಂಡರ್ ಸಾಜಿದ್ ಜಾಟ್ ಹೆಸರು ಉಲ್ಲೇಖ!

Gold Rate: ಮತ್ತೆ ಗಗನಕ್ಕೇರಿದ ಚಿನ್ನದ ದರ, ಒಂದೇ ದಿನ ಬರೊಬ್ಬರಿ 4 ಸಾವಿರ ರೂ ಏರಿಕೆ, ಎಷ್ಟು ಗೊತ್ತಾ?

Video: ಯಶವಂತಪುರ ನಿಲ್ದಾಣದಲ್ಲಿ ಹೈಡ್ರಾಮಾ: RPF ಸಿಬ್ಬಂದಿ ಮೇಲೆ ಪುಂಡರ ಹಲ್ಲೆ, ರೈಲು ವಿಳಂಬ! ಆಗಿದ್ದೇನು?

ನವೆಂಬರ್‌ನಲ್ಲಿ ನಿರುದ್ಯೋಗ ದರ ಶೇ. 4.7 ಕ್ಕೆ ಇಳಿಕೆ, ಉದ್ಯೋಗ ಮಾರುಕಟ್ಟೆ ಚೇತರಿಕೆ!

SCROLL FOR NEXT