U-19 ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತ vs ಪಾಕಿಸ್ತಾನ 
ಕ್ರಿಕೆಟ್

ಭಾರತದ ನಡೆ 'ಅನೈತಿಕ' ಎಂದ ಪಾಕಿಸ್ತಾನ; U19 ಏಷ್ಯಾ ಕಪ್ ಸೋಲಿನ ನಂತರ ತಂಡದ ಪ್ರದರ್ಶನ ಪರಿಶೀಲಿಸಲಿದೆ ಬಿಸಿಸಿಐ!

ಡಿಸೆಂಬರ್ 22 ರಂದು ನಡೆದ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ತಂಡದ ಪ್ರದರ್ಶನವನ್ನು ಪರಿಶೀಲಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

U19 ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಸೋಲಿನ ನಂತರ ಭಾರತ ಕ್ರಿಕೆಟ್ ತಂಡದ ಪ್ರದರ್ಶನವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಪರಿಶೀಲಿಸಲಿದೆ. ನಾಯಕ ಆಯುಷ್ ಮ್ಹಾತ್ರೆ ಮತ್ತು ಪಡೆ ತೀವ್ರವಾದ ಪೈಪೋಟಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧ 191 ರನ್‌ಗಳ ಅಂತರದ ಸೋಲನ್ನು ಅನುಭವಿಸಿತು. ಗೆಲುವಿನ ನಂತರ ಪಾಕಿಸ್ತಾನವು ಪಂದ್ಯಾವಳಿಯಾದ್ಯಂತ ಭಾರತದ ನಡವಳಿಕೆಯು ಅನೈತಿಕ ಎಂದು ಕರೆದಿದೆ.

ಕ್ರಿಕ್‌ಬಜ್ ಪ್ರಕಾರ, U19 ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಸೋಲಿನ ನಂತರ ಬಿಸಿಸಿಐ ತಂಡದ ಪ್ರದರ್ಶನವನ್ನು ಪರಿಶೀಲಿಸಲಿದೆ. ಡಿಸೆಂಬರ್ 22 ರಂದು ನಡೆದ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ತಂಡದ ಪ್ರದರ್ಶನವನ್ನು ಪರಿಶೀಲಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ವರದಿಯ ಪ್ರಕಾರ, ಬಿಸಿಸಿಐ ತಂಡದ ವ್ಯವಸ್ಥಾಪಕರಷ್ಟೇ ಅಲ್ಲದೆ, ಮುಖ್ಯ ಕೋಚ್ ಹೃಷಿಕೇಶ್ ಕಾನಿಟ್ಕರ್ ಮತ್ತು ನಾಯಕ ಆಯುಷ್ ಮ್ಹಾತ್ರೆ ಅವರನ್ನು ಸಹ ಪ್ರಶ್ನಿಸಲಿದೆ.

'ಸೋಮವಾರ (ಡಿಸೆಂಬರ್ 22) ಸಂಜೆ ಆನ್‌ಲೈನ್‌ನಲ್ಲಿ ನಡೆದ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬಿಸಿಸಿಐ ತಂಡದ ವ್ಯವಸ್ಥಾಪಕರಿಂದ ವರದಿಯನ್ನು ಪಡೆಯಲಿದೆ ಮತ್ತು ಮುಖ್ಯ ಕೋಚ್ ಹೃಷಿಕೇಶ್ ಕಾನಿಟ್ಕರ್ ಮತ್ತು ನಾಯಕ ಆಯುಷ್ ಮ್ಹಾತ್ರೆ ಅವರೊಂದಿಗೆ ಮಾತನಾಡಲು ಸಹ ಸಿದ್ಧವಾಗಿದೆ' ಎಂದು ವರದಿ ತಿಳಿಸಿದೆ.

ಈಮಧ್ಯೆ, ಪಾಕಿಸ್ತಾನದ ಮಾಜಿ ತಾರೆ ಮತ್ತು U19 ತರಬೇತುದಾರ ಸರ್ಫರಾಜ್ ಖಾನ್ ಭಾರತದ ನಡವಳಿಕೆ ಅನೈತಿಕ ಎಂದು ಹೇಳಿಕೊಂಡಿದ್ದು, ತಮ್ಮ ತಂಡವು ಆಚರಣೆಯ ವಿಷಯದಲ್ಲಿಯೂ ಗೌರವದಿಂದ ವರ್ತಿಸುವಂತೆ ಸಲಹೆ ನೀಡಿದ್ದೇನೆ ಎಂದಿದ್ದಾರೆ. ಭಾರತೀಯ ತಂಡವು ತಮ್ಮ ಪಾಕಿಸ್ತಾನದ ಆಟಗಾರರೊಂದಿಗೆ ಕೈಕುಲುಕಲು ನಿರಾಕರಿಸಿ, ಹಿರಿಯ ಪುರುಷರ ತಂಡದ ಸಾಲಿಗೆ ಬದ್ಧವಾಗಿರುವ ಹಿನ್ನೆಲೆಯಲ್ಲಿ ಅವರ ಹೇಳಿಕೆಗಳು ಬಂದಿವೆ.

'ಕ್ರಿಕೆಟ್ ಅನ್ನು ಗೌರವಿಸುವ ನಾವು ಭಾರತ ತಂಡಗಳ ವಿರುದ್ಧ ಆಡಿದ್ದೇವೆ. ಯುವ ಹುಡುಗರು ವರ್ತಿಸಿದ ರೀತಿ ಕ್ರೀಡೆಯ ಬಗ್ಗೆ ಅಗೌರವ ತೋರುತ್ತಿತ್ತು. ಆಟದ ಬಗ್ಗೆ ಭಾರತದ ನಡವಳಿಕೆ ಚೆನ್ನಾಗಿರಲಿಲ್ಲ ಮತ್ತು ಕ್ರಿಕೆಟ್‌ನಲ್ಲಿ ಭಾರತೀಯ ತಂಡದ ನಡವಳಿಕೆ ಅನೈತಿಕವಾಗಿತ್ತು' ಎಂದು ಸರ್ಫರಾಜ್ ಹೇಳಿದರು.

ಭಾರತದ U19 ತಂಡದ ಪತನ ಬಹುಶಃ ಒಂದು ಕೆಟ್ಟ ನಿರ್ಧಾರದಿಂದ ಪ್ರಾರಂಭವಾಯಿತು. ಟಾಸ್ ಗೆದ್ದ ನಂತರ, ಭಾರತದ ನಾಯಕ ಆಯುಷ್ ಮ್ಹಾತ್ರೆ ದುಬೈ ವಿಕೆಟ್‌ನಲ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಅದು ಬ್ಯಾಟಿಂಗ್‌ಗೆ ಉತ್ತಮವಾಗಿ ಕಾಣುತ್ತಿತ್ತು. ನಂತರ ಪಾಕಿಸ್ತಾನದ ಆರಂಭಿಕ ಆಟಗಾರ ಸಮೀರ್ ಮಿನ್ಹಾಸ್ 113 ಎಸೆತಗಳಲ್ಲಿ 172 ರನ್ ಗಳಿಸಿ, 50 ಓವರ್‌ಗಳಲ್ಲಿ 347/8 ರನ್ ಗಳಿಸಲು ಕಾರಣರಾದರು. ಈ ಮೂಲಕ ಪಾಕಿಸ್ತಾನ U19 ತಂಡವು ತಮ್ಮ ಮೊದಲ ಏಷ್ಯಾ ಕಪ್ ಟ್ರೋಫಿಯನ್ನು ಗೆದ್ದಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಿಂದೂ ಯುವಕನ ಬರ್ಬರ ಹತ್ಯೆ: ಬಾಂಗ್ಲಾ ರಾಯಭಾರ ಕಚೇರಿ ಎದುರು ಬೃಹತ್ ಪ್ರತಿಭಟನೆ, ಲಾಠಿ ಚಾರ್ಜ್! ವೀಸಾ ಸೇವೆ ಸ್ಥಗಿತ, Video

'ದಿನನಿತ್ಯದ ಉದ್ಯೋಗಗಳು ಕಣ್ಮರೆಯಾಗುತ್ತವೆ': ಇನ್ಫೋಸಿಸ್ ನಾರಾಯಣ ಮೂರ್ತಿ ಹೊಸ ಬಾಂಬ್!

17 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದ ರಾಯಭಾರಿಯಾಗಿ ಪ್ರಕಾಶ್ ರಾಜ್: ಸಿದ್ದರಾಮಯ್ಯ

Vijay Hazare Trophy: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ಪಂದ್ಯಕ್ಕೆ ನಿರಾಕರಣೆ

'ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಿಂದ ಕೈಬಿಟ್ಟರೆ...' ಮಹತ್ವದ ವಿಷಯಗಳನ್ನು ಉಲ್ಲೇಖಿಸಿ ರಾಹುಲ್ ಗಾಂಧಿಗೆ ಕೆ ಎನ್ ರಾಜಣ್ಣ ಪತ್ರ

SCROLL FOR NEXT