ವಿರಾಟ್ ಕೊಹ್ಲಿ - ರೋಹಿತ್ ಶರ್ಮಾ 
ಕ್ರಿಕೆಟ್

'ತವರು ನೆಲದಲ್ಲಿಯೇ 3 ದಿನಗಳಲ್ಲಿ ಭಾರತವನ್ನು ಸೋಲಿಸುತ್ತೇವೆ': ಶ್ರೀಲಂಕಾ ವಿಶ್ವಕಪ್ ವಿಜೇತ ತಂಡದ ನಾಯಕ

ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾದ ಕಳಪೆ ಪ್ರದರ್ಶನವು ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ರೋಹಿತ್ ಶರ್ಮಾ ವಿರುದ್ಧ ಪ್ರಶ್ನೆಗಳಿಗೆ ಕಾರಣವಾಯಿತು.

ಟೀಂ ಇಂಡಿಯಾ 12 ವರ್ಷ ತಾಯ್ನಾಡಿನಲ್ಲಿ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಸೋತಿರಲೇ ಇಲ್ಲ. ಆದರೆ, 2024ರ ಅಕ್ಟೋಬರ್‌ನಲ್ಲಿ ಆಡಿದ ಟೆಸ್ಟ್ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿತು. ಕಳೆದ ಕೆಲವು ತಿಂಗಳುಗಳಲ್ಲಿ ಭಾರತವು ಟೆಸ್ಟ್ ಕ್ರಿಕೆಟ್‌ನಲ್ಲಿ ತೀವ್ರ ಕುಸಿತ ಕಂಡಿದೆ. ತವರಿನಲ್ಲಿ ನಡೆದ ನ್ಯೂಜಿಲೆಂಡ್‌ ವಿರುದ್ಧದ ಸರಣಿಯಲ್ಲಿ 0-3 ಮತ್ತು ನಂತರ ಆಸ್ಟ್ರೇಲಿಯಾ ವಿರುದ್ಧ 1-3 ಅಂತರದಿಂದ ಸೋತಿದೆ. ಶ್ರೀಲಂಕಾದ 1996 ರ ವಿಶ್ವಕಪ್ ವಿಜೇತ ನಾಯಕ ಅರ್ಜುನ ರಣತುಂಗ ಇದೀಗ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಭಾರತ ತಂಡವು ಶ್ರೇಷ್ಠ ಶ್ರೀಲಂಕಾ ತಂಡಕ್ಕೆ ಸುಲಭವಾದ ಆಯ್ಕೆಯಾಗಿದೆ. ಟೀಂ ಇಂಡಿಯಾವನ್ನು ತವರು ನೆಲದಲ್ಲಿಯೇ ಕೇವಲ ಮೂರು ದಿನಗಳಲ್ಲಿ ಸೋಲಿಸಬಹುದು ಎಂದು ಹೇಳಿದ್ದಾರೆ.

'(ಚಮಿಂದಾ) ವಾಸ್ ಮತ್ತು ಮುರಳಿ (ಮುತ್ತಯ್ಯ ಮುರಳೀಧರನ್) ಅವರಂತಹ ಬೌಲರ್‌ಗಳೊಂದಿಗೆ ನನ್ನ ತಂಡವು ಕೇವಲ ಮೂರು ದಿನಗಳಲ್ಲಿ ಭಾರತದಲ್ಲಿಯೇ ಟೀಂ ಇಂಡಿಯಾವನ್ನು ಸೋಲಿಸುತ್ತಿತ್ತು' ಎಂದು ರಣತುಂಗ ದಿ ಟೆಲಿಗ್ರಾಫ್‌ನೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾದ ಕಳಪೆ ಪ್ರದರ್ಶನವು ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ರೋಹಿತ್ ಶರ್ಮಾ ವಿರುದ್ಧ ಪ್ರಶ್ನೆಗಳಿಗೆ ಕಾರಣವಾಯಿತು. ಟೀಂ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿಲ್ಲ ಎನ್ನುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.

'ಸದ್ಯದ ಶ್ರೀಲಂಕಾ ತಂಡವು ತನ್ನ ಪೀಳಿಗೆಯ ತಂಡಗಳಂತೆಯೇ ಉತ್ತಮವಾಗಿದೆ. ಈಗಿನ ಶ್ರೀಲಂಕಾ ತಂಡದಲ್ಲಿಯೂ ಸಹ ಪ್ರತಿಭೆಗಳ ಕೊರತೆಯಿಲ್ಲ. ಒಟ್ಟಾರೆ, ಇದು ಸಾಕಷ್ಟು ಪ್ರತಿಭಾವಂತರು ಇರುವ ತಂಡವಾಗಿದೆ. 1996 ರ ತಂಡವನ್ನು ಹಿಂತಿರುಗಿ ನೋಡಿದಾಗ, ಅರವಿಂದ (ಡಿಸಿಲ್ವಾ) ಮಾತ್ರ ಈಗಿನ ತಂಡದ ಆಟಗಾರರಿಗಿಂತ ಮೇಲಿದ್ದಾರೆ' ಎಂದು ರಣತುಂಗ ಹೇಳಿದರು.

'ನಿಜವಾದ ಸಮಸ್ಯೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಒಳಗೆ ಇದೆ. ಮಂಡಳಿಯ ಆಡಳಿತವು ಭ್ರಷ್ಟವಾಗಿದೆ, ಇದು ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ' ಎಂದು ಅವರು ಹೇಳಿದರು.

ಇತ್ತೀಚಿನ ಎರಡು ಸರಣಿಗಳಲ್ಲಿನ ಸೋಲುಗಳಿಂದಾಗಿ ಭಾರತವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ನಿಂದ ಹೊರಬಿದ್ದಿದೆ. ಮತ್ತೊಂದೆಡೆ, ಶ್ರೀಲಂಕಾ ತಂಡವು ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ವಿರುದ್ಧಧ ಟೆಸ್ಟ್ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದು, WTC ಅಂಕಪಟ್ಟಿಯಲ್ಲಿ ಆರನೇ ಸ್ಥಾನ ಗಳಿಸಿದೆ.

'ಫಾರ್ಮ್ ಕಳೆದುಕೊಂಡಿರುವ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್‌ಗೆ ಮರಳಬೇಕು. ಸುನೀಲ್ ಗವಾಸ್ಕರ್, ದಿಲೀಪ್ ವೆಂಗ್‌ಸರ್ಕರ್ ಅಥವಾ ರಾಹುಲ್ ದ್ರಾವಿಡ್ ಅವರಂತಹ ವ್ಯಕ್ತಿಗಳೊಂದಿಗೆ ಕೊಹ್ಲಿ ಮಾತನಾಡಬೇಕು ಎಂದು ನಾನು ಭಾವಿಸುತ್ತೇನೆ. ಅವರು ಖಂಡಿತವಾಗಿಯೂ ಅವರಿಗೆ ಸಹಾಯ ಮಾಡಬಹುದು' ಎಂದು ರಣತುಂಗ ಸಲಹೆ ನೀಡಿದರು.

ಭಾರತವು ಫೆಬ್ರುವರಿ 19 ರಿಂದ 2025ರ ಚಾಂಪಿಯನ್ಸ್ ಟ್ರೋಫಿಯನ್ನು ಆಡಲಿದೆ. ಶ್ರೀಲಂಕಾ 2023ರ ವಿಶ್ವಕಪ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನ ಗಳಿಸಿದ ನಂತರ ಅರ್ಹತೆ ಪಡೆಯಲು ವಿಫಲವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೈಸೂರಿನಲ್ಲಿ ರಾಹುಲ್ ಗಾಂಧಿ ಜತೆ ಸಿದ್ದರಾಮಯ್ಯ, ಡಿಕೆಸಿ ಮಹತ್ವದ ಚರ್ಚೆ; ಬಳಿಕ ಸಿಎಂ ಹೇಳಿದ್ದೇನು? Video

'Ground Ops ಗಾಗಿ ಭಾರತೀಯ ಸೇನೆ ಸಂಪೂರ್ಣ ಸಜ್ಜು: ಪಾಕ್ ಗೆ ವಾರ್ನಿಂಗ್ ನೀಡಿದ ಸೇನಾ ಮುಖ್ಯಸ್ಥ ದ್ವಿವೇದಿ!

ಬ್ಲಿಂಕಿಟ್, ಸ್ವಿಗ್ಗಿ, ಜೆಪ್ಟೊಗೆ 10 ನಿಮಿಷಗಳ ಡೆಲಿವರಿ ಸೇವೆ ನಿಲ್ಲಿಸುವಂತೆ ಸರ್ಕಾರ ಸೂಚನೆ; ಯಾಕೆ ಗೊತ್ತಾ?

'ಹಾವು ಕಚ್ಚಿದೆ ಬೇಗ ಚಿಕಿತ್ಸೆ ಕೊಡಿ'; ಜೀವಂತ ನಾಗರಹಾವನ್ನೇ ಜೇಬಿನಲ್ಲಿಟ್ಟು ಆಸ್ಪತ್ರೆಗೆ ಬಂದ ಆಟೋ ಚಾಲಕ, Video

ಜಮ್ಮು-ಕಾಶ್ಮೀರ: ಇದೇ ಮೊದಲು, ಮಸೀದಿಯ ಇಮಾಮ್ ಸೇರಿದಂತೆ ಎಲ್ಲರ ವೈಯಕ್ತಿಕ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು! ಕಾರಣವೇನು ಗೊತ್ತಾ?

SCROLL FOR NEXT