ವರುಣ್ ಚಕ್ರವರ್ತಿ 
ಕ್ರಿಕೆಟ್

'ಸ್ಕೂಟರ್‌ನಲ್ಲಿ CSK ಬಸ್ ಫಾಲೋ ಮಾಡಿದ ಆಟಗಾರ'; ನೆಟ್ ಬೌಲಿಂಗ್‌ನಿಂದ ಟೀಂ ಇಂಡಿಯಾವರೆಗೆ; ಕನ್ನಡಿಗನ ಜರ್ನಿ

ಯೂಟ್ಯೂಬ್ ಚಾನೆಲ್‌ನಲ್ಲಿ ರವಿಚಂದ್ರನ್ ಅಶ್ವಿನ್ ಅವರೊಂದಿಗೆ ನಡೆದ ಮಾತುಕತೆಯಲ್ಲಿ, ಸಿಎಸ್‌ಕೆ ಜೊತೆಗಿನ ನೆಟ್-ಬೌಲಿಂಗ್ ಅನುಭವವು ಐಪಿಎಲ್‌ಗೆ ಹೇಗೆ ಪ್ರವೇಶ ಪಡೆಯಲು ದಾರಿ ಮಾಡಿಕೊಟ್ಟಿತು ಎಂಬುದನ್ನು ವರುಣ್ ವಿವರಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನೇಕ ಭಾರತೀಯ ಕ್ರಿಕೆಟಿಗರಿಗೆ ವೃತ್ತಿಜೀವನಕ್ಕೆ ದಾರಿಯಾಗಿದೆ. ವಿಶ್ವದ ಶ್ರೀಮಂತ ಟಿ20 ಲೀಗ್ ನೂರಾರು ಉದಯೋನ್ಮುಖ ಕ್ರಿಕೆಟಿಗರಿಗೆ ವೇದಿಕೆ ನೀಡಿದೆ. ಅವರಲ್ಲಿ ಕೆಲವರು ಈ ಅವಕಾಶಗಳನ್ನು ಬಳಸಿಕೊಂಡು ಅಂತರರಾಷ್ಟ್ರೀಯ ವೇದಿಕೆಯಲ್ಲಿ ದೊಡ್ಡ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಂತಹ ಒಬ್ಬ ಆಟಗಾರ ವರುಣ್ ಚಕ್ರವರ್ತಿ. ಅವರು 100 ಪ್ರತಿಶತದಷ್ಟು ಐಪಿಎಲ್‌ ಉತ್ಪನ್ನವಾಗಿದ್ದು, ಸದ್ಯ ಭಾರತದ ವೈಟ್-ಬಾಲ್ ತಂಡಗಳಲ್ಲಿ ಸ್ಥಾನ ಪಡೆದಿದ್ದಾರೆ. ಆದಾಗ್ಯೂ, ಕ್ರೀಡೆಯಲ್ಲಿ ತಡವಾಗಿ ತನ್ನ ಛಾಪು ಮೂಡಿಸುವ ಅವಕಾಶ ಪಡೆದ ವರುಣ್‌ಗೆ ಆರಂಭ ಅಷ್ಟೇನು ಆರಾಮದಾಯಕವಾಗಿರಲಿಲ್ಲ.

ಯೂಟ್ಯೂಬ್ ಚಾನೆಲ್‌ನಲ್ಲಿ ರವಿಚಂದ್ರನ್ ಅಶ್ವಿನ್ ಅವರೊಂದಿಗೆ ನಡೆದ ಮಾತುಕತೆಯಲ್ಲಿ, ಸಿಎಸ್‌ಕೆ ಜೊತೆಗಿನ ನೆಟ್-ಬೌಲಿಂಗ್ ಅನುಭವವು ಐಪಿಎಲ್‌ಗೆ ಹೇಗೆ ಪ್ರವೇಶ ಪಡೆಯಲು ದಾರಿ ಮಾಡಿಕೊಟ್ಟಿತು ಎಂಬುದನ್ನು ವರುಣ್ ವಿವರಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲು ಅವಕಾಶ ಸಿಗದಿದ್ದರೂ, ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದಲ್ಲಿ ದೊಡ್ಡ ಆಟಗಾರನಾಗಿ ಮಿಂಚಿದ ಕಥೆಯೇ ರೋಚಕ. ಮೊದಲಿಗೆ ಅವರು ನೆಟ್ ಬೌಲರ್ ಆಗಿ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.

'ನಾನು ದಿನೇಶ್ ಕಾರ್ತಿಕ್ ಅವರಿಗೆ ಬೌಲಿಂಗ್ ಮಾಡಿದೆ, ಅವನು ಪ್ರಭಾವಿತರಾಗಿ ನಂತರ ನನಗೆ ಕರೆ ಮಾಡುವುದಾಗಿ ಹೇಳಿದರು. ಎರಡು ವರ್ಷ ಬ್ಯಾನ್ ಆದ ಬಳಿಕ ಚೆನ್ನೈ ಐಪಿಎಲ್‌ಗೆ ಮರಳುತ್ತಿದ್ದ ವರ್ಷ ಅದು. ಆ ಸಮಯದಲ್ಲಿ ಒಂದು ಕುತೂಹಲಕಾರಿ ಘಟನೆ ನಡೆಯಿತು. ಟಿಎಸ್ ಮೋಹನ್ ಅವರು ಸಿಎಸ್‌ಕೆ ಪರ ನೆಟ್ ಬೌಲರ್‌ಗಳನ್ನು ನಿರ್ವಹಿಸುತ್ತಿದ್ದಾರೆ ಎಂಬುದು ನನಗೆ ತಿಳಿಯಿತು. ನಾನು ಸ್ಕೂಟರ್‌ನಲ್ಲಿ ಸಿಎಸ್‌ಕೆ ಬಸ್ ಅನ್ನು ಹಿಂಬಾಲಿಸಿಕೊಂಡು ಹೋದೆ ಮತ್ತು ಚೆಪಾಕ್ ಕ್ರೀಡಾಂಗಣದ ಹೊರಗೆ ನಿಂತು ಅವರಿಗೆ ಕರೆ ಮಾಡಿದೆ' ಎಂದರು.

'ನಾನು ಮಿಸ್ಚರಿ ಸ್ಪಿನ್ ಬೌಲಿಂಗ್ ಮಾಡುತ್ತೇನೆ ಎಂದು ಅವರಿಗೆ ಹೇಳಿದೆ ಮತ್ತು ನಾನು CSK ಪರ ನೆಟ್ ಬೌಲರ್ ಆಗಲು ಅವಕಾಶವಿದೆಯೇ ಎಂದು ಕೇಳಿದೆ. ನಾನು ಯಾವ ವಿಭಾಗದಲ್ಲಿ ಆಡಿದ್ದೇನೆ ಎಂದು ಅವರು ನನ್ನನ್ನು ಕೇಳಿದರು. ನಾನು ಐದನೇ ವಿಭಾಗದಲ್ಲಿ ಆಡಿದ್ದೇನೆ ಎಂದು ಹೇಳಿದೆ. ಆಗ ಅವರು first division ಬೌಲರ್‌ಗಳನ್ನು ಮಾತ್ರ ತೆಗೆದುಕೊಂಡಿರುವುದಾಗಿ ಮತ್ತು ಬೇರೆ ಯಾರನ್ನೂ ತೆಗೆದುಕೊಂಡಿಲ್ಲ ಎಂದರು. ಅವರು ಸುಲಭವಾಗಿ ನನಗೆ ಇಲ್ಲ ಎಂದು ಹೇಳಬಹುದಿತ್ತು. ಆದರೆ, ಮರುದಿನ ಅವರನ್ನು ಭೇಟಿ ಮಾಡಲು ನನಗೆ ತಿಳಿಸಿದರು' ಎಂದು ಅಶ್ವಿನ್ ಜೊತೆಗಿನ ಸಂಭಾಷಣೆಯ ಸಮಯದಲ್ಲಿ ವರುಣ್ ಚಕ್ರವರ್ತಿ ಬಹಿರಂಗಪಡಿಸಿದರು.

'ಮರುದಿನ, ನಾನು ಕ್ರೀಡಾಂಗಣಕ್ಕೆ ಹೋದೆ. ನನ್ನನ್ನು ಹೊರತುಪಡಿಸಿ, ಅಲ್ಲಿದ್ದ ಎಲ್ಲಾ ಬೌಲರ್‌ಗಳು ಮೊದಲ ವಿಭಾಗದವರು ಎಂಬುದನ್ನು ನಾನು ನೋಡಿದೆ. ಅವರು ಮೊದಲು ಚೆಂಡನ್ನು ನನಗೆ ಕೊಟ್ಟರು. ನಾನು ಏನು ಮಾಡಬಹುದೆಂದು ನೋಡಲು ಅವರು ಬಯಸಿದರು. ಮೊದಲ ವಿಭಾಗದ ಎಲ್ಲ ಬೌಲರ್‌ಗಳು ನನ್ನ ಹಿಂದೆ ಕಾಯುತ್ತಿದ್ದರು. ನಾನು ಬ್ರಾವೋಗೆ ಬೌಲಿಂಗ್ ಮಾಡುತ್ತಿದ್ದೆ ಮತ್ತು ಮೊದಲ ಎರಡು ಚೆಂಡುಗಳು ನೇರ ಬೀಮರ್‌ಗಳಾಗಿದ್ದವು' ಎಂದು ತಿಳಿಸಿದರು.

'ನಾನು ತುಂಬಾ ನರ್ವಸ್ ಆಗಿದ್ದೆ. ಅದಾದ ನಂತರ, ನಾನು ಅವರಿಗೆ ಉತ್ತಮವಾಗಿ ಬೌಲಿಂಗ್ ಮಾಡಲು ಪ್ರಾರಂಭಿಸಿದೆ ಮತ್ತು ಬ್ರಾವೋ, ಧೋನಿ, ರೈನಾ ಮತ್ತು ಇತರರಿಗೆ ನಿಜವಾಗಿಯೂ ಚೆನ್ನಾಗಿ ಬೌಲಿಂಗ್ ಮಾಡಿದೆ. ಅವರು ತುಂಬಾ ಪ್ರಭಾವಿತರಾದರು ಮತ್ತು ನಾನು ಐಪಿಎಲ್‌ಗೆ ನೋಂದಾಯಿಸಿಕೊಂಡಿದ್ದೇನೆಯೇ ಎಂದು ಕೇಳಿದರು. ನಾನು ಮೊದಲ ವಿಭಾಗಕ್ಕೂ ನೋಂದಾಯಿಸಿಲ್ಲ ಎಂದು ನಾನು ಅವರಿಗೆ ಹೇಳಿದೆ. ಆದ್ದರಿಂದ, ಅವರು ಸಿಎಸ್‌ಕೆ ಪರ ನೆಟ್ ಬೌಲಿಂಗ್ ಮಾಡಲು ಬರಲು ನನ್ನನ್ನು ಕೇಳಿದರು. ಇದೆಲ್ಲವೂ ಮೊದಲ ದಿನದಂದೇ ಸಂಭವಿಸಿತು' ಎಂದು ಅವರು ಬಹಿರಂಗಪಡಿಸಿದರು.

ದುರದೃಷ್ಟವಶಾತ್, ಸಿಎಸ್‌ಕೆ ಆ ವರ್ಷ ತನ್ನ ನೆಲೆಯನ್ನು ಪುಣೆಗೆ ಸ್ಥಳಾಂತರಿಸಬೇಕಾಯಿತು ಮತ್ತು ಆಡಳಿತ ಮಂಡಳಿ ಚಕ್ರವರ್ತಿಯನ್ನು ತಮ್ಮ ನೆಟ್ ಬೌಲರ್ ಆಗಿ ತೆಗೆದುಕೊಳ್ಳದಿರಲು ನಿರ್ಧರಿಸಿತು. ಆದಾಗ್ಯೂ, ಅಂತಿಮವಾಗಿ ದಿನೇಶ್ ಕಾರ್ತಿಕ್ ಅವರಿಂದ ಕರೆ ಬಂದಿತು ಮತ್ತು ಶೀಘ್ರದಲ್ಲೇ ವರುಣ್ ಕೋಲ್ಕತ್ತಾ ನೈಟ್ ರೈಡರ್ಸ್‌ನ ನೆಟ್ ಬೌಲರ್ ಆದರು.

2019ರಲ್ಲಿ, ವರುಣ್ ಅವರು ಪಂಜಾಬ್ ಕಿಂಗ್ಸ್ ತಂಡಕ್ಕೆ ಸೇರಿಕೊಂಡರು. ಆದರೆ, ಅವರಿಗೆ ಆಡಲು ಹೆಚ್ಚು ಅವಕಾಶ ಸಿಗಲಿಲ್ಲ. ಆದಾಗ್ಯೂ, 2020 ರಿಂದ ವರುಣ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದಲ್ಲಿ ಪ್ರಮುಖ ಆಟಗಾರನಾಗಿದ್ದಾರೆ.

'ಸಿಎಸ್‌ಕೆ ನನ್ನನ್ನು ಪುಣೆಗೆ ಕರೆದೊಯ್ಯಲಿಲ್ಲ ಮತ್ತು ನಾನು ಚೆನ್ನೈನಲ್ಲಿದ್ದೆ. ನಂತರ, ಡಿಕೆ ನನಗೆ ಕರೆ ಮಾಡಿ ಕೆಕೆಆರ್ ನೆಟ್ ಬೌಲರ್ ಆಗಿ ಸೇರಲು ನನಗೆ ಹೇಳಿದರು. ನಾನು ಅಲ್ಲಿ ಒಳ್ಳೆಯ ಸಮಯವನ್ನು ಕಳೆದೆ ಮತ್ತು ನಿಜವಾಗಿಯೂ ಚೆನ್ನಾಗಿ ಬೌಲಿಂಗ್ ಮಾಡಿದೆ. ಅಲ್ಲಿ ನಾನು ಅಭಿಷೇಕ್ ಅವರನ್ನು ಭೇಟಿಯಾದೆ ಮತ್ತು ಆಗ ಎಲ್ಲವೂ ಬದಲಾಗಲು ಪ್ರಾರಂಭಿಸಿತು' ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT