ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಆಸ್ಟ್ರೇಲಿಯಾ ವಿರುದ್ಧದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸ್ಪಿನ್ನರ್ ಕುಲದೀಪ್ ಯಾದವ್ ವಿರುದ್ಧ ಕೆಂಡಾಮಂಡಲರಾದ ಘಟನೆ ನಡೆದಿದೆ.
ದುಬೈನ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 49.3 ಓವರ್ ನಲ್ಲಿ 264 ರನ್ ಗಳಿಸಿ ಆಲೌಟ್ ಆಯಿತು. ಆಸಿಸ್ ಬ್ಯಾಟರ್ ಗಳು ಉತ್ತಮ ಲಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ಭಾರತೀಯ ಆಟಗಾರರ ಒಂದು ಸಣ್ಣ ತಪ್ಪು ಕೂಡ ದುಬಾರಿಯಾಗುತ್ತದೆ.
ಕುಲದೀಪ್ ಯಾದವ್ ಎಡವಟ್ಟು
ಇನ್ನು ಇಂದಿನ ಪಂದ್ಯದಲ್ಲಿ ಕುಲದೀಪ್ ಯಾದವ್ ಮಾಡಿದ ಎಡವಟ್ಟಿಗೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾ ಬ್ಯಾಟಿಂಗ್ ವೇಳೆ ಕೊಹ್ಲಿ ತಮ್ಮತ್ತ ಬಂದ ಚೆಂಡನ್ನು ಕುಲದೀಪ್ ಯಾದವ್ ರತ್ತ ಎಸೆದರು. ಈ ವೇಳೆ ಚೆಂಡನ್ನು ಹಿಡಿತಕ್ಕೆ ಪಡೆಯುವ ಬದಲು ಕುಲದೀಪ್ ಯಾದವ್ ಬಿಟ್ಟರು. ಹಿಂದೆ ಇದ್ದ ರೋಹಿತ್ ಶರ್ಮಾ ಚೆಂಡನ್ನು ಪಡೆದರಾದರೂ, ಕುಲದೀಪ್ ಯಾದವ್ ಎಡವಟ್ಟಿನಿಂದ ಚೆಂಡು ರನೌಟ್ ಚಾನ್ಸ್ ಮಿಸ್ ಆಗಿದ್ದು ಅಲ್ಲದೇ ಚೆಂಡು ಆಟಗಾರರ ಕೈ ತಪ್ಪಿ ಆಸಿಸ್ ಗೆ ಹೆಚ್ಚು ವರಿ ರನ್ ಕೂಡ ಬರುವ ಅಪಾಯವಿತ್ತು.
RO-KO ಆಕ್ರೋಶ
ಇದೇ ಕಾರಣಕ್ಕೆ ಕುಲದೀಪ್ ಯಾದಲ್ ಮಾಡಿದ ಎಡವಟ್ಟು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಆಕ್ರೋಶಕ್ಕೆ ಕಾರಣವಾಯಿತು. ಕೊಹ್ಲಿ ಮತ್ತು ರೋಹಿತ್ ಆಕ್ರೋಶದಿಂದ ಬೈದರು.