ಭಾರತ ತಂಡ ಮತ್ತು ಭಾನುವಾರ 
ಕ್ರಿಕೆಟ್

Champions Trophy 2025 Final: ಭಾರತಕ್ಕೆ ಕಾಡುತ್ತಿದೆ ಭಾನುವಾರ 'ಪೆಡಂಭೂತ'; ಕಳಚುತ್ತಾ ಕರಾಳ ದಾಖಲೆ?

ಅಚ್ಚರಿಯಾದರೂ ಇದು ಸತ್ಯ.. ಭಾರತದ ಕ್ರಿಕೆಟ್ ಇತಿಹಾಸದಲ್ಲೇ ಟೀಂ ಇಂಡಿಯಾ ಭಾನುವಾರ ಯಾವುದೇ ಐಸಿಸಿ ಫೈನಲ್ ಪಂದ್ಯಗಳನ್ನು ಗೆದ್ದಿಲ್ಲ.

ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯಕ್ಕೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಸಜ್ಜಾಗಿದ್ದು, ಈ ನಡುವೆ ಟೀಂ ಇಂಡಿಯಾಗೆ ತನ್ನ ಕರಾಳ ದಾಖಲೆಯೊಂದು ಕಾಡುತ್ತಾ ಬಂದಿದೆ.

ಹೌದು.. ಭಾರತವು ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಣಸಾಡಲಿದೆ. ರೋಹಿತ್ ಶರ್ಮಾ ನಾಯಕನಾಗಿ ತಮ್ಮ ಮೊದಲ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿ ಹಿಡಿಯುವ ಗುರಿಯನ್ನು ಹೊಂದಿದ್ದಾರೆ. ಆದರೆ ರೋಹಿತ್ ದಾರಿಗೆ ಭಾನುವಾರ ಅಡ್ಡಿಯಾಗಿದೆ ಎನ್ನಲಾಗಿದೆ.

ಅಚ್ಚರಿಯಾದರೂ ಇದು ಸತ್ಯ.. ಭಾರತದ ಕ್ರಿಕೆಟ್ ಇತಿಹಾಸದಲ್ಲೇ ಟೀಂ ಇಂಡಿಯಾ ಭಾನುವಾರ ಯಾವುದೇ ಐಸಿಸಿ ಫೈನಲ್ ಪಂದ್ಯಗಳನ್ನು ಗೆದ್ದಿಲ್ಲ. ಭಾನುವಾರ ಹೊರತು ಪಡಿಸಿ ಉಳಿದ ದಿನಗಳು ನಡೆದ ಐಸಿಸಿ ಟೂರ್ನಿಯ ಫೈನಲ್ ನಲ್ಲಿ ಭಾರತ ಜಯದ ನಗೆ ಬೀರಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಭಾರತ ತಂಡ ಈ ವರೆಗೂ 5 ಐಸಿಸಿ ಪ್ರಶಸ್ತಿಗಳನ್ನು ಜಯಿಸಿದ್ದು, ಈ ಪೈಕಿ 1983ರ ಏಕದಿನ ವಿಶ್ವಕಪ್ ಟೂರ್ನಿ ಫೈನಲ್ ಪಂದ್ಯ (ಶನಿವಾರ), 2002ರ ಚಾಂಪಿಯನ್ಸ್ ಟ್ರೋಫಿ ಫೈನಲ್ (ಸೋಮವಾರ), 2007ರ ಟಿ20 ವಿಶ್ವಕಪ್ ಫೈನಲ್ (ಸೋಮವಾರ), 2011ರ ಏಕದಿನ ಕ್ರಿಕೆಟ್ ವಿಶ್ವಕಪ್ (ಶನಿವಾರ)ಫೈನಲ್ ಪಂದ್ಯಗಳನ್ನು ಜಯಿಸಿತ್ತು, ಈ ಎಲ್ಲ ಪಂದ್ಯಗಳೂ ಭಾನುವಾರವಲ್ಲದ ದಿನದಂದು ನಡೆದಿತ್ತು.

India’s ICC Tournament Finals on Sundays

Wins:

  • 1983 ODI World Cup Final Saturday

  • 2002 Champions Trophy Final Monday

  • 2007 T20 World Cup Final Monday

  • 2011 ODI World Cup Final Saturday

  • 2013 Champions Trophy Final Sunday/Monday

ಅಂತೆಯೇ ಭಾರತ ಸೋತಿರುವ ಐಸಿಸಿ ಟೂರ್ನಿಯ ಫೈನಲ್ ಪಂದ್ಯಗಳ ಪೈಕಿ 2024ರ ಏಕದಿನ ವಿಶ್ವಕಪ್ ಫೈನಲ್ (ಶನಿವಾರ) ಪಂದ್ಯವೊಂದವನ್ನು ಹೊರತು ಪಡಿಸಿ ಭಾರತ ಸೋತ ಉಳಿದೆಲ್ಲಾ ಐಸಿಸಿ ಟೂರ್ನಿಗಳ ಫೈನಲ್ ಪಂದ್ಯಗಳು ಭಾನುವಾರ ನಡೆದದ್ದೇ ಆಗಿದೆ. 2000 ಚಾಂಪಿಯನ್ಸ್ ಟ್ರೋಫಿ ಫೈನಲ್, 2003ರ ಏಕದಿನ ವಿಶ್ವಕಪ್ ಫೈನಲ್, 2014ರ ಟಿ20 ವಿಶ್ವಕಪ್ ಫೈನಲ್, 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯಗಳಲ್ಲಿ ಭಾರತ ಸೋತಿತ್ತು.

Losses:

  • 2024 T20 World Cup Final Saturday

  • 2014 T20 World Cup Final Sunday

  • 2003 ODI World Cup Final Sunday

  • 2000 Champions Trophy Final Sunday

  • 2017 Champions Trophy Final Sunday

2013ರ ಫೈನಲ್ ಪಂದ್ಯದ ಟ್ವಿಸ್ಟ್

ಏತನ್ಮಧ್ಯೆ, ಭಾನುವಾರ ನಡೆದ ಐಸಿಸಿ ಟೂರ್ನಮೆಂಟ್ ಫೈನಲ್‌ನಲ್ಲಿ ಭಾರತವು 2013 ರ ಚಾಂಪಿಯನ್ಸ್ ಟ್ರೋಫಿಯ ಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ಜಯಗಳಿಸಿತ್ತು. ಆದರೆ ಆ ಗೆಲುವು ಕೂಡ ಒಂದು ತಿರುವು ಪಡೆದಿತ್ತು. ಜೂನ್ 23 ರ ಭಾನುವಾರದಂದು ಪ್ರಾರಂಭವಾದ ಪಂದ್ಯವು ಮಳೆಯಿಂದಾಗಿ ಸ್ಥಗಿತಕೊಂಡು ಜೂನ್ 24 ಸೋಮವಾರದವರೆಗೆ ಮುಂದುವರೆಯಿತು, ಅಂದರೆ ಭಾನುವಾರದ ಪಂದ್ಯ ಸೋಮವಾರಕ್ಕೆ ಶಿಫ್ಟ್ ಆಗಿತ್ತು. ಅಚ್ಚರಿಯಂತೆ ಅಂದು ಆ ಪಂದ್ಯವನ್ನು ಭಾರತ ಗೆದ್ದಿತ್ತು.

ಕಳಚುತ್ತಾ ಕರಾಳ ದಾಖಲೆ

ಅಂಕಿ ಅಂಶ ಮತ್ತು ಮೂಢನಂಬಿಕೆಗಳು ಏನೇ ಇದ್ದರೂ ನಾಳಿನ ಪಂದ್ಯ ರೋಹಿತ್ ಮತ್ತು ವಿರಾಟ್ ಕೊಹ್ಲಿಯಂತಹ ಹಿರಿಯ ಆಟಗಾರರಿಗೆ ಮಹತ್ವದ ಪಂದ್ಯವಾಗಿದ್ದು, ಇದು ಅವರ ಕೊನೆಯ ಐಸಿಸಿ ಟೂರ್ನಿ ಎಂದು ಹೇಳಲಾಗುತ್ತಿದೆ. ಹೀಗಾಗಿ ನಾಳಿನ ಪಂದ್ಯ ಗೆದ್ದು ಹೆಮ್ಮೆಯಿಂದ ತಂಡ ಭಾರತಕ್ಕೆ ಮರಳ ಬೇಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT