ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ಪ್ರಶಸ್ತಿ ಗೆದಿದ್ದು ಈಗ ಇತಿಹಾಸ.. ಆದರೆ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆರಂಭಕ್ಕೂ ಮುನ್ನ ತಂಡ ಪ್ರಕಟಿಸಿದಾಗ ತಂಡದ ಓರ್ವ ಆಟಗಾರನ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿದ್ದವು.
ಹೌದು.. ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗಾಗಿ ತಂಡ ಪ್ರಕಟಿಸಿದಾಗ ಎಲ್ಲರ ಹುಬ್ಬೇರಿಸಿದ್ದು ಅದೊಂದು ಹೆಸರು.. ಅದೇ ಕೆಎಲ್ ರಾಹುಲ್.. ಚಾಂಪಿಯನ್ಸ್ ಟ್ರೋಫಿಗೂ ಮೊದಲು ನಡೆದ ಏಕದಿನ ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಭಾರತ ಆಸ್ಚ್ರೇಲಿಯಾ ಎದುರು ಸೋತಿತ್ತು. ಅಂದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 50 ಓವರ್ಗಳಲ್ಲಿ 240 ರನ್ಗಳಿಸಿ ಇನಿಂಗ್ಸ್ ಅಂತ್ಯಗೊಳಿಸಿತು.
ಅಂದು ಬಲಿಷ್ಠ ಬ್ಯಾಟಿಂಗ್ ಪಡೆಯ ಹೊರತಾಗಿಯೂ ಭಾರತ ಕಡಿಮೆ ರನ್ ಗಳಿಸಿ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿತ್ತು. ಈ ಪಂದ್ಯದಲ್ಲಿ ಸಾಕಷ್ಟು ಬ್ಯಾಟರ್ ಗಳು ವೈಫಲ್ಯ ಅನುಭವಿಸಿದರು ಎಲ್ಲ ಕೆಂಗಣ್ಣಿಗೆ ತುತ್ತಾಗಿದ್ದು ಮಾತ್ರ ಕನ್ನಡಿಗ ಕೆಎಲ್ ರಾಹುಲ್.. ಅಂದು ಕೆಎಲ್ ರಾಹುಲ್ ಸತತ ವಿಕೆಟ್ ಪತನದ ಹೊರತಾಗಿಯೂ ವಿರಾಟ್ ಕೊಹ್ಲಿ ಜೊತೆಗೂಡಿ ಒಂದಷ್ಟು ರನ್ ಗಳಿಸಿಕೊಟ್ಟಿದ್ದರು. 107 ಎಸೆತಗಳನ್ನು ಎದುರಿಸಿ ಕೆಎಲ್ ರಾಹುಲ್ ಕೇವಲ 67 ರನ್ ಕಲೆಹಾಕಿದ್ದರು. ಅಂದರೆ ಅಂದಿನ ಪಂದ್ಯವನ್ನು ಆಸ್ಚ್ರೇಲಿಯಾ ಭರ್ಜರಿಯಾಗಿ ಗೆದ್ದಿತು.
ತೀವ್ರ ಟೀಕೆಗೆ ಗುರಿಯಾಗಿದ್ದ ಕೆಎಲ್ ರಾಹುಲ್
ಅಂದು ಕೆಎಲ್ ರಾಹುಲ್ ರ ನಿಧಾನಗತಿಯ ಬ್ಯಾಟಿಂಗ್ ಟೀಕಿಸಿದ ಅಭಿಮಾನಿಗಳು ಕೆಎಲ್ ರಾಹುಲ್ ಗೆ ಮತ್ತೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದ್ದರು. ರೋಹಿತ್ ಶರ್ಮಾ ಕೃಪೆಯಿಂದಾಗಿ ರಾಹುಲ್ ಗೆ ಪದೇ ಪದೇ ಅವಕಾಶ ಸಿಗುತ್ತಿದೆ ಎಂದು ಟೀಕಿಸಿದ್ದರು. ಆದರೆ ಈ ಎಲ್ಲ ಟೀಕೆಗಳಿಗೆ ಕೆಎಲ್ ರಾಹುಲ್ ತಮ್ಮ ಬ್ಯಾಟ್ ನಿಂದಲೇ ಉತ್ತರ ನೀಡಿದ್ದಾರೆ. ಅದೂ ಕೂಡ ಪ್ರಶಸ್ತಿ ಜಯಿಸುವ ಮೂಲಕ..
ಹೌದು... ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ನ್ಯೂಜಿಲ್ಯಾಂಡ್ ಮಣಿಸುವ ಮೂಲಕ ಟೀಮ್ ಇಂಡಿಯಾ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಈ ಗೆಲುವಿನಲ್ಲಿ ಬೌಲರ್ಗಳು, ಬ್ಯಾಟರ್ಗಳು ಅದ್ಭುತ ಪ್ರದರ್ಶನ ತೋರಿದರು. ಈ ಪಟ್ಟಿಯಲ್ಲಿ ಕನ್ನಡಿಗ ಕೆಎಲ್ ರಾಹುಲ್ ಪಾತ್ರವೂ ಪ್ರಮುಖವಾಗಿದೆ. ಅಂದು ಕ್ರಿಕೆಟ್ ಅಭಿಮಾನಿಗಳಿಂದ ಟೀಕೆಗೆ ಗುರಿಯಾಗಿದ್ದ ರಾಹುಲ್ ಇಂದು ಅವರಿಂದಲೇ ಶಹಬ್ಬಾಶ್ ಪಡೆಯುತ್ತಿದ್ದಾರೆ. ವಿಕೆಟ್ ಕೀಪಿಂಗ್ ಜೊತೆಗೆ ಬ್ಯಾಟಿಂಗ್ನಲ್ಲೂ ಮಿಂಚಿ ಪಂದ್ಯವನ್ನು ಜವಾಬ್ದಾರಿಯಿಂದ ಫಿನಿಶ್ ಮಾಡಿದ್ದಾರೆ.
ಬೆಸ್ಟ್ ಫಿನಿಶರ್
ರಾಹುಲ್ ಈ ಟೂರ್ನಿಯಲ್ಲಿ 4 ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಿ 140 ರನ್ ಸಿಡಿಸಿದ್ದಾರೆ. ಬಾಂಗ್ಲಾದೇಶದ ವಿರುದ್ಧ ಅಜೇಯ 47 ರನ್, ನ್ಯೂಜಿಲ್ಯಾಂಡ್ ವಿರುದ್ಧ ಕೊನೆಯ ಲೀಗ್ ಪಂದ್ಯದಲ್ಲಿ 23, ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್ಪಂದ್ಯದಲ್ಲಿ ಅಜೇಯ 42, ಇದೀಗ ಫೈನಲ್ನಲ್ಲಿ ಅಜೇಯ 34 ರನ್ಗಳಿಸಿದ್ದರು. ಗಮನಿಸಬೇಕಾದ ಅಂಶ ಎಂದರೆ ಈ ಎಲ್ಲ ಪ್ರದರ್ಶನಗಳು ಪಂದ್ಯದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ್ದವು. ಈ ಮೂಲಕ ಕೆಎಲ್ ರಾಹುಲ್ ಈಗ ತಂಡದ ಅತ್ಯುತ್ತಮ ಫಿನಿಷರ್ ಆಗಿ ಹೊರಹೊಮ್ಮಿದ್ದಾರೆ.
ವೈಯುಕ್ತಿಕ ದಾಖಲೆ ಅಲ್ಲ,.. ಪಂದ್ಯ ಗೆಲ್ಲೋದು ಮುಖ್ಯ
ತಮ್ಮ ಪ್ರದರ್ಶನದ ಜೊತೆ ಜೊತೆಗೇ ಕೆಎಲ್ ರಾಹುಲ್ ವೈಯುಕ್ತಿಕ ದಾಖಲೆ ಅಲ್ಲ,ಪಂದ್ಯ ಗೆಲ್ಲೋದು ಮುಖ್ಯ ಎಂದು ತೋರಿಸಿಕೊಟ್ಟಿದ್ದು, ಮಾತ್ರವಲ್ಲದೇ ತಂಡವಾಗಿ ಆಡುವುದು ಮುಖ್ಯ ಎಂದು ತೋರಿಸಿಕೊಟ್ಟಿದ್ದಾರೆ.