ರಿಷಭ್ ಪಂತ್ 
ಕ್ರಿಕೆಟ್

IPL 2025: 'ಪೂರನ್, ನೀನು ಗ್ಲೌಸ್‌ಗಳನ್ನು ತೆಗೆದುಕೋ..' ಎಂದು ಹೇಳುವ ಸಮಯ ಬಂದಿದೆ; ರಿಷಭ್ ಪಂತ್‌ಗೆ ಆ್ಯರನ್ ಫಿಂಚ್ ಸಲಹೆ

2016ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಗೆ ಪದಾರ್ಪಣೆ ಮಾಡಿದ ನಂತರ ಐಪಿಎಲ್ 2025ರ ಆವೃತ್ತಿಯು ರಿಷಭ್ ಪಂತ್ ಅವರ ಪಾಲಿಗೆ ಇದು ಅತ್ಯಂತ ಕೆಟ್ಟ ಆವೃತ್ತಿಯಾಗಿದೆ.

ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಮತ್ತು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿರುವ ರಿಷಭ್ ಪಂತ್ ಇದೀಗ ಕಳಪೆ ಫಾರ್ಮ್ ಎದುರಿಸುತ್ತಿದ್ದಾರೆ. ಬರೋಬ್ಬರಿ 27 ಕೋಟಿ ರೂಪಾಯಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಭಿಕರಿಯಾಗಿರುವ ಪಂತ್, ಆಡಿರುವ ಹತ್ತು ಇನಿಂಗ್ಸ್‌ಗಳಲ್ಲಿ ಕೇವಲ 128 ರನ್‌ಗಳನ್ನು ಗಳಿಸಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ, ಪಂತ್ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದರು. ಆದರೆ, 237 ರನ್‌ ಗುರಿಯನ್ನು ಬೆನ್ನಟ್ಟುವಾಗ 17 ಎಸೆತಗಳಲ್ಲಿ ಕೇವಲ 18 ರನ್‌ಗಳನ್ನು ಗಳಿಸಿ ಔಟ್ ಆದರು. ಎಲ್‌ಎಸ್‌ಜಿ ಅಂತಿಮವಾಗಿ 37 ರನ್‌ಗಳಿಂದ ಸೋಲು ಕಂಡಿತು. ಆಡಿರುವ 11 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.

ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್ ಆ್ಯರನ್ ಫಿಂಚ್, ಪಂತ್ ಅವರು ವಿಕೆಟ್ ಕೀಪಿಂಗ್ ಪಾತ್ರವನ್ನು ನಿಕೋಲಸ್ ಪೂರನ್ ಅವರಿಗೆ ವಹಿಸಬೇಕೆಂದು ಸಲಹೆ ನೀಡಿದ್ದಾರೆ.

'ವಿಕೆಟ್ ಕೀಪರ್ ಆಗಿರುವಾಗ ತಂಡವನ್ನು ಮುನ್ನಡೆಸುವುದು ನಿಜಕ್ಕೂ ಕಷ್ಟಕರವಾಗಿರುತ್ತದೆ. ಓವರ್‌ಗಳ ನಡುವೆ ನಿಮ್ಮ ಬೌಲರ್‌ನೊಂದಿಗೆ ಮಾತನಾಡಲು ನಿಮಗೆ ಬಹುಶಃ ಒಂದೆರಡು ಸೆಕೆಂಡುಗಳು ಸಿಗಬಹುದು ಮತ್ತು ಸ್ಟಾಪ್-ಕ್ಲಾಕ್ ನಿಯಮದಿಂದ ಆ ಸಮಯವೂ ಕಡಿಮೆ ಇರುತ್ತದೆ. ಹೀಗಾಗಿ, ಅದು ನಿಜವಾಗಿಯೂ ಕಷ್ಟವಾಗಿರುತ್ತದೆ. ಬೌಲರ್‌ನ ಯೋಜನೆ ಚೆಂಡಿನಿಂದ ಚೆಂಡಿಗೆ ಬದಲಾಗಬಹುದು ಮತ್ತು ರಿಷಭ್‌ ಅವರ ಯೋಜನೆಯೂ ಸಹ. ಯೋಜಿಸಿದಂತೆ ಫಲಿತಾಂಶ ಸಿಗದಿದ್ದಾಗ ಅವರು ಎಷ್ಟು ನಿರಾಶೆಗೊಂಡಿದ್ದಾರೆ ಎಂಬುದನ್ನು ನೀವು ನೋಡಬಹುದು' ಎಂದು ಫಿಂಚ್ ಜಿಯೋಸ್ಟಾರ್‌ಗೆ ತಿಳಿಸಿದರು.

'ಬಹುಶಃ ಅವರು, 'ಪೂರನ್, ನೀನು ಈ ಗ್ಲೌಸ್‌ಗಳನ್ನು ತೆಗೆದುಕೋ. ನಾನು ರಿದಮ್ ಅನ್ನು ಪಡೆಯಬೇಕು, ಯೋಜನೆಗಳನ್ನು ಉತ್ತಮವಾಗಿ ಕಾರ್ಯಗತಗೊಳಿಸಬೇಕು ಮತ್ತು ನನ್ನ ಯೋಜನೆಗಳೊಂದಿಗೆ ನಾನು ನೇರವಾಗಿ ಮಾತನಾಡಬೇಕು' ಎಂದು ಹೇಳುವ ಸಮಯ ಬಂದಿದೆ' ಎಂದಿದ್ದಾರೆ.

2016ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಗೆ ಪದಾರ್ಪಣೆ ಮಾಡಿದ ನಂತರ ಐಪಿಎಲ್ 2025ರ ಆವೃತ್ತಿಯು ರಿಷಭ್ ಪಂತ್ ಅವರ ಪಾಲಿಗೆ ಇದು ಅತ್ಯಂತ ಕೆಟ್ಟ ಆವೃತ್ತಿಯಾಗಿದೆ. 122 ಐಪಿಎಲ್ ಪಂದ್ಯಗಳಲ್ಲಿ, ಪಂತ್ 19 ಅರ್ಧಶತಕ ಮತ್ತು 33.13 ರ ಸರಾಸರಿಯಲ್ಲಿ ಶತಕ ಸೇರಿದಂತೆ 3412 ರನ್ ಗಳಿಸಿದ್ದಾರೆ.

ಐಪಿಎಲ್ 2025 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ನಾಯಕ ರಿಷಭ್ ಪಂತ್ ತಮ್ಮ ರೋಲ್ ಮಾಡೆಲ್ ಎಂಎಸ್ ಧೋನಿ ಅವರನ್ನು ಸಂಪರ್ಕಿಸಬೇಕು ಎಂದು ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT