ಯುಎಇ ಮತ್ತು ಕತಾರ್ ನಡುವಿನ ಪಂದ್ಯ 
ಕ್ರಿಕೆಟ್

All Out for 'No Loss': ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು.. ಶೂನ್ಯ ರನ್ ಗೆ 10 ಮಂದಿ Retire Out; ಪಂದ್ಯ ಗೆಲ್ಲಲು ವಿಲಕ್ಷಣ ತಂತ್ರ! Video

ಮೇ 10ರಂದು ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ ಏಷ್ಯಾ ಕ್ವಾಲಿಫೈಯರ್ ಪಂದ್ಯದಲ್ಲಿ ಈ ಘಟನೆ ನಡೆದಿದ್ದು, ಯುಎಇ ಮತ್ತು ಕತಾರ್ ತಂಡ ನಡುವಿನ ಪಂದ್ಯದಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ.

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತಂಡವೊಂದರ ಎಲ್ಲ 10 ಬ್ಯಾಟರ್ ಗಳು ಶೂನ್ಯ ರನ್ ಅಂತರದಲ್ಲಿ Retire Out ಆಗಿದ್ದಾರೆ.

ಈಗ್ಗೆ ಕೆಲ ದಿನಗಳ ಹಿಂದೆ ಐಪಿಎಲ್ ಟೂರ್ನಿಯಲ್ಲಿ ರಿಟೈರ್ ಔಟ್ ವಿಚಾರವಾಗಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕ್ರಿಕೆಟ್ ಪ್ರೇಮಿಗಳ ಆಕ್ರೋಶಕ್ಕೆ ತುತ್ತಾಗಿದ್ದವು. ಅಂದು ಮುಂಬೈ ಇಂಡಿಯನ್ಸ್ ತಂಡ ತಿಲಕ್ ವರ್ಮಾ ಮತ್ತು ಸಿಎಸ್ ಕೆಯ ಡಿವಾನ್ ಕಾನ್ವೆ ಅವರನ್ನು ರಿಟೈರ್ಡ್ ಔಟ್ ಮಾಡಿದ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು.

ಅಲ್ಲದೆ ಈ ಇಬ್ಬರು ಆಟಗಾರರನ್ನು ರಿಟೈರ್ ಔಟ್ ಮಾಡಿದ್ದಕ್ಕೇ ಎರಡೂ ತಂಡಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಇಲ್ಲೊಂದು ತಂಡ ತನ್ನ 10 ಬ್ಯಾಟರ್ ಗಳನ್ನೂ ರಿಟೈರ್ ಔಟ್ ಮಾಡಿದೆ.

ಅಚ್ಟರಿಯಾದರೂ ಇದು ಸತ್ಯ... ಮೇ 10ರಂದು ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ ಏಷ್ಯಾ ಕ್ವಾಲಿಫೈಯರ್ ಪಂದ್ಯದಲ್ಲಿ ಈ ಘಟನೆ ನಡೆದಿದ್ದು, ಯುಎಇ ಮತ್ತು ಕತಾರ್ ತಂಡ ನಡುವಿನ ಪಂದ್ಯದಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ.

ಮೊದಲು ಬ್ಯಾಟಿಂಗ್ ಮಾಡಿದ ಯುಎಇ ತಂಡದ ಆರಂಭಿಕ ಆಟಗಾರ್ತಿಯರಾದ ತೀರ್ಥ ಸತೀಶ್ ಮತ್ತು ನಾಯಕಿ ಇಶಾ ರೋಹಿತ್ ಓಜಾ ತಂಡಕ್ಕೆ ಅದ್ಭುತ ಆರಂಭ ನೀಡಿದರು. ಈ ಜೋಡಿ ಕೇವಲ 16 ಓವರ್‌ಗಳಲ್ಲಿ 192 ರನ್‌ಗಳ ಜೊತೆಯಾಟ ಆಡಿತು. ಓಜಾ 55 ಎಸೆತಗಳಲ್ಲಿ 14 ಬೌಂಡರಿ ಮತ್ತು ಐದು ಸಿಕ್ಸರ್‌ಗಳೊಂದಿಗೆ 113 ರನ್ ಗಳಿಸಿದರು. ಅಂತೆಯೇ ಅವರಿಗೆ ಉತ್ತಮ ಸಾಥ್ ನೀಡಿದ ತೀರ್ಥ ಸತೀಶ್ 42 ಎಸೆತಗಳಲ್ಲಿ 11 ಬೌಂಡರಿ ಸೇರಿದಂತೆ 74 ರನ್ ಗಳಿಸಿದರು.

ಪಂದ್ಯ ಗೆಲ್ಲಲು ವಿಲಕ್ಷಣ ತಂತ್ರ

ಇನ್ನು ಬ್ಯಾಟಿಂಗ್ ನಲ್ಲಿ ತಂಡ ಉತ್ತಮ ಸ್ಥಿತಿಯಲ್ಲಿದೆ ಎಂದು ಅರಿತ ಯುಎಇ ತಂಡ ಬಳಿಕ ಪಂದ್ಯ ಗೆಲ್ಲಲು ವಿಲಕ್ಷಣ ತಂತ್ರ ಅನುಸರಿಸಿತು. ಯುಎಇ ಮಹಿಳಾ ತಂಡ ಎದುರಾಳಿ ಕತಾರ್ ವಿರುದ್ಧ ಪಂದ್ಯವನ್ನು ಶತಾಯಗತಾಯ ಗೆಲ್ಲುವ ಸಲುವಾಗಿ ತನ್ನೆಲ್ಲಾ ಬ್ಯಾಟರ್ ಗಳನ್ನು ರಿಟೈರ್ಡ್ ಔಟ್ ಎಂದು ಘೋಷಿಸುವ ನಿರ್ಧಾರಕ್ಕೆ ಬಂದಿತು. ಅದರಂತೆ ಪಂದ್ಯದ ಸಮಯ ಉಳಿಸುವ ನಿರ್ಧಾರಕ್ಕೆ ಬಂದ ಯುಎಐ ತಂಡದ ಎಲ್ಲ ಆಟಗಾರ್ತಿಯರೂ ಕ್ರೀಸ್ ಗೆ ಬಂದು ಅದೇ ಸಮಯದಲ್ಲಿ ಪೆವಿಲಿಯನ್ ಸೇರಿಕೊಂಡರು. ಆ ಮೂಲಕ ಶೂನ್ಯ ರನ್ ಅಂತರದಲ್ಲಿ ತಂಡದ ಎಲ್ಲ 10 ಆಟಗಾರ್ತಿಯರು ರಿಟೈರ್ ಔಟ್ ಆದರು. ಆ ಮೂಲಕ ಕತಾರ್ ತಂಡಕ್ಕೆ ಗೆಲ್ಲಲು 193 ರನ್ ಗಳ ಬೃಹತ್ ಗುರಿ ನೀಡಿದರು.

ಈ ಬೃಹತ್ ಗುರಿ ಬೆನ್ನು ಹತ್ತಿದ ಕತಾರ್ ತಂಡ ಕೇವಲ 29 ರನ್ ಗಳಿಗೆ ಆಲೌಟ್ ಆಯಿತು. ಯುಎಇ ಪರ ಎಡಗೈ ಸ್ಪಿನ್ನರ್ ಮಿಚೆಲ್ ಬೋಥಾ 3 ವಿಕೆಟ್ ಪಡೆದರೆ, ಕ್ಯಾಟಿ ಥಾಮ್ಸನ್ 2 ವಿಕೆಟ್ ಉರುಳಿಸಿದರು. ಉಳಿದಂತೆ ಇಶಾ, ಹೀನಾ ಹೊಚ್ಚಂದಾನಿ, ಇಂಧುಜಾ ನಂದ ಕುಮಾರ್ ಮತ್ತು ವೈಷ್ಣವೆ ಮಹೇಶ್ ತಲಾ ಒಂದೊಂದು ವಿಕೆಟ್ ಪಡೆದರು. ಅಮೋಘ ಶತಕ ಬಾರಿಸಿದ ಯುಎಇ ನಾಯಕಿ ಈಶಾ ಓಜಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಟೂರ್ನಿಯ ಬಿ ಗುಂಪಿನಲ್ಲಿರುವ ಯುಎಇ ತಂಡವು ಆಡಿರುವ ಎರಡೂ ಪಂದ್ಯಗಳನ್ನು ಗೆದ್ದು 4 ಸ್ಥಾನಗಳೊಂದಿಗೆ ಅಗ್ರಸ್ಥಾನಿಯಾಗಿದೆ. ಯುಎಇ ತಂಡದ ನೆಟ್ ರನ್ ರೇಟ್ +6.998 ಆಗಿದೆ.

ಮಳೆ ಭೀತಿ ಕಾರಣ

ಅಂದಿನ ಪಂದ್ಯಕ್ಕೆ ಮಳೆ ಇತ್ತು. ಹೀಗಾಗಿ ಪಂದ್ಯವನ್ನು ಬೇಗ ಮುಗಿಸುವ ಇರಾದೆ ಯುಎಇ ತಂಡಕ್ಕಿತ್ತು. ಮಳೆ ಬಂದು ಪಂದ್ಯ ರದ್ದುಗೊಂಡರೆ ಎಂಬ ಕಾರಣಕ್ಕೆ ಬೇಗ ಮುಗಿಸಲು ಸಂಕಲ್ಪ ಮಾಡಿದ್ದ ಯುಎಇ ತಂಡ 16 ಓವರ್ ಗಳಲ್ಲಿ 192 ರನ್ ಗಳಿಸಿದ್ದ ವೇಳೆ ತನ್ನ ಹತ್ತೂ ಆಟಗಾರರನ್ನು ರಿಟೈರ್ ಔಟ್ ಆಗಿ ಹಿಂದಕ್ಕೆ ಕರೆಸಿಕೊಂಡಿತು. ಆ ಬಳಿಕ ಎದುರಾಳಿ ಕತಾರ್ ತಂಡವನ್ನು ಕೇವಲ 29 ರನ್ ಗೆ ಆಲೌಟ್ ಮಾಡಿ 163 ರನ್ ಅಂತರದಲ್ಲಿ ಗೆದ್ದು ಬೀಗಿದೆ.

ತಂಡದ ನಿರ್ಧಾರ

ಯುಎಇ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆರಂಭಿಕ ಆಟಗಾರ್ತಿಯರಾದ ತೀರ್ಥಾ ಸತೀಶ್(42 ಎಸೆತಗಳಲ್ಲಿ 74 ರನ್) ಮತ್ತು ನಾಯಕಿ ಈಶಾ ರೋಹಿತ್ ಓಜಾ(55 ಎಸೆತಗಳಲ್ಲಿ 113 ರನ್) ಅವರು 16 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 192 ರನ್ ಗಳನ್ನು ಕಲೆ ಹಾಕಿದ್ದರು. ಈ ಸಂದರ್ಭದಲ್ಲಿ ಮಳೆಯಾಗುವ ಎಲ್ಲ ಮುನ್ಸೂಚನೆಯಿತ್ತು. ಹೀಗಾಗಿ ಯುಎಇ ತನ್ನ ಪಾಲಿನ ಇನ್ನಿಂಗ್ಸ್ ಬೇಗ ಮುಗಿಸಬೇಕಿತ್ತು. ಟೆಸ್ಟ್ ನಲ್ಲಾದರೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವ ಮೂಲಕ ಎದುರಾಳಿ ತಂಡಕ್ಕೆ ಗುರಿ ನಿಗದಿಪಡಿಸಬಹುದು. ಆದರೆ ಏಕದಿನದಲ್ಲಾಗಲಿ, ಟಿ20 ಪಂದ್ಯಗಳಲ್ಲಾಗಳಲ್ಲಿ ಇದಕ್ಕೆ ಅವಕಾಶವಿಲ್ಲ.

ಹೀಗಾಗಿ ಪಂದ್ಯವನ್ನು ಗೆಲ್ಲಲು ಇಷ್ಟು ರನ್ ಗಳು ಸಾಕು ಎಂಬ ತೀರ್ಮಾನಕ್ಕೆ ಬಂದ ಯುಎಇ ತಂಡದ ಮ್ಯಾನೇಜ್ ಮೆಂಟ್ ಎಲ್ಲಾ ಬ್ಯಾಟರ್ ಗಳು ರಿಟೈರ್ ಔಟ್ ಆಗಿ ಇನ್ನಿಂಗ್ಸ್ ಮುಗಿಸಬೇಕು ಎಂಬ ತೀರ್ಮಾನಕ್ಕೆ ಬಂದಿತು. ಹೀಗಾಗಿ ಯುಎಇ ತಂಡ ಹೊಸ ತಂತ್ರಕ್ಕೆ ಮೊರೆ ಹೋಯಿತು. ಎಲ್ಲಾ ಆಟಗಾರ್ತಿಯರು ಕ್ರೀಸಿಗೆ ಬಂದು ಹಾಗೆಯೇ ರಿಟೈರ್ ಔಟ್ ಎಂದು ಘೋಷಿಸಿ ಪೆವಿಲಿಯನ್ ಗೆ ಹಿಂದಿರುಗಿದರು. ಹೀಗೆ ಯುಎಇಯ 10ಕ್ಕೆ ಹತ್ತೂ ಬ್ಯಾಟರ್ ಗಳು ಇದೇ ತಂತ್ರವನ್ನು ಅನುಸರಿಸಿದಾಗ ತಂಡ ಆಲೌಟ್ ಎಂದು ಘೋಷಿತವಾಗಿ ಎದುರಾಳಿ ತಂಡಕ್ಕೆ 193 ರನ್ ಗಳ ಗುರಿ ನೀಡಲಾಯಿತು.

ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು

ಹೀಗೆ ಹತ್ತಕ್ಕೆ ಹತ್ತೂ ಮಂದಿ ಈ ವಿಧಾನದಲ್ಲಿ ಔಟ್ ಆಗಿದ್ದು ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲು. ಆರಂಭಿಕರಿಬ್ಬರನ್ನು ಹೊರತುಪಡಿಸಿದರೆ ಉಳಿದ 8 ಮಂದಿ ಒಂದೇ ಒಂದು ಎಸೆತವನ್ನೂ ಎದುರಿಸದೆ ಪೆವಿಲಿಯನ್ ಗೆ ಮರಳಿದ್ದಾರೆ.

ಮಹಿಳಾ ಕ್ರಿಕೆಟ್ ಇರಲಿ, ಪುರುಷರ ಕ್ರಿಕೆಟ್ ಇರಲಿ ಇಂತಹ ಘಟನೆಯೇ ಈವರೆಗೆ ನಡೆದಿಲ್ಲ. ಇದು T20I ನಿಯಮಗಳ ಅಡಿಯಲ್ಲಿ ಒಂದು ವಿಶಿಷ್ಟವಾದರೂ ಕಾನೂನುಬದ್ಧ ತಂತ್ರವಾಗಿದೆ.

ಅಂದಹಾಗೆ ಯುಎಇ ತಂಡವು ಮೇ 13 ರಂದು ಅಂದರೆ ನಾಳೆ ಗುಂಪಿನ ಮತ್ತೊಂದು ತಂಡವಾಗಿರುವ ಮಲೇಷ್ಯಾ ವಿರುದ್ಧ ಮುಂದಿನ ಪಂದ್ಯವನ್ನು ಆಡಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West-Asia war: 48 ಗಂಟೆಗಳಲ್ಲಿ ಹೋರ್ಮುಜ್ ಜಲಸಂಧಿ ತೆರೆಯದಿದ್ದರೆ ಇರಾನ್‌ನಲ್ಲಿ ನರಕ ಸೃಷ್ಟಿಸುತ್ತೇವೆ; Trump ಕೊನೇಯ ಎಚ್ಚರಿಕೆ!

IPL 2026: ಅಹಮದಾಬಾದ್ ಮೈದಾನದಲ್ಲಿ RR ವಿರುದ್ಧ ಅತ್ಯಧಿಕ ರನ್ ಚೇಸ್‌ನಲ್ಲಿ ಕೊನೆಯ ಓವರ್‌ನಲ್ಲಿ ಸೋತ Gujarat Titans

ವಿದೇಶಗಳ Mk-84 ಗೆ ಪರ್ಯಾಯ, ಆತ್ಮನಿರ್ಭರತೆಗೆ ಉತ್ತೇಜನ: ದೇಶೀಯವಾಗಿ 1000-kg ವಾಯುಬಾಂಬ್‌ ತಯಾರಿಸಲಿರುವ ಭಾರತ!

ಮಾಗಡಿ Congress ಶಾಸಕ ಹೆಚ್​​.ಸಿ ಬಾಲಕೃಷ್ಣಗೆ ಕೋರ್ಟ್ ಶಾಕ್​​: ಜಾಮೀನು ರಹಿತ ವಾರೆಂಟ್ ಜಾರಿ

'ನೀವೇನು ಸುರಕ್ಷಿತ ಅಲ್ಲ': ಟ್ರಂಪ್ 48 ಗಂಟೆಗಳ ಕೊನೆ ಎಚ್ಚರಿಕೆ ಬೆನ್ನಲ್ಲೆ CIA Station ಗೆ ಡ್ರೋನ್ ನುಗ್ಗಿಸಿ ಇರಾನ್; 1 ನಿಮಿಷದ ಅಂತರದಲ್ಲಿ 2 ಸ್ಫೋಟ!

SCROLL FOR NEXT