ಜೋಶ್ ಹ್ಯಾಜಲ್ ವುಡ್ 
ಕ್ರಿಕೆಟ್

IPL 2025: ಪ್ಲೇ-ಆಫ್ ಗೂ ಮುನ್ನ RCB ಗೆ ಜೋಶ್ ಹೇಜಲ್‌ವುಡ್ ವಾಪಸ್!

ಭುಜ ನೋವಿನಿಂದ ಗುಣಮುಖರಾಗಿರುವ ತಂಡದ ಪ್ರಮುಖ ವೇಗದ ಬೌಲರ್ ಹ್ಯಾಜಲ್ ವುಡ್ ಏಪ್ರಿಲ್ 27ರಂದು ಕೊನೆಯದಾಗಿ ಆಡಿದ್ದರು.

ಬೆಂಗಳೂರು: ಐಪಿಎಲ್ ಪ್ಲೇ-ಆಫ್ ಪಂದ್ಯಗಳು ಮೇ 29 ರಿಂದ ಆರಂಭವಾಗಲಿವೆ. ಈಗಾಗಲೇ ಪ್ಲೇ-ಆಫ್ ಪ್ರವೇಶ ಮಾಡಿರುವ ನಾಲ್ಕು ತಂಡಗಳು ಮೊದಲ ಎರಡು ಸ್ಥಾನಗಳಿಗಾಗಿ ಪೈಪೋಟಿ ನಡೆಸುತ್ತಿವೆ. ಈ ಮಧ್ಯೆ ಪ್ಲೇ ಆಫ್ ಪಂದ್ಯಗಳಿಗೂ ಮುನ್ನಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಸ್ಟ್ರೇಲಿಯನ್ ವೇಗಿ ಜೋಶ್ ಹೇಜಲ್‌ವುಡ್ ಮರಳಿದ್ದಾರೆ.

ಭುಜ ನೋವಿನಿಂದ ಗುಣಮುಖರಾಗಿರುವ ತಂಡದ ಪ್ರಮುಖ ವೇಗದ ಬೌಲರ್ ಹೇಜಲ್‌ವುಡ್ ಏಪ್ರಿಲ್ 27ರಂದು ಕೊನೆಯದಾಗಿ ಆಡಿದ್ದರು. ಸುಮಾರು ಒಂದು ತಿಂಗಳ ನಂತರ ಮೇ 27 ರಂದು ಲಖನೌದಲ್ಲಿ ನಡೆಯಲಿರುವ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯಕ್ಕೆ ಲಭ್ಯವಾಗಲಿದ್ದಾರೆ ಎನ್ನಲಾಗಿದೆ. ಇದು ಆರ್ ಸಿಬಿ ಅಭಿಮಾನಿಗಳಿಗೆ ಖುಷಿ ನೀಡಿದೆ.

34 ವರ್ಷ ವಯಸ್ಸಿನ ಜೋಶ್ ಹೇಜಲ್‌ವುಡ್ ತಂಡಕ್ಕೆ ಕಂಬ್ಯಾಕ್ ಈ ವರ್ಷ ಚೊಚ್ಚಲ ಪ್ರಶಸ್ತಿಯ ಕನಸು ಕಂಡಿರುವ ಆರ್ ಸಿಬಿ ಕನಸನ್ನು ಇಮ್ಮಡಿಗೊಳಿಸಿದೆ.

ಈ ಬಾರಿಯ ಐಪಿಎಲ್ ನಲ್ಲಿ ಹೇಜಲ್‌ವುಡ್ 10 ಪಂದ್ಯಗಳಲ್ಲಿ 17.27ರ ಸರಾಸರಿಯಲ್ಲಿ 18 ವಿಕೆಟ್ ಪಡೆದಿದ್ದಾರೆ. ಈಗಾಗಲೇ ಪ್ಲೇಆಫ್‌ಗೆ ಅರ್ಹತೆ ಪಡೆದಿರುವ RCB ಪ್ರಸ್ತುತ ಪಾಯಿಂಟ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಅಗ್ರಸ್ಥಾನಕ್ಕಾಗಿ ಮೇ 27 ರಂದು ನಡೆಯಲಿರುವ ಅಂತಿಮ ಲೀಗ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕಣಕ್ಕಿಳಿಯಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ, ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ 'ಸುಪ್ರೀಂ' ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಗದ್ದುಗೆ ಗುದ್ದಾಟ: 'ಹೈಕಮಾಂಡ್' ನತ್ತ ಎಲ್ಲರ ಚಿತ್ತ, ಮುಂದೇನು?

ಕೇರಳ: ರೂ. 50 ಲಕ್ಷ ಮೌಲ್ಯದ 'ಐಷಾರಾಮಿ ಬೈಕ್' ಬೇಕೆಂದು ಗಲಾಟೆ, ತಂದೆಯಿಂದ ಹಲ್ಲೆಗೊಳಗಾದ ಯುವಕ ಸಾವು!

SCROLL FOR NEXT