ಅಭಿಷೇಕ್ ಶರ್ಮಾ, ವರುಣ್ ಚಕ್ರವರ್ತಿ 
ಕ್ರಿಕೆಟ್

ICC Men's T20 Rankings: ಅಗ್ರಸ್ಥಾನದಲ್ಲಿ ಅಭಿಷೇಕ್ ಶರ್ಮಾ, ವರುಣ್ ಚಕ್ರವರ್ತಿ ಮುಂದುವರಿಕೆ!

ಅಭಿಷೇಕ್ ಶರ್ಮಾ 925 ರೇಟಿಂಗ್ ಪಾಯಿಂಟ್ ಗಳಿಸಿದ್ದು, ಇಂಗ್ಲೆಂಡ್ ನ ಫಿಲ್ ಸಾಲ್ಟ್ ಮತ್ತು ತಿಲಕ್ ವರ್ಮಾ ಅವರಿಗಿಂತ ಮುಂದಿದ್ದಾರೆ.

ದುಬೈ: ಐಸಿಸಿ ಪುರುಷರ ಟಿ-20 ರ‍್ಯಾಂಕಿಂಗ್ ಬುಧವಾರ ಪ್ರಕಟವಾಗಿದ್ದು, ಬ್ಯಾಟರ್ ಹಾಗೂ ಬೌಲರ್ ಗಳ ವಿಭಾಗದಲ್ಲಿ ಕ್ರಮವಾಗಿ ಭಾರತದ ಯುವ ಆಟಗಾರ ಅಭಿಷೇಕ್ ಶರ್ಮಾ ಹಾಗೂ ಸ್ಪಿನ್ನರ್ ವರುಣ್ ಚಕ್ರವರ್ತಿ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ.

ಅಭಿಷೇಕ್ ಶರ್ಮಾ 925 ರೇಟಿಂಗ್ ಪಾಯಿಂಟ್ ಗಳಿಸಿದ್ದು, ಇಂಗ್ಲೆಂಡ್ ನ ಫಿಲ್ ಸಾಲ್ಟ್ ಮತ್ತು ತಿಲಕ್ ವರ್ಮಾ ಅವರಿಗಿಂತ ಮುಂದಿದ್ದಾರೆ. ಭಾರತದ ಟಿ-20 ತಂಡದ ನಾಯಕ ಸೂರ್ಯ ಕುಮಾರ್ ಯಾದವ್ ಎಂಟನೇ ಸ್ಥಾನದಲ್ಲಿದ್ದು, ಅಗ್ರ 10ರಲ್ಲಿ ಸ್ಥಾನ ಪಡೆದಿರುವ ಭಾರತದ ಮತ್ತೋರ್ವ ಆಟಗಾರ ಎನಿಸಿಕೊಂಡಿದ್ದಾರೆ.

ಸ್ಪಿನ್ನರ್ ವರುಣ್ ಚಕ್ರವರ್ತಿ ಅಗ್ರಸ್ಥಾನದಲ್ಲಿ ಮುಂದುವರೆದಿದ್ದು, ವೆಸ್ಟ್ ಇಂಡೀಸ್ ನ ಅಖೀಲ್ ಹುಸೇನ್ ಮತ್ತು ಅಪ್ಘಾನಿಸ್ತಾನದ ರಶೀದ್ ಖಾನ್ ನಂತರದ ಸ್ಥಾನಗಳಿದ್ದಾರೆ.

ಭಾರತದ ಇತರ ಯಾವುದೇ ಬೌಲರ್ ಅಗ್ರ 10ರಲ್ಲಿ ಸ್ಥಾನ ಪಡೆದಿಲ್ಲ. ಭಾರತದ ವಿರುದ್ಧ ಏಕದಿನ ಸರಣಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಆಸ್ಟ್ರೇಲಿಯಾದ ವೇಗಿ ಜೋಶ್ ಹ್ಯಾಜಲ್ ವುಡ್ ಎರಡು ಸ್ಥಾನ ಬಡ್ತಿ ಪಡೆದು ಹತ್ತನೇ ಸ್ಥಾನಕ್ಕೇರಿದ್ದಾರೆ.

ಆಲ್ ರೌಂಡರ್ ಪಟ್ಟಿಯಲ್ಲಿ ಭಾರತದ ಹಾರ್ದಿಕ್ ಪಾಂಡ್ಯ ನಾಲ್ಕನೇ ಸ್ಥಾನದಲ್ಲಿದ್ದಾರೆ. ಈ ವಿಭಾಗದಲ್ಲಿ ಪಾಕಿಸ್ತಾನದ ಸಯೀಮ್ ಅತೂಬ್ ಅಗ್ರಸ್ಥಾನದಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್