ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

Cricket: ಕೇವಲ 11 ರನ್ ಗೆ 3 ವಿಕೆಟ್; ಗೆಲುವಿನ ಸನಿಹ ಬಂದಿದ್ದ ದಕ್ಷಿಣ ಆಫ್ರಿಕಾ ಸೋಲಿನಲ್ಲೂ ದಾಖಲೆಗಳ ಸುರಿಮಳೆ!

ಭಾರತ ನೀಡಿದ್ದ 350 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ತಂಡ 49.2 ಓವರ್ ನಲ್ಲಿ 332 ರನ್ ಗೇ ಆಲೌಟ್ ಆಯಿತು. ಆ ಮೂಲಕ ಕೇವಲ 12 ರನ್ ಅಂತರದಲ್ಲಿ ವಿರೋಚಿತ ಸೋಲು ಕಂಡಿತು.

ಸೋಲಿನಲ್ಲೂ ದಕ್ಷಿಣ ಆಫ್ರಿಕಾ ದಾಖಲೆಗಳ ಸುರಿಮಳೆ!
Srinivasa Murthy VN
Updated On : 1 Dec 2025, 12:20 am

ರಾಂಚಿ: ಭಾರತದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಕೇವಲ 17 ರನ್ ಗಳ ಅಂತರದಲ್ಲಿ ಸೋಲು ಕಂಡಿದ್ದು, ಈ ಸೋಲಿನ ನಡುವೆಯೂ ಆಫ್ರಿಕಾ ತಂಡ ಹಲವು ದಾಖಲೆಗಳನ್ನು ಬರೆದಿದೆ.

ರಾಂಚಿಯ ಜೆಎಸ್‌ಸಿಎ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ 17 ರನ್ ಗಳ ಅಂತರದಲ್ಲಿ ವಿರೋಚಿತ ಜಯ ದಾಖಲಿಸಿತು. ಭಾರತ ನೀಡಿದ್ದ 350 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ತಂಡ 49.2 ಓವರ್ ನಲ್ಲಿ 332 ರನ್ ಗೇ ಆಲೌಟ್ ಆಯಿತು. ಆ ಮೂಲಕ ಕೇವಲ 12 ರನ್ ಅಂತರದಲ್ಲಿ ವಿರೋಚಿತ ಸೋಲು ಕಂಡಿತು.

ಆಫ್ರಿಕಾ ಪರ ಬ್ರಿಟ್ಜ್ಕೆ 72 ರನ್ ಗಳಿಸಿದರೆ, ಜಾನ್ಸನ್ 70 ರನ್ ಮತ್ತು ಬಾಷ್ 67 ರನ್ ಗಳಿಸಿ ಚೇಸಿಂಗ್ ವೇಳೆ ತಂಡಕ್ಕೆ ಬೆನ್ನೆಲುಬಾಗಿ ನಿಂತರು. ಅವರಿಗೆ ಜಾರ್ಜಿ (39) ಮತ್ತು ಡಿವಾಲ್ಡ್ ಬ್ರೇವಿಸ್ (37) ಉತ್ತಮ ಸಾಥ್ ನೀಡಿದರು.

Advertisement

Advertisement

ಸೋಲಿನಲ್ಲೂ ದಾಖಲೆಗಳ ಸುರಿಮಳೆ

ಅಗ್ರ ಕ್ರಮಾಂಕ ಕುಸಿತದ ಹೊರತಾಗಿಯೂ ದಕ್ಷಿಣ ಆಫ್ರಿಕಾದ ಐದು ಬ್ಯಾಟರ್ ಗಳಿಂದ 30+ ಸ್ಕೋರ್ ಮಾಡಿದ್ದಾರೆ. ಇಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮೊದಲ ಮೂರು ವಿಕೆಟ್ ಬೇಗನೆ ಕಳೆದುಕೊಂಡಿತು. ಆದಾಗ್ಯೂ ದಕ್ಷಿಣ ಆಫ್ರಿಕಾದ ಬ್ರಿಟ್ಜ್ಕೆ (72), ಜೇನ್ಸನ್ (70), ಬಾಷ್ (67), ಜಾರ್ಜಿ (39) ಮತ್ತು ಡಿವಾಲ್ಡ್ ಬ್ರೇವಿಸ್ (37) 30ಕ್ಕೂ ಅಧಿಕ ರನ್ ಗಳಿಸಿದ್ದು ವಿಶೇಷವಾಗಿದೆ.

ಏಕದಿನ ಕ್ರಿಕೆಟ್ ನಲ್ಲಿ ಇದು ಜಂಟಿ ಗರಿಷ್ಠ ಮೊತ್ತವಾಗಿದೆ. ಈ ಹಿಂದೆ 2005 ರಲ್ಲಿ ಅಡಿಲೇಡ್ ಓವಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ವೆಸ್ಟ್ ಇಂಡೀಸ್ ಮತ್ತು 2015 ರ WC ಯಲ್ಲಿ ಕ್ರೈಸ್ಟ್‌ಚರ್ಚ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪಾಕಿಸ್ತಾನ ತಂಡದ ಆಟಗಾರರಿಂದ ಇಂತಹ ಪ್ರದರ್ಶನ ಮೂಡಿಬಂದಿತ್ತು.

Also Read

Cricket: ಸಿಬ್ಬಂದಿಗೆ ಚಳ್ಳೆ ಹಣ್ಣು ತಿನ್ನಿಸಿ ಮೈದಾನಕ್ಕೆ ನುಗ್ಗಿದ Virat Kohli ಅಭಿಮಾನಿ! KL Rahul ಕಕ್ಕಾಬಿಕ್ಕಿ! Video

ಚೇಸ್‌ನಲ್ಲಿ ವೈಯಕ್ತಿಕ ಶತಕವಿಲ್ಲದೆ ದಕ್ಷಿಣ ಆಫ್ರಿಕಾದ ಅತ್ಯಧಿಕ ಮೊತ್ತ

ಇನ್ನು ಇಂದು ದಕ್ಷಿಣ ಆಫ್ರಿಕಾ ಗಳಿಸಿದ 332 ರನ್, ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ರನ್-ಚೇಸ್‌ನಲ್ಲಿ ವೈಯಕ್ತಿಕ ಶತಕವಿಲ್ಲದೆ ದಕ್ಷಿಣ ಆಫ್ರಿಕಾ ತಂಡದ ಅತ್ಯಧಿಕ ಮೊತ್ತವಾಗಿದೆ. ಈ ಹಿಂದೆ 2017 ರಲ್ಲಿ ಸೌತಾಂಪ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ 328/5 ಗಳಸಿತ್ತು. ಇಂದಿನ ಪಂದ್ಯದಲ್ಲಿ ಇದನ್ನೂ ಮೀರಿಸಿದೆ. ಅಂದಿನ ಪಂದ್ಯದಲ್ಲೂ ಆಫ್ರಿಕನ್ನರು ಕೇವಲ ಎರಡು ರನ್‌ ಅಂತರದಲ್ಲಿ ಸೋತಿದ್ದರು.

ಗರಿಷ್ಠ ಮೊತ್ತ

ಇಂದಿನ ಪಂದ್ಯದಲ್ಲಿ ಭಾರತ 349 ರನ್ ಗಳಿಸಿದರೆ, ದಕ್ಷಿಣ ಆಫ್ರಿಕಾ 332 ರನ್ ಕಲೆಹಾಕಿ್ತು. ಆ ಮೂಲಕ ಒಟ್ಟಾರೆ ಇಂದಿನ ಪಂದ್ಯದಲ್ಲಿ 681 ರನ್ ಹರಿದುಬಂದಿತ್ತು. ಇದು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಪಂದ್ಯಗಳಲ್ಲಿಅತಿ ಹೆಚ್ಚು ಪಂದ್ಯದ ಒಟ್ಟು ಮೊತ್ತವಾಗಿದೆ.

ಅಂತೆಯೇ ಸಿಕ್ಸರ್ ಗಳ ಎಣಿಕೆಯಲ್ಲೂ ಇದು ದಾಖಲೆಯಾಗಿದ್ದು, ಇಂದಿನ ಪಂದ್ಯದಲ್ಲಿ ಒಟ್ಟು 28 ಸಿಕ್ಸರ್‌ಗಳು ಬಂದಿದ್ದು, ಉಭಯ ತಂಡಗಳ ನಡುವಿನ ಪಂದ್ಯಗಳ ಪೈಕಿ ಇದು ಗರಿಷ್ಠ ಎನ್ನಲಾಗಿದೆ. ಈ ಹಿಂದೆ 2015 ರ ವಾಂಖೆಡೆಯಲ್ಲಿ ನಡೆದ ಸರಣಿಯ ನಿರ್ಣಾಯಕ ಪಂದ್ಯದಲ್ಲಿ 662 ರನ್‌ಗಳು ಬಂದಿತ್ತು. ಅಂದೂ ಕೂಡ 25 ಸಿಕ್ಸರ್‌ಗಳು ಬಂದಿದ್ದವು.

Also Read

ಮೊದಲ ಏಕದಿನ ಪಂದ್ಯ: ದಕ್ಷಿಣ ಆಫ್ರಿಕಾ ಅಬ್ಬರದ ಬ್ಯಾಟಿಂಗ್: ಕೊನೆಯ ಓವರ್ ನಲ್ಲಿ ಭಾರತಕ್ಕೆ ವಿರೋಚಿತ ಜಯ!

ಜಗತ್ತಿನ ಮೊದಲ ತಂಡ

ಇನ್ನು ಕೇವಲ 15 ರನ್ ಗಳಿಸುವಷ್ಟರಲ್ಲೇ ಮೂರು ವಿಕೆಟ್ ಕಳೆದುಕೊಂಡು ಬಳಿಕ 300ಕ್ಕೂ ಅಧಿಕ ರನ್ ಗಳಿಸಿದ ಮೊದಲ ತಂಡ ಎಂಬ ಕೀರ್ತಿಗೂ ದಕ್ಷಿಣ ಆಫ್ರಿಕಾ ಭಾಜನವಾಗಿದೆ. 2019 ರಲ್ಲಿ ಹೆಡಿಂಗ್ಲಿಯಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ 297 ರನ್ ಗೇ ಆಲೌಟ್ ಆಯಿತು. ಅಂದಿನ ಪಂದ್ಯದಲ್ಲೂ ಪಾಕಿಸ್ತಾನ ಕೇವಲ 6 ರನ್ ಗಳಿಗೇ 3 ವಿಕೆಟ್ ಕಳೆದುಕೊಂಡಿತ್ತು.

ಇದಕ್ಕೂ ಮೊದಲು 1997ರಲ್ಲಿ ಸೆಂಚುರಿಯನ್‌ನಲ್ಲಿ ಜಿಂಬಾಬ್ವೆ ವಿರುದ್ಧ 212/5 (7/3 ರಿಂದ) ಮತ್ತು 2024 ರಲ್ಲಿ ಅಬುಧಾಬಿಯಲ್ಲಿ ಐರ್ಲೆಂಡ್ ವಿರುದ್ಧ 215 ಆಲೌಟ್ (10/3 ರಿಂದ) ಆಗಿತ್ತು. ನಂತರ ದಕ್ಷಿಣ ಆಫ್ರಿಕಾ ಏಕದಿನ ಪಂದ್ಯದಲ್ಲಿ 15 ಕ್ಕಿಂತ ಕಡಿಮೆ ರನ್ ಗೆ ಮೂರು ವಿಕೆಟ್‌ಗಳ ನಂತರ 200 ದಾಟಿದ್ದು ಇದು ಕೇವಲ ಮೂರನೇ ಬಾರಿಯಾಗಿದೆ.

300-plus totals after being 3 down for under 15 in ODIs

ಕೆಳ ಕ್ರಮಾಂಕದಲ್ಲಿ ಅರ್ಧಶತಕ

ಇನ್ನು ಇಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಪರ 7 ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಕ್ರೀಸ್ ಗೆ ಬಂದು ಅರ್ಧಶತಕ ಸಿಡಿಸಿದ 5ನೇ ಪಂದ್ಯ ಇದಾಗಿದೆ. ಇಂದಿನ ಪಂದ್ಯದಲ್ಲಿ ಮಾರ್ಕೋ ಜೇನ್ಸನ್ (70) ಮತ್ತು ಕಾರ್ಬಿನ್ ಬಾಷ್ (67) ಅರ್ಧಶತಕ ಗಳಿಸಿದರು.

Multiple 50-plus scores from No.7 or lower for SA in ODIs

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement