ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

Women’s World Cup 2025: ಭಾರತ ಮತ್ತೆ ಪಾಕಿಸ್ತಾನದೊಂದಿಗೆ ಹ್ಯಾಂಡ್‌ಶೇಕ್ ತಿರಸ್ಕರಿಸುತ್ತದೆಯೇ? ಬಿಸಿಸಿಐ ಪ್ರತಿಕ್ರಿಯೆ

ಕೊಲಂಬೊದಲ್ಲಿ ನಡೆಯಲಿರುವ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.

ಮಹಿಳಾ ಕ್ರಿಕೆಟ್ ಆಟಗಾರರು
Ramyashree GN
Updated On : 2 Oct 2025, 1:42 pm

2025ರ ಏಷ್ಯಾ ಕಪ್‌ ಫೈನಲ್‌ನಲ್ಲಿ ಟೀಂ ಇಂಡಿಯಾ ಪಾಕಿಸ್ತಾನದ ವಿರುದ್ಧ ಜಯ ಸಾಧಿಸಿದ್ದು, ಪಂದ್ಯ ಮುಗಿದು ದಿನಗಳೇ ಕಳೆದಿದ್ದರೂ ಹಲವಾರು ವಿಚಾರಗಳು ಇದೀಗ ಮುನ್ನೆಲೆಗೆ ಬಂದಿವೆ. ಪಾಕಿಸ್ತಾನದೊಂದಿಗೆ ಮೂರು ಬಾರಿ ಮುಖಾಮುಖಿಯಾದರೂ ಭಾರತ ಹ್ಯಾಂಡ್‌ಶೇಕ್ ಅನ್ನು ನಿರಾಕರಿಸಿತು ಮತ್ತು ಫೈನಲ್ ಬಳಿಕ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿತು. ಇದೀಗ, ಭಾರತೀಯ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಕೂಡ 2025ರ ಮಹಿಳಾ ವಿಶ್ವಕಪ್ ಘರ್ಷಣೆಯ ಸಮಯದಲ್ಲಿ ಗಮನ ಸೆಳೆಯುವುದು ಖಚಿತ.

ಪಾಕಿಸ್ತಾನ ವಿರುದ್ಧ ಏಕದಿನ ವಿಶ್ವಕಪ್ ಆಡುವಾಗ ಭಾರತೀಯ ಮಹಿಳಾ ತಂಡದ ನಿಲುವು ಪುರುಷರ ತಂಡದಂತೆಯೇ ಇರುತ್ತದೆಯೇ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರನ್ನು ಕೇಳಲಾಯಿತು. ಅವರು 'ಹೌದು ಅಥವಾ ಇಲ್ಲ' ಎಂಬ ರೀತಿಯಲ್ಲಿ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು. ಆದರೆ, ಕಳೆದ ವಾರ ಪಾಕಿಸ್ತಾನದೊಂದಿಗಿನ ಭಾರತದ ಸಂಬಂಧ ಬದಲಾಗಿಲ್ಲ ಎಂದು ಹೇಳಿದರು.

'ನಾನು ಏನನ್ನೂ ಊಹಿಸಲು ಸಾಧ್ಯವಿಲ್ಲ. ಆದರೆ, ಆ ನಿರ್ದಿಷ್ಟ ದೇಶದೊಂದಿಗಿನ ನಮ್ಮ ಸಂಬಂಧ ಒಂದೇ ಆಗಿರುತ್ತದೆ; ಕಳೆದ ವಾರದಲ್ಲಿ ಯಾವುದೇ ಬದಲಾವಣೆ ಇಲ್ಲ' ಎಂದು ಸೈಕಿಯಾ ಬಿಬಿಸಿ ಸ್ಟಂಪ್ಡ್‌ಗೆ ತಿಳಿಸಿದರು.

Advertisement

Advertisement

Also Read

Asia Cup ಹೈಡ್ರಾಮಾ: ಮಹಿಳಾ ವಿಶ್ವಕಪ್ ನಲ್ಲಿ ಏನಾಗುತ್ತದೆ? ಅಕ್ಟೋಬರ್ 5ರ ಪಂದ್ಯ ಮೇಲೆ ಎಲ್ಲರ ಚಿತ್ತ

'ಭಾರತವು ಕೊಲಂಬೊದಲ್ಲಿ ಪಾಕಿಸ್ತಾನದ ವಿರುದ್ಧ ಆ ಪಂದ್ಯವನ್ನು ಆಡಲಿದೆ ಮತ್ತು ಎಲ್ಲ ಕ್ರಿಕೆಟ್ ಪ್ರೋಟೋಕಾಲ್‌ಗಳನ್ನು ಅನುಸರಿಸಲಾಗುತ್ತದೆ. ಕ್ರಿಕೆಟ್‌ನ ಎಂಸಿಸಿ ನಿಯಮಗಳಲ್ಲಿ ಏನೇ ಇರಲಿ, ಅದನ್ನು ಅನುಸರಿಸಲಾಗುತ್ತದೆ ಎಂದು ನಾನು ಭರವಸೆ ನೀಡಬಲ್ಲೆ. ಹ್ಯಾಂಡ್‌ಶೇಕ್‌ಗಳು ಇರಲಿ, ಅಪ್ಪುಗೆಗಳು ಇರಲಿ. ಈ ಕ್ಷಣದಲ್ಲಿ ನಾನು ನಿಮಗೆ ಯಾವುದನ್ನೂ ಭರವಸೆ ನೀಡಲಾರೆ' ಎಂದು ಅವರು ಹೇಳಿದರು.

ಭಾರತ ಮತ್ತು ಪಾಕಿಸ್ತಾನ ನಡುವಿನ ಸದ್ಯದ ರಾಜಕೀಯ ಸಂಬಂಧಗಳನ್ನು ಗಮನಿಸಿದರೆ, ಮಹಿಳಾ ಏಕದಿನ ವಿಶ್ವಕಪ್ ಸಮಯದಲ್ಲಿ ಎರಡೂ ತಂಡಗಳ ನಡುವೆ ಹ್ಯಾಂಡ್‌ಶೇಕ್‌ಗಳು ವಿನಿಮಯವಾಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ.

'ಬಿಸಿಸಿಐ ಸರ್ಕಾರದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ ಮತ್ತು ಟಾಸ್‌ನಲ್ಲಿ ಸಾಂಪ್ರದಾಯಿಕ ಹ್ಯಾಂಡ್‌ಶೇಕ್ ಇರುವುದಿಲ್ಲ. ಪಂದ್ಯದ ರೆಫರಿಯೊಂದಿಗೆ ಫೋಟೋಶೂಟ್ ಇರುವುದಿಲ್ಲ ಮತ್ತು ಪಂದ್ಯದ ಅಂತ್ಯದಲ್ಲಿ ಹ್ಯಾಂಡ್‌ಶೇಕ್ ಇರುವುದಿಲ್ಲ. ಪುರುಷರು ಅನುಸರಿಸುವ ನೀತಿಯನ್ನು ಮಹಿಳೆಯರು ಸಹ ಜಾರಿಗೆ ತರುತ್ತಾರೆ' ಎಂದು ಬಿಸಿಸಿಐ ಮೂಲವೊಂದು ಪಿಟಿಐಗೆ ತಿಳಿಸಿದೆ.

ಅಕ್ಟೋಬರ್ 5 ರಂದು ಕೊಲಂಬೊದಲ್ಲಿ ನಡೆಯಲಿರುವ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement