ಸೂರ್ಯಕುಮಾರ್ ಯಾದವ್  
ಕ್ರಿಕೆಟ್

'ಎಂಎಸ್ ಧೋನಿ ನಾಯಕತ್ವದಲ್ಲಿ ಆಡಲು ಬಯಸಿದ್ದೆ ಆದರೆ...': ಸೂರ್ಯಕುಮಾರ್ ಯಾದವ್ ವಿಷಾದ

35 ವರ್ಷದ ಅವರು 2010 ರಲ್ಲಿ ಮುಂಬೈ ಪರ ದೇಶೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು ಆದರೆ, ಅಂತರರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ಮಿಂಚುವ ಅವಕಾಶಕ್ಕಾಗಿ ಒಂದು ದಶಕಕ್ಕೂ ಹೆಚ್ಚು ಕಾಲ ಕಾಯಬೇಕಾಯಿತು.

ದಂತಕಥೆ ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ತಂಡದೊಂದಿಗೆ ಆಡಲು ಅವಕಾಶ ಸಿಗದಿರುವುದು ದುರದೃಷ್ಟಕರ ಎಂದು ಭಾರತ ಟಿ20ಐ ತಂಡದ ನಾಯಕ ಸೂರ್ಯಕುಮಾರ್ ಯಾದವ್ ತಿಳಿಸಿದ್ದಾರೆ. ಎದುರಾಳಿ ತಂಡದಲ್ಲಿ ಆಡುವಾಗಲೂ ಅವರಿಂದ ಕಲಿಯಲು ಪ್ರಯತ್ನಿಸುತ್ತಿದ್ದೆ ಎಂದಿದ್ದಾರೆ. ಅದ್ಭುತ ಬ್ಯಾಟ್ಸ್‌ಮನ್ ಆಗಿರುವ ಸೂರ್ಯಕುಮಾರ್, 2021 ರಲ್ಲಿ ಅಹಮದಾಬಾದ್‌ನಲ್ಲಿ ಇಂಗ್ಲೆಂಡ್ ವಿರುದ್ಧ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಪದಾರ್ಪಣೆ ಮಾಡಿದರು. ತಮ್ಮ ಚೊಚ್ಚಲ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಅವರಿಗೆ ಅವಕಾಶ ಸಿಗಲಿಲ್ಲ. ಬಳಿಕ ಅವರು ತಮ್ಮ ಅಸಾಂಪ್ರದಾಯಿಕ ಸ್ಟ್ರೋಕ್‌ಪ್ಲೇ ಮೂಲಕ ಜಗತ್ತಿಗೆ ತಮ್ಮನ್ನು ತಾವು ಘೋಷಿಸಿಕೊಂಡರು.

35 ವರ್ಷದ ಅವರು 2010 ರಲ್ಲಿ ಮುಂಬೈ ಪರ ದೇಶೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು ಆದರೆ, ಅಂತರರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ಮಿಂಚುವ ಅವಕಾಶಕ್ಕಾಗಿ ಒಂದು ದಶಕಕ್ಕೂ ಹೆಚ್ಚು ಕಾಲ ಕಾಯಬೇಕಾಯಿತು. ಕಳೆದ ವರ್ಷ, ಟಿ20ಐಗಳಲ್ಲಿ ಅವರು ಟೀಂ ಇಂಡಿಯಾದ ನಾಯಕತ್ವ ವಹಿಸಿಕೊಂಡರು. ಈ ಹಿಂದೆ ರೋಹಿತ್ ಶರ್ಮಾ ಈ ಹುದ್ದೆಯನ್ನು ಅಲಂಕರಿಸಿದ್ದರು.

'ಕ್ಯಾಪ್ಟನ್ ಕೂಲ್' ಧೋನಿ ನೇತೃತ್ವದಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡಿದ್ದಕ್ಕಾಗಿ ಸೂರ್ಯಕುಮಾರ್ ವಿಷಾಧ ವ್ಯಕ್ತಪಡಿಸಿದರು. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಹಲವಾರು ಸಂದರ್ಭಗಳಲ್ಲಿ ಅವರನ್ನು ಎದುರಿಸಿದಾಗಲೂ ಸೂರ್ಯಕುಮಾರ್ ಎಂಎಸ್ ಧೋನಿ ಅವರನ್ನು ಗಮನಿಸುವ ಮೂಲಕ ತನಗೆ ಸಾಧ್ಯವಾದಷ್ಟು ಕಲಿಯಲು ವೇದಿಕೆಯಾಗಿ ಇದನ್ನು ಬಳಸಿಕೊಂಡಿದ್ದಾರೆ.

'ಮೊದಲನೆಯದಾಗಿ, ನಾನು ಹೇಳುತ್ತೇನೆ. ಅವರು ಭಾರತದ ನಾಯಕನಾಗಿದ್ದಾಗ ಅವಕಾಶ ಸಿಗಬೇಕೆಂದು ನನಗೆ ಯಾವಾಗಲೂ ಅನಿಸುತ್ತಿತ್ತು. ಆದರೆ, ನನಗೆ ಅದು ಎಂದಿಗೂ ಸಿಗಲಿಲ್ಲ. ನಾನು ಅವರ ವಿರುದ್ಧ ಆಡಿದಾಗಲೆಲ್ಲಾ ಅವರನ್ನು ಸ್ಟಂಪ್‌ಗಳ ಹಿಂದೆ ನೋಡುತ್ತಿದ್ದೆ. ಅವರು ತುಂಬಾ ಕೂಲ್ ಆಗಿದ್ದಾರೆ. ನಾನು ಅವರ ವಿರುದ್ಧ ಆಡಿದಾಗ ಅವರಿಂದ ಕಲಿತ ಒಂದು ವಿಷಯವೆಂದರೆ ಎಲ್ಲ ಒತ್ತಡದ ಸಂದರ್ಭಗಳಲ್ಲಿಯೂ ನಿರಾಳವಾಗಿರುವುದು. ಅವರು ಆಟವನ್ನು ನೋಡುತ್ತಿರುತ್ತಾರೆ, ಏನಾಗುತ್ತಿದೆ ಎಂಬುದನ್ನು ಗಮನಿಸುತ್ತಾರೆ ಮತ್ತು ನಂತರ ನಿರ್ಧಾರ ತೆಗೆದುಕೊಳ್ಳುತ್ತಾರೆ' ಎಂದು JITO ಕನೆಕ್ಟ್ 2025ರ ಸಂದರ್ಭದಲ್ಲಿ ಸೂರ್ಯಕುಮಾರ್ ಹೇಳಿದರು.

'ವಿರಾಟ್ ಭಾಯ್ ನಾಯಕತ್ವದಲ್ಲಿ ನಾನು ನನ್ನ ಚೊಚ್ಚಲ ಪ್ರವೇಶ ಮಾಡಿದ್ದೇನೆ ಎಂದು ನಾನು ಭಾವಿಸುತ್ತೇನೆ. ವಿರಾಟ್ ಭಾಯ್ ತುಂಬಾ ಕಠಿಣ ಟಾಸ್ಕ್ ಮಾಸ್ಟರ್ ಎಂದು ನಾನು ಭಾವಿಸುತ್ತೇನೆ. ಅವರು ನಿಮ್ಮ ಮಿತಿಗಳನ್ನು ಮೀರಿ ಅತ್ಯುತ್ತಮವಾದದ್ದನ್ನು ಬಯಸುತ್ತಾರೆ. ನನ್ನ ಪ್ರಕಾರ, ಎಲ್ಲ ನಾಯಕರು ಎಲ್ಲ ಆಟಗಾರರಿಂದ ಅತ್ಯುತ್ತಮವಾದದ್ದನ್ನು ಬಯಸುತ್ತಾರೆ. ಆದರೆ, ಅವರು ಮೈದಾನದಲ್ಲಿ ಮತ್ತು ಮೈದಾನದ ಹೊರಗೆಯೂ ಎನರ್ಜಿಯಿಂದ ಇರುತ್ತಿದ್ದರು. ಅವರು ಸ್ವಲ್ಪ ಭಿನ್ನರಾಗಿದ್ದರು' ಎಂದು ಅವರು ಹೇಳಿದರು.

ಬಾರ್ಬಡೋಸ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟಿ20 ವಿಶ್ವಕಪ್ 2024ರ ಫೈನಲ್‌ನಲ್ಲಿ ರೋಹಿತ್ ನೇತೃತ್ವದಲ್ಲಿ ಸೂರ್ಯಕುಮಾರ್ ಪಂದ್ಯ ಗೆಲ್ಲುವ ಕ್ಯಾಚ್ ಪಡೆದರು. ಮುಂಬೈ ಇಂಡಿಯನ್ಸ್ ಮತ್ತು ಭಾರತೀಯ ತಂಡದಲ್ಲಿ ರೋಹಿತ್ ನೇತೃತ್ವದಲ್ಲಿ ಸೂರ್ಯಕುಮಾರ್ ಹಲವಾರು ಪಂದ್ಯಗಳನ್ನು ಆಡಿದ್ದಾರೆ. ರೋಹಿತ್ ಯಾವಾಗಲೂ ಎಲ್ಲರೊಂದಿಗೂ ಮುಕ್ತವಾಗಿರುತ್ತಾರೆ' ಎಂದು ಸೂರ್ಯಕುಮಾರ್ ಬಹಿರಂಗಪಡಿಸಿದರು.

'ನಂತರ ರೋಹಿತ್ ಭಾಯ್ ಅಡಿಯಲ್ಲಿ ನಾನು ಐಪಿಎಲ್ ಫ್ರಾಂಚೈಸಿ ಮತ್ತು ಭಾರತಕ್ಕಾಗಿ ಸಾಕಷ್ಟು ಕ್ರಿಕೆಟ್ ಆಡಿದ್ದೇನೆ. ಅವರು ಎಲ್ಲರನ್ನೂ ಕಂಫರ್ಟ್ ಆಗಿಡುವ ವ್ಯಕ್ತಿ, ಎಲ್ಲ ಯುವಕರಿಗೆ ಸ್ಫೂರ್ತಿ. ಅವರು 24/7 ಎಲ್ಲರಿಗೂ ಲಭ್ಯರಿರುತ್ತಾರೆ. ಅದು ನಾನು ಅವರಿಂದ ಮತ್ತು ಇತರ ನಾಯಕರಿಂದ ಕಲಿತ ವಿಭಿನ್ನ ಗುಣ' ಎಂದು ಅವರು ಮುಕ್ತಾಯಗೊಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರೋಚಕ ಘಟ್ಟ ತಲುಪಿದ 'ಸಿಎಂ ಬದಲಾವಣೆ' ಚರ್ಚೆ: ಡಿಕೆಶಿ ಪರ ಶಾಸಕರು ದಿಢೀರ್ ದೆಹಲಿ ಯಾತ್ರೆ; ಹೈಕಮಾಂಡ್ ಮುಂದೆ ಶಕ್ತಿ ಪ್ರದರ್ಶನಕ್ಕೆ ಸಜ್ಜು!

Delhi Blast: ಮತ್ತೆ 4 ಪ್ರಮುಖ ಆರೋಪಿಗಳ ಬಂಧನ, ಬಂಧಿತರ ಸಂಖ್ಯೆ 6 ಕ್ಕೇರಿಕೆ

Jammu: ದೇಶ ವಿರೋಧಿ ಚಟುವಟಿಕೆ ಆರೋಪ, 'ಕಾಶ್ಮೀರ್ ಟೈಮ್ಸ್' ಕಚೇರಿ ಮೇಲೆ ದಾಳಿ; AK-47 ಕಾರ್ಟ್ರಿಡ್ಜ್‌ಗಳು ಪತ್ತೆ!

ವಾಹನ ಸವಾರರಿಗೆ ಗುಡ್ ನ್ಯೂಸ್: ಮತ್ತೆ ಶೇ.50ರಷ್ಟು ಟ್ರಾಫಿಕ್ ದಂಡ ರಿಯಾಯಿತಿ ಘೋಷಣೆ, ಯಾವಾಗಿಂದ ಗೊತ್ತಾ?

ಯಾವ ಕ್ರಾಂತಿಯು ಇಲ್ಲ, ಕೇವಲ ''ಮಾಧ್ಯಮ ಸೃಷ್ಟಿ''; ನನ್ನ ಸ್ಥಾನ ಈಗಲೂ ಗಟ್ಟಿ, ಮುಂದೆಯೂ ಗಟ್ಟಿ; Video

SCROLL FOR NEXT