ರಾವಲ್ಪಿಂಡಿ: ಸ್ಪಾಟ್ ಫಿಕ್ಸಿಂಗ್ ಹಗರಣದಿಂದ ಆರು ತಿಂಗಳು ನಿಷೇಧ ಶಿಕ್ಷೆಗೆ ಗುರಿಯಾಗಿದ್ದ ಆಸಿಫ್ ಅಫ್ರಿದಿ ಅವರಿಗೆ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಮತ್ತೆ ಅವಕಾಶ ನೀಡಲಾಗಿದೆ.
38ನೇ ವರ್ಷದ ಆಸಿಫ್ ಅಫ್ರಿದಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದ ಮೂಲಕ ಚೊಚ್ಚಲ ಟೆಸ್ಟ್ ಕ್ರಿಕೆಟಿಗೆ ಪದಾರ್ಪಣೆ ಮಾಡಿದ್ದಾರೆ. ಚೊಚ್ಚಲ ಟೆಸ್ಟ್ ಕ್ಯಾಪ್ ಅನ್ನು ವೇಗಿ ಶಾಹೀನ್ ಶಾ ಆಫ್ರಿದಿಯಿಂದ ಪಡೆದರು. ಪ್ರಥಮ ದರ್ಜೆ ಆಟಗಾರನಾಗಿ ಆಫ್ರಿದಿ 57 ಪಂದ್ಯಗಳಲ್ಲಿ 198 ವಿಕೆಟ್ ಪಡೆದಿದ್ದಾರೆ.
ಟೆಸ್ಟ್ ಕ್ಯಾಪ್‌ನೊಂದಿಗೆ ಅಫ್ರಿದಿ ಪಾಕಿಸ್ತಾನ ಕ್ರಿಕೆಟ್ ಇತಿಹಾಸದಲ್ಲಿ 38 ವರ್ಷದಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. 1955 ರಲ್ಲಿ 47 ನೇ ವಯಸ್ಸಿನಲ್ಲಿ ಲಾಹೋರ್‌ನಲ್ಲಿ ಭಾರತದ ವಿರುದ್ಧ ಮಿರಾನ್ ಬಕ್ಷ್ ಟೆಸ್ಟ್ ಕ್ರಿಕೆಟ್ ಗೆ ಚೊಚ್ಚಲ ಎಂಟ್ರಿ ನೀಡಿದ್ದರು.
ದೇಶೀಯ ಕ್ರಿಕೆಟ್‌ನಲ್ಲಿ ಸ್ಪಾಟ್ ಫಿಕ್ಸಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಆಸಿಫ್ ಅಫ್ರಿದಿ ಒಂದು ವರ್ಷ ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು. ಆದರೆ ಶಿಕ್ಷೆ ಪೂರ್ಣಗೊಳ್ಳಲು ಇನ್ನೂ ಆರು ತಿಂಗಳು ಇರುವಂತೆಯೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅವರಿಗೆ ಮತ್ತೆ ಮಣೆ ಹಾಕಿದೆ. ಆದರೆ ನಿಷೇಧವನ್ನು ಸಡಿಲಿಸಲು ಯಾವುದೇ ಕಾರಣವನ್ನು ನೀಡಿಲ್ಲ.