ಸ್ಟೀವ್ ಸ್ಮಿತ್ ಮತ್ತು ಫರ್ಹಾನ್ 
ಕ್ರಿಕೆಟ್

PSL: ಆಸೀಸ್ ಲೆಜೆಂಡ್ ಸ್ಟೀವ್ ಸ್ಮಿತ್ ವಿರುದ್ಧ ಕಡೆಗೂ ಸೇಡು ತೀರಿಸಿಕೊಂಡ ಫರ್ಹಾನ್‌! ಅಂಥಾದ್ದು ಏನಾಯ್ತು? Video ನೋಡಿ..

ಈ ವರ್ಷದ ಆರಂಭದಲ್ಲಿ ಸ್ಮಿತ್ ಮತ್ತು ಬಾಬರ್ ಅಜಂ ಆಡುವಾಗ ಇದೇ ರೀತಿ ನಡೆದಿತ್ತು. ಹೀಗಾಗಿ ಅನೇಕರು ಇದನ್ನು ಸೇಡಿನ ಪ್ರಕರಣ ಎಂದು ಕರೆದಿದ್ದಾರೆ.

ಕರಾಚಿ: ಪಾಕಿಸ್ತಾನಿಗಳು ಸೇಡಿಗಾಗಿ ಎತ್ತಿದ ಕೈ. ಪ್ರತೀಕಾರ ತೀರಿಸಿಕೊಳ್ಳಲು ಕತ್ತಿ ಮಸಿಯುತ್ತಲೇ ಇರುತ್ತಾರೆ. ಅಂತಹುದೇ ಘಟನೆ ಈಗ ಪಾಕಿಸ್ತಾನ ಸೂಪರ್ ಲೀಗ್ (PSL) 2026 ಟೂರ್ನಿಯಲ್ಲಿಯೂ ನಡೆದಿದೆ. ಆಸ್ಚ್ರೇಲಿಯಾದ ಲೆಜೆಂಡ್ ಸ್ಟೀವ್ ಸ್ಮಿತ್ ವಿರುದ್ಧ ಸಾಹಿಬ್ಜಾದಾ ಫರ್ಹಾನ್‌ ಕಡೆಗೂ ತೀರಿಸಿಕೊಂಡಿದ್ದಾರೆ.

ಕ್ವೆಟ್ಟಾ ಗ್ಲಾಡಿಯೇಟರ್ಸ್ v/s ಮುಲ್ತಾನ್ ಸುಲ್ತಾನ್ ನಡುವಿನ ಪಂದ್ಯದ ವೇಳೆ ಇದು ನಡೆದಿದೆ. ಓವರ್ ನ ಅಂತಿಮ ಎಸೆತದಲ್ಲಿ ತನ್ನ ಪಾರ್ಟನರ್ ಆಗಿದ್ದ ಸಾಹಿಬ್ಜಾದಾ ಫರ್ಹಾನ್‌ ಓಡಲು ನಿರಾಕರಿಸಿದ್ದಾರೆ. ಇದರಿಂದ ಸ್ಟೀವ್ ಸ್ಮಿತ್ ತೀವ್ರ ಹತಾಶರಾಗಿದ್ದು, ಫರ್ಹಾನ್‌ ಮೇಲೆ ಸಿಟ್ಟಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ಚರ್ಚೆಯೂ ನಡೆಯುತ್ತಿದೆ.

ಏಕೆಂದರೆ, ಈ ವರ್ಷದ ಆರಂಭದಲ್ಲಿ ಸ್ಮಿತ್ ಮತ್ತು ಬಾಬರ್ ಅಜಂ ಆಡುವಾಗ ಇದೇ ರೀತಿ ನಡೆದಿತ್ತು. ಹೀಗಾಗಿ ಅನೇಕರು ಇದನ್ನು ಸೇಡಿನ ಪ್ರಕರಣ ಎಂದು ಕರೆದಿದ್ದಾರೆ.

ಮುಲ್ತಾನ್ ಸುಲ್ತಾನ್ ಪರ ಬ್ಯಾಟಿಂಗ್ ಮಾಡುತ್ತಿದ್ದ ಸ್ಮಿತ್ ಮೂರನೇ ಓವರ್ ನ ಅಂತಿಮ ಎಸೆತವನ್ನು ಹೊಡೆದು ಸ್ಟ್ರೈಕ್ ಉಳಿದುಕೊಳ್ಳಲು ಸಿಂಗಲ್ ರನ್ ಪಡೆಯಲು ಯತ್ನಿಸಿದರು. ಆದರೆ ಫರ್ಹಾನ್ ಓಡಲೇ ಇಲ್ಲ. ಬದಲಿಗೆ ಸ್ಮಿತ್ ಅವರನ್ನು ಹಿಂದಕ್ಕೆ ಕಳುಹಿಸಿದರು. ಸ್ಮಿತ್ ನಾನ್-ಸ್ಟ್ರೈಕರ್‌ನ ತುದಿಯಲ್ಲಿ ಹತಾಶೆಯಿಂದ ತನ್ನ ತೋಳುಗಳನ್ನು ಮೇಲಕ್ಕೆ ಎಸೆಯುವುದು ಕಂಡುಬಂದಿತು.

ಸಂಭಾವ್ಯ ರನ್-ಔಟ್ ಅಪಾಯದಿಂದ ತಪ್ಪಿಸಿಕೊಳ್ಳಲು ಫರ್ಹಾನ್ ಈ ರೀತಿ ಮಾಡಿದ್ದರೂ, ಇದು ಜನವರಿ 2026 ರ ಬಿಗ್ ಬ್ಯಾಷ್ ಲೀಗ್ (BBL) ನ ಪ್ರತೀಕಾರ ಎಂದು ಪಾಕ್ ಅಭಿಮಾನಿಗಳು ಹೇಳುತ್ತಿದ್ದಾರೆ.

ಬಿಬಿಎಲ್ ನಲ್ಲಿ ಸಿಡ್ನಿ ಸಿಕ್ಸರ್ ಪರ ಆಡುತ್ತಿದ್ದ ಸ್ಮಿತ್, ನಿರ್ಣಾಯಕ ಹಂತದಲ್ಲಿ ಓಡದೇ ಬಾಬರ್ ಅಜಂ ಸಿಂಗಲ್ ರನ್ ಪಡೆಯಲು ನಿರಾಕರಿಸಿದ್ದರು. ಈ ಘಟನೆಗೆ ಈಗ ಫರ್ಹಾನ್ ಸೇಡು ತೀರಿಸಿಕೊಂಡಿದ್ದಾರೆ ಎಂದು ಪಾಕ್ ಅಭಿಮಾನಿಗಳು ಖುಷಿ ಪಡುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

‘ಸ್ವಯಂ ರಕ್ಷಣೆ’ ಹೆಸರಿನಲ್ಲಿ ಇರಾನ್ ಕ್ಷಿಪಣಿ ಉಡಾವಣೆ ತಾಣಗಳ ಮೇಲೆ ಅಮೆರಿಕಾ ವಾಯುದಾಳಿ: ಟ್ರಂಪ್ ದ್ವಿಮುಖ ನಡೆ ವಿರುದ್ಧ ಟೀಕೆ, ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತೆ ಉದ್ವಿಗ್ನ..!

ಸತತ 4ನೇ ಬಾರಿ CNG ದರ ಏರಿಕೆ: ಕೆಜಿಗೆ 2 ರೂ. ಹೆಚ್ಚಳ, ವಾಹನ ಸವಾರರಿಗೆ ಶಾಕ್‌

ಗೃಹಲಕ್ಷ್ಮಿ ಯೋಜನೆಯಲ್ಲಿ 100 ಕೋಟಿ ರೂ.ದುರ್ಬಳಕೆ: ಫಲಾನುಭವಿಗಳ ಮರುಪರಿಶೀಲನೆಗೆ ಸರ್ಕಾರ ಚಿಂತನೆ..!

Main Tera Hero: ರಿರಿಲೀಸ್; ಗರ್ಲ್ ಫ್ರೆಂಡ್ ಗಾಗಿ ಅಭಿಮಾನಿಯ ಡ್ಯಾನ್ಸ್ , ವಿಡಿಯೋ ವೈರಲ್, ವರುಣ್ ಧವನ್ ಹೇಳಿದ್ದೇನು?

ವಿಜಯ್ ಸಿಎಂ ಆಗುತ್ತಿದ್ದಂತೆಯೇ ಆಂಧ್ರದಲ್ಲಿ ಗಂಭೀರವಾದ DCM ಪವನ್ ಕಲ್ಯಾಣ್ ! JSP ಕಾರ್ಯಕರ್ತರಿಗೆ ಖಡಕ್ ಸೂಚನೆ

SCROLL FOR NEXT