ರಮಣದೀಪ್ ಸಿಂಗ್, ಖ್ಯಾತ ಕಿರುತೆರೆ ನಟಿ ಚಾರ್ಲಿ ಚೌಹಾಣ್ ವಿವಾಹ 
ಕ್ರಿಕೆಟ್

ಕುನ್ವರ್ ಅಮರ್ ಗೆ ಕೈ ಕೊಟ್ಟು, ಗುಟ್ಟಾಗಿ ಖ್ಯಾತ ಕ್ರಿಕೆಟ್ ಆಟಗಾರನ ಕೈ ಹಿಡಿದ ನಟಿ ಚಾರ್ಲಿ ಚೌಹಾಣ್!

ವಿವಾಹ ಮಹೋತ್ಸವದಲ್ಲಿ ಚಾರ್ಲಿ ಸಾಂಪ್ರದಾಯಿಕ ಕೆಂಪು ಲೆಹೆಂಗಾದಲ್ಲಿ ಸೊಗಸಾಗಿ ಕಾಣುತ್ತಿದ್ದರೆ, ರಮಣದೀಪ್ ಚಿನ್ನದ ಶೆರ್ವಾನಿ ಧರಿಸಿದ್ದಾರೆ. ಈ ದಂಪತಿಯ ವಿವಾಹ ಪೂರ್ವ ಸಂಭ್ರಮದ ಫೋಟೋ ಮತ್ತು ವೀಡಿಯೊಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದವು.

ಭಾರತದ ಕ್ರಿಕೆಟ್ ಆಟಗಾರ ರಮಣದೀಪ್ ಸಿಂಗ್, ಖ್ಯಾತ ಕಿರುತೆರೆ ನಟಿ ಚಾರ್ಲಿ ಚೌಹಾಣ್ ಅವರನ್ನು ಗುಟ್ಟಾಗಿ ಮದುವೆಯಾಗಿದ್ದಾರೆ. ಇವರ ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಅಭಿಮಾನಿಗಳು ಮತ್ತು ಸಹ ಕ್ರಿಕೆಟಿಗರು ನವ ದಂಪತಿಗಳಿಗೆ ಅಭಿನಂದನಾ ಸಂದೇಶ ಕಳುಹಿಸುತ್ತಿದ್ದಾರೆ.

ದೇಶೀಯ ಕ್ರಿಕೆಟ್‌ನಲ್ಲಿ ಪಂಜಾಬ್ ಅನ್ನು ಪ್ರತಿನಿಧಿಸುವ ಮತ್ತು ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುವ ರಮಣದೀಪ್ ಅವರು ಕೆಲವು ಕೆಲವು ಕುಟುಂಬಸ್ಥರು, ಸ್ನೇಹಿತರ ಸಮ್ಮುಖದಲ್ಲಿ ಸಾಕಷ್ಟು ಗುಟ್ಟಾಗಿ ಮದುವೆಯಾಗಿದ್ದಾರೆ. ಅವರ ವಿವಾಹ ಸಮಾರಂಭದಲ್ಲಿ ಭಾಗಿಯಾದ ವೇಗದ ಬೌಲರ್ ಅರ್ಶದೀಪ್ ಸಿಂಗ್, ಸಾಮಾಜಿಕ ಜಾಲತಾಣದಲ್ಲಿ ನೂತನ ದಂಪತಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ವಿವಾಹ ಮಹೋತ್ಸವದಲ್ಲಿ ಚಾರ್ಲಿ ಸಾಂಪ್ರದಾಯಿಕ ಕೆಂಪು ಲೆಹೆಂಗಾದಲ್ಲಿ ಸೊಗಸಾಗಿ ಕಾಣುತ್ತಿದ್ದರೆ, ರಮಣದೀಪ್ ಚಿನ್ನದ ಶೆರ್ವಾನಿ ಧರಿಸಿದ್ದಾರೆ. ಈ ದಂಪತಿಯ ವಿವಾಹ ಪೂರ್ವ ಸಂಭ್ರಮದ ಫೋಟೋ ಮತ್ತು ವೀಡಿಯೊಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದವು.

ಚಾರ್ಲಿ ಚೌಹಾಣ್ ಯಾರು? ಚಾರ್ಲಿ ಚೌಹಾಣ್ ಭಾರತೀಯ ಕಿರುತೆರೆಯಲ್ಲಿ ಪರಿಚಿತ ಮುಖವಾಗಿದ್ದು, ಹಲವಾರು ಜನಪ್ರಿಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಬೆಸ್ಟ್ ಫ್ರೆಂಡ್ಸ್ ಫಾರೆವರ್‌ನಲ್ಲಿ ಎಲಾ ಪಾತ್ರದಲ್ಲಿ ನಟಿಸುವ ಮೂಲಕ ಪ್ರಸಿದ್ಧಿ ಪಡೆದಿದ್ದರು. ನಂತರ ಕೈಸಿ ಯೇ ಯಾರಿಯಾನ್‌ನಲ್ಲಿ ಮುಕ್ತಿ ವರ್ಧನ್ ಪಾತ್ರವನ್ನು ನಿರ್ವಹಿಸಿದರು. MTV ರೋಡೀಸ್ ಸೀಸನ್ 7 ರಲ್ಲಿ ಭಾಗವಹಿಸಿದ್ದರು. ನಟ ಮತ್ತು ಡ್ಯಾನ್ಸರ್ ಕುನ್ವರ್ ಅಮರ್ ಜೊತೆಗೆ ನಾಚ್ ಬಲಿಯೇ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರೊಂದಿಗೆ ಈ ಹಿಂದೆ ಸಂಬಂಧ ಹೊಂದಿದ್ದರು. ಚಾರ್ಲಿ ಯೇ ಹೈ ಆಶಿಕಿ 4 ಮತ್ತು ಕೆಲವು ಕಿರುಚಿತ್ರ ಯೋಜನೆಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

ನಟನೆಯ ಹೊರತಾಗಿ, ಚಾರ್ಲಿಗೆ ಸಂಗೀತ ಮತ್ತು ಬರವಣಿಗೆಯಲ್ಲಿ ಆಸಕ್ತಿ ಇದೆ. ಅವರು ಗೀತರಚನೆಕಾರರಾಗಿಯೂ ಕೆಲಸ ಮಾಡಿದ್ದಾರೆ ಮತ್ತು ಬೆಪರ್ವಾಹಿಯಾನ್ ಎಂಬ ಸಂಗೀತ ಆಲ್ಬಮ್‌ನೊಂದಿಗೆ ಕೆಲಸ ಮಾಡಿದ್ದಾರೆ. ರಮಣದೀಪ್ ಮತ್ತು ಚಾರ್ಲಿ ನಡುವೆ ಸುಮಾರು ಏಳು ವರ್ಷಗಳ ವಯಸ್ಸಿನ ವ್ಯತ್ಯಾಸವಿದೆ ಎಂದು ವರದಿಯಾಗಿದೆ.

ರಮಣದೀಪ್ ಸಿಂಗ್ ಕ್ರಿಕೆಟ್ ವೃತ್ತಿಜೀವನ: ರಮಣದೀಪ್ ನವೆಂಬರ್ 2024 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ T20I ನಲ್ಲಿ ಮೂಲಕ ಭಾರತಕ್ಕೆ ಪಾದಾರ್ಪಣೆ ಮಾಡಿದರು. ಅವರು ಇಲ್ಲಿಯವರೆಗೆ ಎರಡು T20I ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ, 15 ರನ್ ಗಳಿಸಿದ್ದಾರೆ ಮತ್ತು ಒಂದು ವಿಕೆಟ್ ಪಡೆದಿದ್ದಾರೆ. ಐಪಿಎಲ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಉಪಯುಕ್ತ ಆಲ್‌ರೌಂಡ್ ಆಟಗಾರನಾಗಿದ್ದಾರೆ. 39 ಐಪಿಎಲ್ ಪಂದ್ಯಗಳಲ್ಲಿ, ರಮಣದೀಪ್ 299 ರನ್ ಗಳಿಸಿದ್ದಾರೆ ಮತ್ತು ಏಳು ವಿಕೆಟ್‌ಗಳನ್ನು ಕಬಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ: KSRTC ಚಾಲಕ ಹಾಗೂ ಕಂಡಕ್ಟರ್ ಸಾವು

ರಷ್ಯಾ ತೈಲ ಖರೀದಿಗೆ ನಿರ್ಬಂಧ ಮಸೂದೆಗೆ ಅಮೆರಿಕ ಸೆನೆಟ್ ಅಸ್ತು: ಭಾರತ ಸೇರಿ 5 ದೇಶಗಳ ಮೇಲೆ ಶೇ.100ರಷ್ಟು ಸುಂಕ ಹೇರಿಕೆ ಶಾಕ್

ಮನೆಯೊಳಗೇ ನಿಗೂಢ ಸಾವು, ವರ್ಷ ಕಳೆದರೂ ಸುಳಿವೇ ಇಲ್ಲ; ಬೆಂಗಳೂರಿನಲ್ಲಿ ಮಹಿಳೆಯ ಅಸ್ಥಿಪಂಜರ ಪತ್ತೆ

2025-26ರಲ್ಲಿ ಕರ್ನಾಟಕದಲ್ಲಿ ದತ್ತು ಸ್ವೀಕಾರ ಶೇ.23ರಷ್ಟು ಏರಿಕೆ

ಬದರಿನಾಥ ದೇವಾಲಯದ ದೇಣಿಗೆ ಕಳ್ಳತನ ಪ್ರಕರಣ: ಸೆಕ್ಯೂರಿಟಿ ಗಾರ್ಡ್ ಬಂಧನ, ನಗದು ವಶಕ್ಕೆ!