ಈಡನ್ ಗಾರ್ಡನ್ಸ್‌ನಲ್ಲಿ ಭಾನುವಾರ ಅಭ್ಯಾಸದ ವೇಳೆ ಇಟಲಿ ಆಟಗಾರರು 
ಕ್ರಿಕೆಟ್

T20 World Cup 2026: ಇಟಾಲಿಯನ್ ಕ್ರಿಕೆಟ್ ತಂಡದಲ್ಲಿದ್ದಾರೆ ಪಿಜ್ಜಾ ತಯಾರಕ, ದೈಹಿಕ ಶಿಕ್ಷಣ ಶಿಕ್ಷಕ, ಕ್ಯಾಬ್ ಚಾಲಕ!

ಇಟಲಿಯಲ್ಲಿ ಇಂದು ಸಂಪೂರ್ಣ ವೃತ್ತಿಪರ ಕ್ರಿಕೆಟ್ ಆಟಗಾರರಿಲ್ಲ. ದೇಶವನ್ನು ಪ್ರತಿನಿಧಿಸಲು ಹಲವಾರು ಆಟಗಾರರು ತಮ್ಮ ದಿನದ ಕೆಲಸಗಳಿಗೆ ವಿರಾಮ ಘೋಷಿಸಬೇಕಾಗಿದೆ.

ಕೋಲ್ಕತ್ತಾ: ಈಡನ್ ಗಾರ್ಡನ್ಸ್‌ನಲ್ಲಿ ಭಾನುವಾರ ಇಟಾಲಿಯನ್ ಕ್ರಿಕೆಟ್ ಫೆಡರೇಶನ್‌ನ (FCRI) ಉನ್ನತ ಅಧಿಕಾರಿಗಳು ಇದ್ದರು. ಫೆಡರೇಶನ್‌ನ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸಿಇಒ ಸೋಮವಾರ ತಮ್ಮ ದೇಶದ ಟಿ20 ವಿಶ್ವಕಪ್ ಚೊಚ್ಚಲ ಪಂದ್ಯವನ್ನು ವೀಕ್ಷಿಸಲು ಸೇರಿದ್ದರು. ಸಾಮಾನ್ಯವಾಗಿ ಇಟಲಿಯಲ್ಲಿ ಫುಟ್‌ಬಾಲ್ ಜನಪ್ರಿಯತೆ ಪಡೆದಿದೆ. ಈ ಸಂದರ್ಭದಲ್ಲಿ ಕ್ರಿಕೆಟ್ ಅನ್ನು ಕೂಡ ಸಾರ್ವಜನಿಕರಿಗೆ ತಲುಪಿಸಲೆಂದೇ ಅವರು ತಮ್ಮೊಂದಿಗೆ ಇಟಲಿಯ ಮೂವರು ಪತ್ರಕರ್ತರನ್ನು ಸಹ ಕರೆತಂದಿದ್ದರು.

ಇಟಲಿಗೆ ಕ್ರಿಕೆಟ್ ಹೊಸದೇನಲ್ಲ. 19ನೇ ಶತಮಾನದ ಉತ್ತರಾರ್ಧದಲ್ಲಿ, ಎಸಿ ಮಿಲನ್ (ಇಟಾಲಿಯನ್ ವೃತ್ತಿಪರ ಫುಟ್ಬಾಲ್ ಕ್ಲಬ್) ಸ್ಥಾಪನೆಯಾದಾಗ, ಕ್ರಿಕೆಟ್ ವಾಸ್ತವವಾಗಿ ಕ್ಲಬ್‌ನಲ್ಲಿ ಒಂದು ಪ್ರಮುಖ ಕ್ರೀಡೆಯಾಗಿತ್ತು. ಆದಾಗ್ಯೂ, ಕಾಲಾನಂತರದಲ್ಲಿ, ಕ್ರಿಕೆಟ್ ತನ್ನ ಸ್ಥಾನಮಾನವನ್ನು ಕಳೆದುಕೊಂಡು ಇಟಲಿಯ ಮುಖ್ಯವಾಹಿನಿಯಿಂದ ಮರೆಯಾಯಿತು.

ಪ್ರಸಿದ್ಧ ಇಟಾಲಿಯನ್ ಫುಟ್ಬಾಲ್ ಆಟಗಾರ ಕ್ರಿಶ್ಚಿಯನ್ ವಿಯೇರಿ, ಕ್ರಿಕೆಟ್‌ ವೃತ್ತಿಪರ ಕ್ರೀಡೆಯಾಗಿರುವ ಆಸ್ಟ್ರೇಲಿಯಾದಲ್ಲಿ ಬೆಳೆದರು ಮತ್ತು ಅವರು ಈ ಕ್ರೀಡೆಯಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರು. ಇದರ ಹೊರತಾಗಿಯೂ, ಇಟಲಿಯಲ್ಲಿ ಇಂದು ಸಂಪೂರ್ಣ ವೃತ್ತಿಪರ ಕ್ರಿಕೆಟ್ ಆಟಗಾರರಿಲ್ಲ. ದೇಶವನ್ನು ಪ್ರತಿನಿಧಿಸಲು ಹಲವಾರು ಆಟಗಾರರು ತಮ್ಮ ದಿನದ ಕೆಲಸಗಳಿಗೆ ವಿರಾಮ ಘೋಷಿಸಬೇಕಾಗಿದೆ.

ಇದಕ್ಕೆ ಉಹಾಹರಣೆಯೆಂದರೆ, ಸಿಡ್ನಿಯ ಶಾಲೆಯಲ್ಲಿ ದೈಹಿಕ ಶಿಕ್ಷಣ ಕಲಿಸುವ ಜಸ್ಟಿನ್ ಮೋಸ್ಕಾ ಮತ್ತು ಅವರ ಸಹೋದರ ಆಂಥೋನಿ ಅಲ್ಲಿನ ಬಾಲಾಪರಾಧಿ ಕೇಂದ್ರದಲ್ಲಿ ಮರಗೆಲಸ ಕಲಿಸುತ್ತಾರೆ. ಹದಿಹರೆಯದಲ್ಲಿ ಶ್ರೀಲಂಕಾದಿಂದ ಇಟಲಿಗೆ ಸ್ಥಳಾಂತರಗೊಂಡ ಕ್ರಿಶನ್ ಕಲುಗಮಗೆ ಪಿಜ್ಜಾ ತಯಾರಕರಾಗಿ ಕೆಲಸ ಮಾಡುತ್ತಾರೆ. ಜೈನ್ ಅಲಿ ಒಬ್ಬ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದು, ಅವರ ತಂದೆ ಪಾಕಿಸ್ತಾನದಿಂದ ವಲಸೆ ಬಂದ ವೈದ್ಯ. ಭಾರತದ ಪಂಜಾಬ್‌ನಲ್ಲಿ ಜನಿಸಿದ ಜಸ್ಪ್ರೀತ್ ಸಿಂಗ್, ಯುಕೆಯಲ್ಲಿ ಉಬರ್ ಚಾಲಕರಾಗಿ ಬರ್ಮಿಂಗ್ಹ್ಯಾಮ್‌ನಲ್ಲಿ ತರಬೇತಿ ಪಡೆಯುತ್ತಿದ್ದರು. ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾದಾದ್ಯಂತ ದೇಶೀಯ ಕ್ರಿಕೆಟ್‌ನಲ್ಲಿ ಕೆಲವು ಆಟಗಾರರು ಕಾಣಿಸಿಕೊಳ್ಳುತ್ತಾರೆ.

ಇಟಾಲಿಯನ್ ರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಈಗ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಅನ್ನು ಸೇರಿಸುವ ಮೂಲಕ ಕ್ರೀಡೆಗೆ ಹೆಚ್ಚಿನ ಮಹತ್ವ ಸಿಗುವಂತೆ ಮಾಡಲು ಹೊರಟಿದೆ.

'ಅವರು ಆ ಹಾದಿಯಲ್ಲಿ ಸಾಗುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ಆದರೆ, ಗುರಿ ತಲುಪಲು ಇನ್ನೂ ವರ್ಷಗಳಷ್ಟು ಸಮಯ ಬೇಕಾಗಿದೆ. ಇಟಲಿ ಕ್ರಿಕೆಟ್, ಇದು ಬಹಳ ಸಮಯದಿಂದ ಇದ್ದರೂ, ಈ ರೀತಿಯ ಕೆಲಸಕ್ಕೆ ಎಷ್ಟು ಖರ್ಚು ಮಾಡಬೇಕೆಂಬುದನ್ನು ಅರ್ಥಮಾಡಿಕೊಳ್ಳುವ ಶೈಶವಾವಸ್ಥೆಯಲ್ಲಿದೆ. ಅವರು ಮೂಲಸೌಕರ್ಯವನ್ನು ನಿರ್ಮಿಸಬೇಕಾಗಿದೆ ಮತ್ತು ಬಹುಶಃ ಹೆಚ್ಚಿನ ಸಿಬ್ಬಂದಿ ಬೇಕಾಗಬಹುದು ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ಇದು ಪ್ರಕ್ರಿಯೆಯಲ್ಲಿದೆ. ಆದರೆ, ವೃತ್ತಿಪರ ಕ್ರೀಡೆಯಾಗುವುದು ಮತ್ತು ಅದರಿಂದ ಜೀವನ ಸಾಗಿಸುವ ವಿಷಯದಲ್ಲಿ, ಅವರು ಇನ್ನೂ ಸಾಕಷ್ಟು ಕೆಲಸ ಮಾಡಬೇಕಾದ ವಿಷಯವಾಗಿದೆ ಎಂದು ನಾನು ಭಾವಿಸುತ್ತೇನೆ' ಎಂದು ಜಸ್ಟಿನ್ ಮೋಸ್ಕಾ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

NEET: ಭೌತಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ, ಪುಣೆ ಉಪನ್ಯಾಸಕಿ ಬಂಧನ

IPL 2026: SRH ವಿರುದ್ಧ RCB ಗೆ ಸೋಲು, ಸೋತರೂ ಅಗ್ರ ಸ್ಥಾನ ಅಬಾಧಿತ! ಕ್ವಾಲಿಫೈಯರ್ ಗೆ ಲಗ್ಗೆ

IPL 2026: SRH ಕನಸಿಗೆ ಕೊಳ್ಳಿ ಇಟ್ಟ RCB, ಗೆಲುವಿನ ಹೊರತಾಗಿಯೂ Eliminater ಅನಿವಾರ್ಯ!

NEET UG ಪ್ರಶ್ನೆಪತ್ರಿಕೆ ಸೋರಿಕೆ: ಈ ಬಾರಿ ಶೇ.100ರಷ್ಟು ದೋಷರಹಿತ ಮರು ಪರೀಕ್ಷೆ; ಕಠಿಣ ಕ್ರಮ ಎಂದ Dharmendra Pradhan

Rudraprayag ಭೀಕರ ಭೂಕುಸಿತ: ಸ್ಥಳದಲ್ಲೇ ಓರ್ವನ ಸಾವು, ಇಬ್ಬರು ಗಂಭೀರ, Video

SCROLL FOR NEXT