ಅಮೆರಿಕ-ಪಾಕಿಸ್ತಾನ ಪಂದ್ಯ 
ಕ್ರಿಕೆಟ್

T20 ವಿಶ್ವಕಪ್ 2026: ಕೇವಲ 10 ಎಸೆತಗಳಲ್ಲಿ 5 ವಿಕೆಟ್ ಪತನ; USAಗೆ 191 ರನ್ ಗುರಿ ನೀಡಿದ ಪಾಕಿಸ್ತಾನ!

ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ನಿಗದಿತ 20 ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 190 ರನ್ ಪೇರಿಸಿತು.

ಕೊಲಂಬೋ: ಐಸಿಸಿ ಟಿ20 ವಿಶ್ವಕಪ್ 2026ರ ಟೂರ್ನಿಯ ಇಂದಿನ ಅಮೆರಿಕ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಎದುರಿಸಿರುವ ಪಾಕಿಸ್ತಾನ ಕೇವಲ 10 ಎಸೆತಗಳಲ್ಲಿ 5 ವಿಕೆಟ್ ಕಳೆದುಕೊಂಡಿದೆ.

ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ನಿಗದಿತ 20 ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 190 ರನ್ ಪೇರಿಸಿತು.

ಪಾಕಿಸ್ತಾನ ಪರ ಸಾಹಿಬ್ಜಾದ್ ಫರ್ವಾನ್ (73), ಬಾಬರ್ ಆಜಂ (46) ಶದಾಬ್ ಖಾನ್ (30) ಸಮಯೋಚಿಟ ಬ್ಯಾಟಿಂಗ್ ನೆರವಿನಿಂದಾಗಿ ಪಾಕಿಸ್ತಾನ 190ರನ್ ಗಳ ಬೃಹತ್ ಮೊತ್ತ ಪೇರಿಸಿದೆ.

ಕೇವಲ 10 ಎಸೆತಗಳಲ್ಲಿ 5 ವಿಕೆಟ್ ಪತನ

ಇನ್ನು ಈ ಪಂದ್ಯದಲ್ಲಿ ಅಮೆರಿಕದ ಬೌಲರ್ ಗಳು ಪಾಕಿಸ್ತಾನದ ಬಲಿಷ್ಟ ಬ್ಯಾಟಿಂಗ್ ಪಡೆಯ ಮೇಲೆ ಅಕ್ಷರಶಃ ಸವಾರಿ ಮಾಡಿದರು. ಆರಂಭದಿಂದಲೂ ಕರಾರುವಕ್ಕಾದ ಲೈನ್ ಮತ್ತು ಲೆಂತ್ ಕಾಯ್ದುಕೊಂಡು ಬಂದ ಅಮೆರಿಕ ಬೌಲರ್ ಗಳು ಕೇವಲ 10 ಎಸೆತಗಳ ಅಂತರದಲ್ಲಿ ಪಾಕಿಸ್ತಾನ 5 ವಿಕೆಟ್ ಕಬಳಿಸಿದರು.

ಆದರೆ ಮಧ್ಯಮ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಸಾಹಿಬ್ಜಾದ್ ಫರ್ವಾನ್ (73), ಬಾಬರ್ ಆಜಂ (46) ಅಮೆರಿಕ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿದರು. ಇನ್ನಿಂಗ್ಸ್ ಅಂತಿಮ ಹಂತದಲ್ಲಿ ಶದಾಬ್ ಖಾನ್ (30) ಕೂಡ ಉತ್ತಮ ಬ್ಯಾಟಿಂಗ್ ಮಾಡಿ ತಂಡದ ಮೊತ್ತವನ್ನು 190ಕ್ಕೆ ಕೊಂಡೊಯ್ದರು.

ಉಳಿದಂತೆ ಅಮೆರಿಕ ಪರ ಶಾಡ್ಲಿ ವಾನ್ ಶ್ಕಾಲ್ವಿಕ್ 4 ವಿಕೆಟ್ ಪಡೆದರೆ, ಸೌರಭ್ ನೇತ್ರಾವಾಲ್ಕರ್, ಮೊಹಮದ್ ಮೊಹ್ಸಿನ್ ಮತ್ತು ಹರ್ಮೀತ್ ಸಿಂಗ್ ತಲಾ 1 ವಿಕೆಟ್ ಪಡೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್