ಭಾರತ ಆಟಗಾರರ ಸಂಭ್ರಮ 
ಕ್ರಿಕೆಟ್

T20 World Cup, IND vs Pak: ಇಶಾನ್ ಕಿಶಾನ್ ಬ್ಯಾಟಿಂಗ್ ಅಬ್ಬರ; ಸ್ಪಿನ್ ಮೋಡಿಗೆ ಪಾಕ್ ತತ್ತರ, ಭಾರತಕ್ಕೆ 61 ರನ್ ಗೆಲುವು!

ಇಶಾನ್ ಕಿಶಾನ್ ಅವರ ಅಬ್ಬರ ಬ್ಯಾಟಿಂಗ್ ಹಾಗೂ ಸ್ಪಿನ್ನರ್ ಗಳ ಮಾರಕ ಬೌಲಿಂಗ್ ದಾಳಿಯಿಂದ ಟ್ರಿಕಿ ಪಿಚ್ ನಲ್ಲೂ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಭಾರತ ದೇಶದ ಜನತೆಗೆ ಮಹಾಶಿವರಾತ್ರಿ ಗಿಫ್ಟ್ ನೀಡಿದ್ದು, ದೇಶಾದ್ಯಂತ ಕ್ರಿಕೆಟ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.

ಕೊಲಂಬೊ: ಇಲ್ಲಿನ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಗ್ರೂಪ್ ಹಂತದ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಭಾರತ 61 ರನ್ ಗಳಿಂದ ಬಗ್ಗುಬಡಿದೆ.

ಇಶಾನ್ ಕಿಶಾನ್ ಅವರ ಅಬ್ಬರ ಬ್ಯಾಟಿಂಗ್ ಹಾಗೂ ಸ್ಪಿನ್ನರ್ ಗಳ ಮಾರಕ ಬೌಲಿಂಗ್ ದಾಳಿಯಿಂದ ಟ್ರಿಕಿ ಪಿಚ್ ನಲ್ಲೂ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಭಾರತ, ದೇಶದ ಜನತೆಗೆ ಮಹಾಶಿವರಾತ್ರಿ ಗಿಫ್ಟ್ ನೀಡಿದ್ದು, ದೇಶಾದ್ಯಂತ ಕ್ರಿಕೆಟ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಇಳಿದ ಭಾರತದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಡಕ್ ಔಟ್ ಆದರು. ಪಾಕಿಸ್ತಾನ ನಾಯಕ ಸಲ್ಮಾನ್ ಆಘಾ ಅವರ ಮೊದಲ ಓವರ್ ನ ಆರನೇ ಎಸೆತದಲ್ಲಿ ಮಾಸ್ಟರ್‌ಸ್ಟ್ರೋಕ್ ಎಂದು ಸಾಬೀತಾಯಿತು. ಅಭಿಷೇಕ್ ಶರ್ಮಾ ಇಂದು ದೊಡ್ಡ ಇನ್ನಿಂಗ್ಸ್ ಆಡುತ್ತಾರೆಂದು ನಿರೀಕ್ಷಿಸಲಾಗಿತ್ತು. ಆದರೆ ಡಕೌಟ್ ಆಗುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.

ಆದಾಗ್ಯೂ ಪಾಕಿಸ್ತಾನ ಬೌಲರ್ ಗಳ ಬೆವರಿಳಿಸಿದ ಇಶಾನ್ ಕಿಶಾನ್ 27 ಎಸೆತಗಳಲ್ಲಿ ವೇಗವಾಗಿ ಅರ್ಧ ಶತಕ ಬಾರಿಸಿದರು. 40 ಎಸೆತಗಳನ್ನು ಎದುರಿಸಿದ ಇಶಾನ್, ಮೂರು ಸಿಕ್ಸರ್, 10 ಬೌಂಡರಿಗಳೊಂದಿಗೆ 77 ರನ್ ಗಳಿಸಿದರು.

ಉಳಿದಂತೆ ತಿಲಕ್ ವರ್ಮಾ, 25, ನಾಯಕ ಸೂರ್ಯ ಕುಮಾರ್ ಯಾದವ್ 32, ಶಿವಂ ದುಬೆ 27, ರಿಂಕ್ ಸಿಂಗ್ ಔಟಾಗದೇ 11 ರನ್ ಗಳಿಸಿದರು. ಇಶಾನ್ ಕಿಶಾನ್ ಅವರ 77 ರನ್ ಗಳ ನೆರವಿನಿಂದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು.

ಪಾಕಿಸ್ತಾನ ಪರ ಸೈಮ್ ಅಯುಬ್ 3 ವಿಕೆಟ್ ಪಡೆದರೆ, ಸಲ್ಮಾನ್ ಆಘಾ, ಶಹೀನ್ ಶಾ ಆಫ್ರಿದಿ, ಉಶ್ಮನ್ ತಾರಿಖ್ ತಲಾ ಒಂದು ವಿಕೆಟ್ ಪಡೆದರು. ಭಾರತ ನೀಡಿದ 176 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಪಾಕಿಸ್ತಾನ 18 ಓವರ್ ಗಳಲ್ಲಿ 114 ರನ್ ಗಳಿಸುವಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲಿಗೆ ಶರಣಾಯಿತು.

ಭಾರತದ ಪರ ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬೂಮ್ರಾ, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ ತಲಾ 2 ವಿಕೆಟ್ ಪಡೆದರು. ಕುಲದೀಪ್ ಯಾದವ್ ಹಾಗೂ ತಿಲಕ್ ವರ್ಮಾ ತಲಾ ಒಂದು ವಿಕೆಟ್ ಪಡೆದರು. ಇನ್ನೂ ಭಾರತದ ಪರ ಆಕರ್ಷಕ 77 ರನ್ ಗಳಿಸಿ ತಂಡ ಗೆಲುವಿನಲ್ಲಿ ಪ್ರಮುಖ ಕೊಡುಗೆ ನೀಡಿದ ಇಶಾನ್ ಕಿಶಾನ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iran War: Hormuz ಕುರಿತು ಬಹ್ರೇನ್ ನೇತೃತ್ವದಲ್ಲಿ ಕರಡು ನಿರ್ಣಯ; ಇಂದು UNSC ಮತದಾನ!

ಸೋಲಿನಲ್ಲೂ RCB ದಾಖಲೆ ಮುರಿದ CSK: 210 ರನ್ ಬಾರಿಸಿ ಚೆನ್ನೈ ವಿರುದ್ಧ 5 ವಿಕೆಟ್ ಗಳಿಂದ ಗೆದ್ದ ಪಂಜಾಬ್‌!

ಹುಬ್ಬಳ್ಳಿ Love Jihad ಕೇಸ್‌ಗೆ ಟ್ವಿಸ್ಟ್: Gym ಟ್ರೈನರ್ Sameer Mulla ಮೊಬೈಲ್‌ನಲ್ಲಿ ಯುವತಿಯರ ಫೋಟೋಗಳು ಪತ್ತೆ!

'ನಿಮ್ದೊಂದೆರಡು ಕಿತ್ತೋದ ವಿಮಾನವಾಹಕ ನೌಕೆಗಳು ಇದ್ಯಲ್ಲಾ ಯುದ್ಧಕ್ಕೆ ಕಳಿಸ್ತೀರಾ?' ಅಂತ ಕೇಳಿದ್ದೆ, ಮ್ಯಾಕ್ರಾನ್ ಗೆ ಹೆಂಡ್ತಿ ಕಾಟ: ಬ್ರಿಟನ್, ಫ್ರಾನ್ಸ್ ಬಗ್ಗೆ ಟ್ರಂಪ್ ವ್ಯಂಗ್ಯ

Bengal polls: ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ರಾಜಕಾರಣಿಗಳಿಗೆ ಸೆಕ್ಯೂರಿಟಿ ವಾಪಸ್, ಚುನಾವಣಾ ಆಯೋಗ ನಿರ್ದೇಶನ!

SCROLL FOR NEXT