ಮುಂಬೈ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 8 ಹಂತದ ತನ್ನ ಮೊದಲ ಪಂದ್ಯದಲ್ಲೇ ವೆಸ್ಟ್ ಇಂಡೀಸ್ ತಂಡ ಬರೊಬ್ಬರಿ ಬರೊಬ್ಬರಿ 107 ರನ್ ಜಯಭೇರಿ ಭಾರಿಸುವ ಮೂಲಕ ಸೆಮೀಸ್ ರೇಸ್ ನಲ್ಲಿ ಪ್ರಬಲವಾಗಿ ಉಳಿದಿದೆ.
ಅಂತೆಯೇ ಈ ಪಂದ್ಯದಲ್ಲಿ ವಿಂಡೀಸ್ ಪರ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ಶಿಮ್ರಾನ್ ಹೆಟ್ಮೆರ್ 17 ವರ್ಷಗಳ ಹಿಂದಿನ ಕ್ರಿಸ್ ಗೇಯ್ಲ್ ದಾಖಲೆ ಮುರಿದಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ವೆಸ್ಟ್ ಇಂಡೀಸ್ ನಿಗಧಿತ 20 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 254ರನ್ ಪೇರಿಸಿತು. ವಿಂಡೀಸ್ ಪರ ಶಿಮ್ರಾನ್ ಹೇಟ್ಮರ್ ಕೇವಲ 34 ಎಸೆತಗಳಲ್ಲಿ 7 ಸಿಕ್ಸರ್ ಮತ್ತು 7 ಬೌಂಡರಿ ಸಹಿತ 85 ರನ್ ಚಚ್ಚಿದರು.
ಅಂತೆಯೇ ಹೇಟ್ಮೆರ್ ಹಾಲಿ ಟೂರ್ನಿಯಲ್ಲಿ ತಮ್ಮ ಸಿಕ್ಸರ್ ಗಳ ಸಂಖ್ಯೆಯನ್ನು 17ಕ್ಕೆ ಏರಿಕೆ ಮಾಡಿಕೊಂಡುರು. ಆ ಮೂಲಕ 2012ರಲ್ಲಿ ಕ್ರಿಸ್ ಗೇಯ್ಸ್ ಹೆಸರಲ್ಲಿದ್ದ (16 ಸಿಕ್ಸರ್) ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರ್ ಎಂಬ ಕೀರ್ತಿಗೆ ಭಾಜನರಾದರು.
Most individual sixes in a T20 WC edition
17* - Shimron Hetmyer (2026)
17 - Nicholas Pooran (2024)
16 - Chris Gayle (2012)
16 - Rahmanullah Gurbaz (2024)
ಟಿ20ಯಲ್ಲಿ ಹೆಚ್ಚುಬಾರಿ 250+ ಸ್ಕೋರ್
ಅಂತೆಯೇ ಟಿ20 ಮಾದರಿಯಲ್ಲಿ ಅತೀ ಹೆಚ್ಚು ಬಾರಿ 250ಕ್ಕೂ ಅಧಿಕ ರನ್ ಸ್ಕೋರ್ ಮಾಡಿದ ತಂಡಗಳ ಪಟ್ಟಿಯಲ್ಲಿ ವಿಂಡೀಸ್ ಜಂಟಿ 2ನೇ ಸ್ಥಾನಕ್ಕೇರಿದೆ. ಈ ಪಟ್ಟಿಯಲ್ಲಿ 4 ಬಾರಿ 250ಕ್ಕೂ ಅಧಿಕ ಸ್ಕೋರ್ ಮಾಡಿದ ಭಾರತ ಅಗ್ರಸ್ಥಾನದಲ್ಲಿದ್ದು, ತಲಾ 3ಬಾರಿ 250ಕ್ಕೂ ಹೆಚ್ಚು ರನ್ ಕಲೆಹಾಕಿದ ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ತಲಾ 3 ಬಾರಿ 250ಕ್ಕೂ ಸ್ಕೋರ್ ಮಾಡಿವೆ.
Most 250-plus totals in T20Is
4 - IND
3 - ZIM
3 - WI
ಟಿ20 ವಿಶ್ವಕಪ್ 2ನೇ ಗರಿಷ್ಠ ಸ್ಕೋರ್
ಇನ್ನು ವೆಸ್ಟ್ ಇಂಡೀಸ್ ಗಳಿಸಿದ 254ರನ್ ಟಿ20 ವಿಶ್ವಕಪ್ ನ 2ನೇ ಗರಿಷ್ಟ ಸ್ಕೋರ್ ಆಗಿದೆ. ಇದಕ್ಕೂ ಮೊದಲು 2007ರಲ್ಲಿ ಕೀನ್ಯಾ ವಿರುದ್ಧ ಶ್ರೀಲಂಕಾ ತಂಡ 260ರನ್ ಕಲೆಹಾಕಿತ್ತು. ಇದು ಈ ವರೆಗಿನ ಟಿ20 ವಿಶ್ವಕಪ್ ಟೂರ್ನಿಯ ಗರಿಷ್ಠ ಸ್ಕೋರ್ ಆಗಿದೆ.
Highest totals in T20 WCs
260/6 - SL vs KEN, Joburg, 2007
254/6 - WI vs ZIM, Wankhede, 2026*
235/5 - IRE vs OMAN, Colombo SSC, 2026
230/8 - ENG vs SA, Wankhede, 2016
229/4 - SA vs ENG, Wankhede, 2016
225/5 - SL vs OMAN, Pallekele, 2026