ನಿರೂಪಕಿ ರಿಧಿಮಾ ಪಾಠಕ್ 
ಕ್ರಿಕೆಟ್

'ನನ್ನ ದೇಶ ಮುಖ್ಯ.. ಬಾಂಗ್ಲಾ ಪ್ರೀಮಿಯರ್ ಲೀಗ್ ನಿಂದ ನಾನೇ ಹೊರಬಂದೆ'..: ಭಾರತ ಮೂಲದ ನಿರೂಪಕಿ Ridhima Pathak

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಿಂದ ಭಾರತ ಮೂಲದ ನಿರೂಪಕಿ ರಿಧಿಮಾರನ್ನು ಕೈ ಬಿಡಲಾಗಿದೆ ಎಂಬ ಹೇಳಿಕೆ ಹೊರಬಂದ ಬೆನ್ನಲ್ಲೇ ನಿರೂಪಕಿ ರಿಧಿಮಾ ಪಾಠಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಕ್ರಿಕೆ್ಟ್ ಟೂರ್ನಿಯಿಂದ ನನ್ನನ್ನು ತೆಗೆದಿಲ್ಲ.. ಬದಲಿಗೆ ನಾನೇ ಹೊರಕ್ಕೆ ಬಂದೆ ಎಂದು ಭಾರತ ಮೂಲದ ನಿರೂಪಕಿ ರಿಧಿಮಾ ಪಾಠಕ್ ಹೇಳಿದ್ದಾರೆ.

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಿಂದ ಭಾರತ ಮೂಲದ ನಿರೂಪಕಿ ರಿಧಿಮಾರನ್ನು ಕೈ ಬಿಡಲಾಗಿದೆ ಎಂಬ ಹೇಳಿಕೆ ಹೊರಬಂದ ಬೆನ್ನಲ್ಲೇ ಈ ಕುರಿತು ನಿರೂಪಕಿ ರಿಧಿಮಾ ಪಾಠಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಮಾಹಿತಿ ನೀಡಿರುವ ರಿಧಿಮಾ, 'ನಾನು ಬಿಪಿಎಲ್‌ನಿಂದ ಹೊರಗುಳಿದಿದ್ದೇನೆ, ಕೈಬಿಡಲಾಗಿಲ್ಲ. ಇಲ್ಲಿ ಸತ್ಯ ಮುಖ್ಯ, ನನ್ನನ್ನು ಬಿಪಿಎಲ್‌ನಿಂದ "ಕೈಬಿಡಲಾಗಿದೆ" ಎಂದು ಸೂಚಿಸುವ ಒಂದು ನಿರೂಪಣೆ ಇದೆ. ಅದು ನಿಜವಲ್ಲ ಎಂದು ಹೇಳಿದ್ದಾರೆ.

ಅಂತೆಯೇ "ನಾನು ಹೊರಗುಳಿಯಲು ವೈಯಕ್ತಿಕ ನಿರ್ಧಾರ ತೆಗೆದುಕೊಂಡಿದ್ದೇನೆ. ನನಗೆ ನನ್ನ ದೇಶವು ಯಾವಾಗಲೂ ಮೊದಲು ಬರುತ್ತದೆ. ನಾನು ಕ್ರಿಕೆಟ್ ಆಟವನ್ನು ಯಾವುದೇ ಒಂದು ನಿಯೋಜನೆಗಿಂತ ಹೆಚ್ಚು ಗೌರವಿಸುತ್ತೇನೆ.

ಈ ಕ್ರೀಡೆಯನ್ನು ಪ್ರಾಮಾಣಿಕತೆ, ಗೌರವ ಮತ್ತು ಉತ್ಸಾಹದಿಂದ ವರ್ಷಗಳಿಂದ ಸೇವೆ ಸಲ್ಲಿಸುವ ಸವಲತ್ತು ನನಗಿದೆ. ಅದು ಬದಲಾಗುವುದಿಲ್ಲ. ನಾನು ಸಮಗ್ರತೆಗಾಗಿ, ಸ್ಪಷ್ಟತೆಗಾಗಿ ಮತ್ತು ಆಟದ ಉತ್ಸಾಹಕ್ಕಾಗಿ ನಿಲ್ಲುವುದನ್ನು ಮುಂದುವರಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಇದೇ ವೇಳೆ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ನಿಮ್ಮ ಸಂದೇಶಗಳು ನಿಮಗೆ ತಿಳಿದಿರುವುದಕ್ಕಿಂತ ಹೆಚ್ಚಿನದನ್ನು ಅರ್ಥೈಸುತ್ತವೆ ಎಂದು ರಿಧಿಮಾ ಪೋಸ್ಟ್ ಮಾಡಿದ್ದಾರೆ.

ಅಂದಹಾಗೆ ಈ ವರ್ಷದ ಬಿಪಿಎಲ್‌ನ ಢಾಕಾ ಆವೃತ್ತಿಯಲ್ಲಿ ನಿರೂಪಕಿಯಾಗಿ ಭಾರತ ಮೂಲದ ರಿಧಿಮಾ ನಿರೂಪಿಸಬೇಕಿತ್ತು. ಆದರೆ ಬಾಂಗ್ಲಾದೇಶಕ್ಕೆ ಬರುವ ಮೊದಲು ಅವರನ್ನು ಪ್ರಸ್ತುತಿ ತಂಡದಿಂದ 'ಕೈಬಿಡಲಾಯಿತು' ಎಂದು ಆರೋಪಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೋಲ್ಕತ್ತಾ: I-PAC ಮೇಲಿನ ED ದಾಳಿ ವಿರುದ್ಧ ಬೀದಿಗಿಳಿದ ಪಶ್ಚಿಮ ಬಂಗಾಳ ಸಿಎಂ ಮಮತಾ

ಬೆಂಗಳೂರು: ಮನನೊಂದು ಡೆಂಟಲ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ; ಆಡಳಿತ ಮಂಡಳಿ ಕಿರುಕುಳ ಆರೋಪ

ಬೆಂಗಳೂರು: ಕಗ್ಗದಾಸಪುರ ಜಂಕ್ಷನ್ ನಲ್ಲಿ ಬಿಗ್ ಫೈಟ್! Zepto ರೈಡರ್ ಥಳಿಸಿದ ಬೈಕ್ ಸವಾರರಿಗೆ ಜನರಿಂದ ಗೂಸಾ! Video

ಪ್ರಹ್ಲಾದ್ ಜೋಶಿ ಮೊದಲು ಚುನಾವಣಾ ಬಾಂಡ್‌, PM ಕೇರ್ಸ್‌ ಬಗ್ಗೆ ಉತ್ತರಿಸಲಿ: ದಿನೇಶ್ ಗುಂಡೂರಾವ್

Iran Protests ನಡುವೆ ರೆಜಾ ಪಹ್ಲವಿ ಸದ್ದು: ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕರೆ ನೀಡುತ್ತಿರುವ ಈ ಪ್ರಭಾವಿ ವ್ಯಕ್ತಿ ಯಾರು?

SCROLL FOR NEXT