ಆರ್ ಸಿಬಿ ವೇಗಿ ಲಾರೆನ್ ಬೆಲ್ 
ಕ್ರಿಕೆಟ್

WPL 2026: 4 ಓವರ್, 1 ಮೇಡನ್; ಸೌಂದರ್ಯ ಅಷ್ಟೇ ಅಲ್ಲ.. ಪ್ರದರ್ಶನದಲ್ಲೂ ಟಾಪ್; RCBಯ ಲೇಡಿ ಹೇಜಲ್ವುಡ್ Lauren Bell

ಇಂಗ್ಲೆಂಡ್ ತಂಡದ ವೇಗದ ಬೌಲರ್ ಲಾರೆನ್ ಬೆಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ಮೂಲಕ ಐಪಿಎಲ್ ಗೆ ಪದಾರ್ಪಣೆ ಮಾಡಿದ್ದು, ಪಾದಾರ್ಪಣೆ ಪಂದ್ಯದಲ್ಲೇ ಮಾರಕ ದಾಳಿ ಸಂಘಟಿಸುವ ಮೂಲಕ ಲಾರೆನ್ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಮುಂಬೈ: ಹಾಲಿ ಮಹಿಳಾ ಪ್ರೀಮಿಯರ್ ಲೀಗ್ 2026ರಲ್ಲಿ ಆರ್ ಸಿಬಿ ತಂಡದ ಆಟಗಾರ್ತಿ ಲಾರೆನ್ ಬೆಲ್ ಇಷ್ಟುದಿನ ತಮ್ಮ ಸೌಂದರ್ಯದ ಮೂಲಕ ಸುದ್ದಿಯಲ್ಲಿದ್ದರು.. ಆದರೆ ನಿನ್ನೆಯ ಪಂದ್ಯದಲ್ಲಿ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.

ಹೌದು.. ನವೀ ಮುಂಬೈನ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ 2026ನ ಮೊದಲ ಪಂದ್ಯದಲ್ಲಿ ಆರ್ ಸಿಬಿ ರೋಚಕ ಗೆಲುವು ದಾಖಲಿಸಿದ್ದು, ಈ ಗೆಲುವಿನಲ್ಲಿ ತಂಡದ ವೇಗಿ ಲಾರೆನ್ ಬೆಲ್ ಕೂಡ ಪ್ರಮುಖ ಪಾತ್ರವಹಿಸಿದ್ದರು.

ಇಂಗ್ಲೆಂಡ್ ತಂಡದ ವೇಗದ ಬೌಲರ್ ಲಾರೆನ್ ಬೆಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ಮೂಲಕ ಐಪಿಎಲ್ ಗೆ ಪದಾರ್ಪಣೆ ಮಾಡಿದ್ದು, ಪಾದಾರ್ಪಣೆ ಪಂದ್ಯದಲ್ಲೇ ಮಾರಕ ದಾಳಿ ಸಂಘಟಿಸುವ ಮೂಲಕ ಲಾರೆನ್ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಈ ಪಂದ್ಯದಲ್ಲಿ ಲಾರೆನ್ ಬೆಲ್ ತಾವು ಎಸೆದ ಮೊದಲ ಓವರ್ ನಲ್ಲೇ ಕರಾರುವಕ್ಕಾದ ಬೌಲಿಂಗ್ ದಾಳಿ ಮೂಲಕ ಒಂದೂ ರನ್ ನೀಡದೇ ಮೇಡನ್ ಸಾಧಿಸಿದರು. ಬಳಿಕ 2ನೇ ಓವರ್​ನಲ್ಲಿ 2 ಮತ್ತು ಮೂರನೇ ಓವರ್ ನಲ್ಲಿ 6, ನಾಲ್ಕನೇ ಓವರ್ ನಲ್ಲಿ ಕೇವಲ 7 ರನ್ ಮಾತ್ರ ಬಿಟ್ಟು ಕೊಟ್ಟಿದ್ದರು.

ಈ ಮೂಲಕ 4 ಓವರ್​ಗಳಲ್ಲಿ ಕೇವಲ 14 ರನ್ ನೀಡಿ 1 ವಿಕೆಟ್ ಪಡೆದಿದ್ದರು. ಈ ಮೂಲಕ ಲಾರೆನ್ ಬೆಲ್ ಮುಂಬೈ ತಂಡ ಹೆಚ್ಚು ರನ್ ಗಳಿಸದಂತೆ ಕಟ್ಟಿಹಾಕಿದರು.

ಒಂದು ಎಸೆತದಿಂದ ದಾಖಲೆ ಮಿಸ್

ವಿಶೇಷ ಎಂದರೆ ಲಾರೆನ್ ಬೆಲ್ 24 ಎಸೆತಗಳಲ್ಲಿ 19 ಎಸೆತಗಳನ್ನು ಡಾಟ್ ಮಾಡಿದ್ದರು. ಅಂದರೆ 19 ಎಸೆತಗಳಲ್ಲಿ ಯಾವುದೇ ರನ್ ನೀಡಿರಲಿಲ್ಲ. ಆದರೆ ಉಳಿದ 6 ಎಸೆತಗಳಲ್ಲಿ ರನ್ ನೀಡುವ ಮೂಲಕ ಭರ್ಜರಿ ದಾಖಲೆಯೊಂದನ್ನು ತಪ್ಪಿಸಿಕೊಂಡರು.

ಅದರಲ್ಲೂ ಒಂದೇ ಒಂದು ಎಸೆತವನ್ನು ಡಾಟ್ ಮಾಡಿದ್ರೆ ಲಾರೆನ್ ಹೆಸರಿಗೆ ದಾಖಲೆಯೊಂದು ಸೇರ್ಪಡೆಯಾಗುತ್ತಿತ್ತು. ಆದರೆ ಕೇವಲ ಒಂದು ಎಸೆತದಿಂದಾಗಿ ಶಬ್ನಿಮ್ ಇಸ್ಮಾಯಿಲ್ ಹೆಸರಿನಲ್ಲಿರುವ ದಾಖಲೆ ಮುರಿಯುವಲ್ಲಿ ವಿಫಲರಾಗಿದ್ದಾರೆ.

ಹೌದು, ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ 4 ಓವರ್​ಗಳನ್ನು ಎಸೆದು ಅತ್ಯಧಿಕ ಡಾಟ್ ಬಾಲ್ ಮಾಡಿದ ಭರ್ಜರಿ ದಾಖಲೆ ಮುಂಬೈ ಇಂಡಿಯನ್ಸ್ ತಂಡದ ವೇಗಿ ಶಬ್ನಿನ್ ಇಸ್ಮಾಯಿಲ್ ಹೆಸರಿನಲ್ಲಿದೆ.

2025 ರಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಶಬ್ನಿಮ್ 4 ಓವರ್​ಗಳಲ್ಲಿ 20 ಡಾಟ್ ಬಾಲ್ ಎಸೆದಿದ್ದರು. ಈ ಭರ್ಜರಿ ದಾಖಲೆ ಮುರಿಯುವ ಅವಕಾಶ ಲಾರೆನ್ ಬೆಲ್​ಗಿತ್ತು. ಇದಾಗ್ಯೂ ಆರ್​ಸಿಬಿ ಪರ ಒಂದು ಪಂದ್ಯದಲ್ಲಿ ಅತ್ಯಧಿಕ ಡಾಟ್ ಬಾಲ್ ಎಸೆದ ಬೌಲರ್ ಎಂಬ ದಾಖಲೆ ಲಾರೆನ್ ಬೆಲ್ ಪಾಲಾಗಿದೆ.

RCBಯ ಲೇಡಿ ಹೇಜಲ್ವುಡ್

ಈ ಪಂದ್ಯದ ಮೂಲಕ ಲಾರೆನ್ ಬೆಲ್ ಆರ್ ಸಿಬಿಯ ಲೇಡಿ ಹೇಡಲ್ವುಡ್ ಎಂದು ಖ್ಯಾತಿಗಳಿಸಿದ್ದಾರೆ. ಆರ್ ಸಿಬಿಗೆ ಹೇಗೆ ಹೇಜಲ್ವುಡ್ ಆಪತ್ಭಾಂಧವ ಬೌಲರ್ ಆಗಿದ್ದಾರೆಯೇ ಹಾಗೆಯೇ ಲಾರೆನ್ ಬೆಲ್ ಕೂಡ ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ಆರ್ ಸಿಬಿಯ ಆಪತ್ಭಾಂಧವರಾಗಿದ್ದಾರೆ ಎಂದು ಅಭಿಮಾನಿಗಳು ಶ್ಲಾಘಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

ಮುಖ್ಯಮಂತ್ರಿ ಬದಲಾವಣೆ: ದೆಹಲಿಯಲ್ಲಿ ಕಾಂಗ್ರೆಸ್‌ ಮ್ಯಾರಥಾನ್‌ ಮೀಟಿಂಗ್ ಬಳಿಕ ಕೆ.ಸಿ ವೇಣುಗೋಪಾಲ್ ಹೇಳಿದ್ದೇನು? Video

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

IPL 2026 Qualifier 1: ಐಪಿಎಲ್ ಅಷ್ಟೇ ಅಲ್ಲ.. ಜಾಗತಿಕ ಟಿ20 ಕ್ರಿಕೆಟ್ ನಲ್ಲೂ RCB ಐತಿಹಾಸಿಕ ದಾಖಲೆ, ರೆಕಾರ್ಡ್ ಗಳ ಪಟ್ಟಿ!

ಬಕ್ರೀದ್ ಮೇಕೆ ವಿಷಯವಾಗಿ ಮುಂಬೈ ಸೊಸೈಟಿಯಲ್ಲಿ ಭಾರಿ ವಿವಾದ; VHP ಕಾರ್ಯಕರ್ತರ ಮೇಲೆ ಬ್ಲೇಡ್ ನಿಂದ ಹಲ್ಲೆ!

SCROLL FOR NEXT