ವಿಜಯ್ ಮಲ್ಯ 
ಕ್ರಿಕೆಟ್

IPL 2026: ದೊಡ್ಡ ಸಿಂಹಗಳು ಜೋರಾಗಿ ಗರ್ಜಿಸಿವೆ; RCB ಗೆಲುವಿನ ಬಗ್ಗೆ ವಿಜಯ್ ಮಲ್ಯ!

ನಮ್ಮ ದೊಡ್ಡ ಸಿಂಹಗಳು ಜೋರಾಗಿ ಘರ್ಜಿಸಿ ನಮ್ಮೆಲ್ಲರನ್ನೂ ಹೆಮ್ಮೆಪಡುವಂತೆ ಮಾಡಿವೆ. ಅತ್ಯುತ್ತಮವಾಗಿ ಆಡಿದ್ದೀರಿ (Very well done you beauties)ಎಂದು ಹೇಳಿದ್ದಾರೆ.

ಲಂಡನ್: ಅಹಮದಾಬಾದ್‌ನಲ್ಲಿ ಭಾನುವಾರ ನಡೆದ ಐಪಿಎಲ್ 2026 ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ನ್ನು 5 ವಿಕೆಟ್‌ಗಳಿಂದ ಸೋಲಿಸಿ ಸತತ ಎರಡನೇ ಬಾರಿಗೆ ಟ್ರೋಫಿ ಗೆದ್ದ RCBಗೆ ಅದರ ಮಾಜಿ ಮಾಲೀಕ ವಿಜಯ್ ಮಲ್ಯ ಶುಭಾಶಯ ಕೋರಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಪೋಸ್ಟ್ ಮಾಡಿದ್ದು, ಆರ್‌ಸಿಬಿ, ಆರ್‌ಸಿಬಿ… ಬ್ಯಾಕ್ ಟು ಬ್ಯಾಕ್ ಐಪಿಎಲ್ ಚಾಂಪಿಯನ್ ಗೆ ಅಭಿನಂದನೆಗಳು. ನಮ್ಮ ದೊಡ್ಡ ಸಿಂಹಗಳು ಜೋರಾಗಿ ಘರ್ಜಿಸಿ ನಮ್ಮೆಲ್ಲರನ್ನೂ ಹೆಮ್ಮೆಪಡುವಂತೆ ಮಾಡಿವೆ. ಅತ್ಯುತ್ತಮವಾಗಿ ಆಡಿದ್ದೀರಿ (Very well done you beauties)ಎಂದು ಹೇಳಿದ್ದಾರೆ.

ಗುಜರಾತ್ ನೀಡಿದ 156 ರನ್ ಗಳ ಗುರಿ ಬೆನ್ನಟ್ಟಿದ್ದ ಆರ್ ಸಿಬಿ ಪರ ಕೊಹ್ಲಿ 42 ಎಸೆತಗಳಲ್ಲಿ ಒಂಬತ್ತು ಬೌಂಡರಿಗಳು ಮತ್ತು ಮೂರು ಸಿಕ್ಸರ್‌ಗಳೊಂದಿಗೆ ಅಜೇಯ 75 ರನ್ ಗಳಿಸುವುದರೊಂದಿಗೆ ಆರ್‌ಸಿಬಿ 18 ಓವರ್‌ಗಳಲ್ಲಿ ಐದು ವಿಕೆಟ್‌ಗೆ 161 ರನ್ ಗಳಿಸಿ ಸುಲಭವಾಗಿ ಗೆಲುವು ಸಾಧಿಸಿತು.

ಆರ್‌ಸಿಬಿ ನಾಯಕ ರಜತ್ ಪಟಿದಾರ್ ತಮ್ಮ ತಂಡದ ಎರಡನೇ ಐಪಿಎಲ್ ಟ್ರೋಫಿಯನ್ನು ಕಳೆದ ವರ್ಷ ಕಾಲ್ತುಳಿತದಲ್ಲಿ ಮಡಿದ ಅಭಿಮಾನಿಗಳಿಗೆ ಅರ್ಪಿಸಿದರು. ಕಳೆದ ವರ್ಷ ಜೂನ್‌ನಲ್ಲಿ ಆರ್‌ಸಿಬಿ ತಮ್ಮ ಚೊಚ್ಚಲ ಐಪಿಎಲ್ ಪ್ರಶಸ್ತಿಯನ್ನು ಗೆದ್ದ ನಂತರ ಆತುರದಿಂದ ಆಯೋಜಿಸಲಾದ ವಿಜಯೋತ್ಸವ ವೇಳೆ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ 11 ಅಭಿಮಾನಿಗಳು ಸಾವನ್ನಪ್ಪಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಷ್ಟ್ರಪತಿಗಳಿಂದ ಅನಂತ್ ನಾಗ್​ಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ; ಸ್ಟ್ಯಾಂಡಿಂಗ್ ಒವೇಶನ್; ರಕ್ಷಿತ್​ ಶೆಟ್ಟಿ ನಿರ್ಮಾಣದ 'ಮಿಥ್ಯ'ಗೆ 3 ರಾಷ್ಟ್ರ ಪ್ರಶಸ್ತಿ!

ಜನರ ಎದುರೇ ರೈಲಿನಲ್ಲಿ ದಂಪತಿಯ ಅಸಭ್ಯ ವರ್ತನೆ: ಇದರಿಂದ ಕೆರಳಿದ ಮಹಿಳೆ ಮಾಡಿದ್ದೇನು? ವಿಡಿಯೋ ನೋಡಿ!

ರಾಣಿ ಮುಖರ್ಜಿಗೆ ಮಾತೃ ವಿಯೋಗ: ತಾಯಿ ಕೃಷ್ಣಾ ಮುಖರ್ಜಿ ನಿಧನ; ಖಾಸಗಿತನ ಗೌರವಿಸುವಂತೆ ಬಾಲಿವುಡ್​​ ನಟಿ ಮನವಿ!

ಕಸ್ತೂರಿರಂಗನ್ ವರದಿ: ಕೇಂದ್ರದ ಇಸಿಎ ಅಧಿಸೂಚನೆ ವಿಧಾನಸಭೆಯಲ್ಲಿ ಸರ್ವಾನುಮತದಿಂದ ತಿರಸ್ಕೃತ; ಒಂದು ವರ್ಷದ ಕಾಲಾವಕಾಶ ಕೋರಿಕೆ!

PSIಗೆ ಕಪಾಳಮೋಕ್ಷ ಪ್ರಕರಣ: ಕ್ಷಮೆಯಾಚಿಸಿದ ಬಿಜೆಪಿ ಶಾಸಕನ ಪುತ್ರಿಗೆ ಜಾಮೀನು; ‘ಆ ಘಟನೆ ನಡೆಯಬಾರದಿತ್ತು’ ಎಂದ ಐಶ್ವರ್ಯ!