ಕೋಲ್ಕತಾ: ಟಿ20 ವಿಶ್ವಕಪ್ ಟೂರ್ನಿಯ ಮತ್ತೋಂದು ಹೈ ವೋಲ್ಟೇಜ್ ಪಂದ್ಯಕ್ಕೆ ಕೋಲ್ಕತಾದ ಈಡನ್ ಗಾರ್ಡನ್ ಮೈದಾನ ಸಜ್ಜಾಗಿದ್ದು, ಸೆಮಿಫೈನಲ್ ಪ್ರವೇಶಕ್ಕೆ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಪರಸ್ಪರ ಸೆಣಸಲಿವೆ. ಆದರೆ ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಹೌದು.. ಟಿ20 ವಿಶ್ವಕಪ್ ಸೆಮಿಫೈನಲ್ ಪ್ರವೇಶಕ್ಕೆ ಟೀಂ ಇಂಡಿಯಾ ಮಾರ್ಚ್ 1 ರಂದು ವೆಸ್ಟ್ ಇಂಡೀಸ್ ವಿರುದ್ಧ ಸೂಪರ್ 8 ಸುತ್ತಿನ ಅಂತಿಮ ಪಂದ್ಯವನ್ನಾಡಲಿದ್ದು, ಗೆದ್ದ ತಂಡ ಸೆಮಿಫೈನಲ್‌ಗೆ, ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ. ಒಂದು ವೇಳೆ ಮಳೆಯಿಂದ ಪಂದ್ಯ ರದ್ದಾದರೆ, ಉತ್ತಮ ನೆಟ್ ರನ್ ರೇಟ್ ಹೊಂದಿರುವ ವೆಸ್ಟ್ ಇಂಡೀಸ್ ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿದೆ.
ಗ್ರೂಪ್ 1 ಅಂಕ ಪಟ್ಟಿಯಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಪ್ರಸ್ತುತ ಸಮಾನ ಅಂಕಗಳನ್ನು ಹೊಂದಿವೆ. ವೆಸ್ಟ್ ಇಂಡೀಸ್ ಎರಡು ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದು, ಭಾರತ ಕೂಡ ಎರಡು ಅಂಕಗಳನ್ನು ಹೊಂದಿದೆ. ಆದರೆ ನೆಟ್ ರನ್ ರೇಟ್ ವಿಚಾರದಲ್ಲಿ ವಿಂಡೀಸ್ಗಿಂತ ಭಾರತ ಹಿಂದೆ ಇರುವುದರಿಂದ ಮೂರನೇ ಸ್ಥಾನದಲ್ಲಿದೆ.
ಈ ಪಂದ್ಯವನ್ನು ಗೆದ್ದ ತಂಡವು ನಾಲ್ಕು ಅಂಕಗಳೊಂದಿಗೆ ನೇರವಾಗಿ ಸೆಮಿಫೈನಲ್‌ಗೆ ಮುನ್ನಡೆಯುತ್ತದೆ. ಆದಾಗ್ಯೂ, ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯವು ಮಳೆಯಿಂದ ರದ್ದಾದರೆ ಅಥವಾ ಫಲಿತಾಂಶವಿಲ್ಲದೆ ಕೊನೆಗೊಂಡರೆ, ಐಸಿಸಿ ನಿಯಮಗಳ ಪ್ರಕಾರ, ಎರಡೂ ತಂಡಗಳು ತಲಾ ಒಂದು ಅಂಕವನ್ನು ಪಡೆಯುತ್ತವೆ.
ಅದರಂತೆ ಉಭಯ ತಂಡಗಳ ಅಂಕಗಳ ಸಂಖ್ಯೆ ಸಮಾನವಾಗಲಿದ್ದು, ಹೀಗಾಗಿ ನೆಟ್ ರನ್ ರೇಟ್ ನಲ್ಲಿ ಭಾರತಕ್ಕಿಂತ ಉತ್ತಮವಾಗಿರುವ ವೆಸ್ಟ್ ಇಂಡೀಸ್ ಸೆಮೀಸ್ ಗೆ ಅರ್ಹತೆ ಗಿಟ್ಟಿಸಲಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಭಾರತ ಗೆಲ್ಲಲ್ಲೇ ಬೇಕಾದ ಅನಿವಾರ್ಯತೆಗೆ ಸಿಲುಕಿದೆ.
ಈ ಪರಿಸ್ಥಿತಿಯಲ್ಲಿ, ಎರಡೂ ತಂಡಗಳು ಒಟ್ಟು ತಲಾ 3 ಅಂಕಗಳನ್ನು ಪಡೆಯುತ್ತವೆ. ಹೀಗಾಗಿ ಸೆಮಿಫೈನಲ್‌ಗೆ ಮುನ್ನಡೆಯುವ ತಂಡವನ್ನು ನೆಟ್ ರನ್ ರೇಟ್ ಮೂಲಕ ನಿರ್ಧರಿಸಲಾಗುತ್ತದೆ. ವೆಸ್ಟ್ ಇಂಡೀಸ್‌ನ ನೆಟ್ ರನ್ ರೇಟ್ +1.791 ಆಗಿದ್ದು, ಭಾರತದ ನೆಟ್ ರನ್ ರೇಟ್ -0.100 ಆಗಿದೆ.
ಅಂದರೆ ನೆಟ್ ರನ್ ರೇಟ್ ವಿಚಾರದಲ್ಲಿ ಭಾರತಕ್ಕಿಂತ ವೆಸ್ಟ್ ಇಂಡೀಸ್ ಮುಂದಿದೆ. ಆದ್ದರಿಂದ, ಮಳೆ ಅಥವಾ ಯಾವುದೇ ಇತರ ಕಾರಣದಿಂದಾಗಿ ಪಂದ್ಯ ರದ್ದಾದರೆ, ವೆಸ್ಟ್ ಇಂಡೀಸ್ ಸೆಮಿಫೈನಲ್‌ಗೆ ಮುನ್ನಡೆಯುತ್ತದೆ ಮತ್ತು ಭಾರತ ಪಂದ್ಯಾವಳಿಯಿಂದ ಹೊರಹೋಗುತ್ತದೆ.
ಪಂದ್ಯಕ್ಕೆ ಮಳೆ ಅಡ್ಡಿ?
ಇನ್ನು ಇಂದಿನ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಕುರಿತೂ ಮಾತುಗಳು ಕೇಳಿ ಬರುತ್ತಿದ್ದು, ಒಂದು ವೇಳೆ ಇಂದಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ ಆಗಲೂ ವೆಸ್ಟ್ ಇಂಡೀಸ್ ಗೆ ಲಾಭವಾಗಲಿದೆ. ಆದರೆ ಕೋಲ್ಕತ್ತಾದಲ್ಲಿ ಮಳೆಯ ಸಾಧ್ಯತೆ ಕಡಿಮೆ ಇದೆ.
ಹವಾಮಾನ ವರದಿ
ಭಾರತ-ವೆಸ್ಟ್ ಇಂಡೀಸ್ ಪಂದ್ಯದ ಸಮಯದಲ್ಲಿ ಮಳೆ ಬರುವ ಸಾಧ್ಯತೆ ಪ್ರಸ್ತುತ ಇಲ್ಲ. ಅಕ್ಯೂವೆದರ್ ಪ್ರಕಾರ, ಮಾರ್ಚ್ 1 ರಂದು ಕೋಲ್ಕತ್ತಾದಲ್ಲಿ ಮಳೆ ಇರುವುದಿಲ್ಲ. ಕೆಲವು ದಿನಗಳ ಹಿಂದೆ ಮಳೆ ಬಂದಿದ್ದರೂ, ಪಂದ್ಯದ ದಿನದಂದು ಮಳೆ ಬೀಳುವ ಸಾಧ್ಯತೆ ಕಡಿಮೆ. ಪಂದ್ಯದ ಸಮಯದಲ್ಲಿ ಆಕಾಶವು ಸ್ಪಷ್ಟವಾಗಿರಲಿದ್ದು, ಹಗಲಿನಲ್ಲಿ ತಾಪಮಾನವು 34 ಡಿಗ್ರಿ ಸೆಲ್ಸಿಯಸ್ ತಲುಪಬಹುದು, ಪಂದ್ಯದ ಸಮಯದಲ್ಲಿ 25-26 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಬಹುದು.