ಪತ್ನಿ ಸಾಕ್ಷಿಗೆ ತಿಳಿ ಹೇಳಿ ಕೂರಿಸಿದ ಮಹೇಂದ್ರ ಸಿಂಗ್ ಧೋನಿ 
ಕ್ರಿಕೆಟ್

T20 ವಿಶ್ವಕಪ್ 2026: 'ನೀನ್ ಕೂತ್ಕೊಳ್ಳಮ್ಮ.. ಔಟಿಲ್ಲ..'; 'ಸಾಕ್ಷಿ' ಪ್ರಜ್ಞೆಗೆ ಬಿದ್ದು ಬಿದ್ದು ನಕ್ಕ MS Dhoni..; ಅಭಿಮಾನಿಗಳಿಗೆ ರಸದೌತಣ ನೀಡಿದ ಕ್ಯೂಟ್ ಕದನ! Video

ನಿನ್ನೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಭಾರತ-ಇಂಗ್ಲೆಂಡ್ ನಡುವಿನ 2ನೇ ಸೆಮಿಫೈನಲ್ ಪಂದ್ಯ ವೀಕ್ಷಣೆಗೆ ಕ್ರಿಕೆಟ್ ಜಗತ್ತಿನ ಗಣ್ಯಾತಿ ಗಣ್ಯರು ಆಗಮಿಸಿದ್ದರು.

ಮುಂಬೈ: ಇಂಗ್ಲೆಂಡ್ ವಿರುದ್ಧದ 2ನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ 7 ರನ್ ಗಳ ವಿರೋಚಿತ ಗೆಲುವು ಸಾಧಿಸಿ ಫೈನಲ್ ಗೆ ಲಗ್ಗೆ ಇಟ್ಟಿದ್ದು ಇದೇ ಪಂದ್ಯದಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಅವರ ಪತ್ನಿ ಸಾಕ್ಷಿ ನಡುವಿನ ಕ್ಯೂಟ್ ಕದನ ಇದೀಗ ಎಲ್ಲೆಡೆ ವ್ಯಾಪಕ ವೈರಲ್ ಆಗುತ್ತಿದೆ.

ನಿನ್ನೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಭಾರತ-ಇಂಗ್ಲೆಂಡ್ ನಡುವಿನ 2ನೇ ಸೆಮಿಫೈನಲ್ ಪಂದ್ಯ ವೀಕ್ಷಣೆಗೆ ಕ್ರಿಕೆಟ್ ಜಗತ್ತಿನ ಗಣ್ಯಾತಿ ಗಣ್ಯರು ಆಗಮಿಸಿದ್ದರು.

ಪ್ರಮುಖವಾಗಿ ಟೀಂ ಇಂಡಿಯಾ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್, ರೋಹಿತ್ ಶರ್ಮಾ, ಮಾಜಿ ನಾಯಕ ಎಂಎಸ್ ಧೋನಿ ಪತ್ನಿ ಸಮೇತರಾಗಿ ಆಗಮಿಸಿದ್ದರು. ಕ್ರಿಕೆಟಿಗರಲ್ಲದೇ ಬಾಲಿವುಡ್ ಸ್ಟಾರ್ ನಟ-ನಟಿಯರು, ಉದ್ಯಮಿ ಅನಿಲ್ ಅಂಬಾನಿ ಕೂಡ ಕುಟುಂಬ ಸಮೇತರಾಗಿ ಆಗಮಿಸಿ ಪಂದ್ಯ ಕಣ್ತುಂಬಿಕೊಂಡರು.

'ಸಾಕ್ಷಿ' ಪ್ರಜ್ಞೆಗೆ ಬಿದ್ದು ಬಿದ್ದು ನಕ್ಕ MS Dhoni

ಇನ್ನು ಈ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ಪತ್ನಿ ಸಾಕ್ಷಿ ಮಾಡಿದ ಎಡವಟ್ಟೊಂದು ಅಲ್ಲಿ ನೆರೆದಿದ್ದವರು ಬಿದ್ದು ಬಿದ್ದು ನಗುವಂತೆ ಮಾಡಿತು. ಪಂದ್ಯ ಅಂತಿಮ ಘಟ್ಟ ತಲುಪಿರುವಾಗ ಉಭಯ ತಂಡಗಳ ಅಭಿಮಾನಿಗಳ ನಡುವೆ ಕುತೂಹಲ ಹೆಚ್ಚಾಗಿತ್ತು.

ಇದೇ ಹಂತದಲ್ಲಿ ಸಾಕ್ಷಿ ಔಟ್ ಅಲ್ಲದ್ದನ್ನು ಔಟ್ ಎಂಬಂತೆ ಕುಣಿದು ಕುಪ್ಪಳಿಸಿ ಸಂಭ್ರಮಿಸುತ್ತಿದ್ದರು. ಈ ವೇಳೆ ಅಲ್ಲಿಯೇ ನಿಂತಿದ ಪತಿ ಧೋನಿ 'ನೀನ್ ಕೂತ್ಕೊಳ್ಳಮ್ಮ.. ಅದು ಔಟಿಲ್ಲ..' ಎಂದು ತಿಳಿ ಹೇಳಿದರು. ಈ ವೇಳೆ ಅಲ್ಲಿಯೇ ಇದ್ದ ಅಭಿಮಾನಿಗಳು ಮತ್ತು ಧೋನಿ ಸ್ನೇಹಿತರು ನಗೆಗಡಲಲ್ಲಿ ತೇಲಿದರು.

ಇಷ್ಟಕ್ಕೂ ಆಗಿದ್ದೇನು?

ಪಂದ್ಯದ ದ್ವಿತೀಯ ಇನಿಂಗ್ಸ್​ 18ನೇ ಓವರ್‌ನಲ್ಲಿ ಜಸ್​ಪ್ರೀತ್ ಬುಮ್ರಾ ಎಸೆದ ಚೆಂಡನ್ನು ಇಂಗ್ಲೆಂಡ್ ಬ್ಯಾಟರ್ ಸ್ಯಾಮ್ ಕರನ್ ನೇರವಾಗಿ ಬಾರಿಸಿದರು. ಬುಮ್ರಾ ಅದನ್ನು ಅದ್ಭುತವಾಗಿ ಜಂಪ್ ಮಾಡಿ ಹಿಡಿದರು. ಆ ಓವರ್ ಭಾರತಕ್ಕೆ ನಿರ್ಣಾಯಕವಾಗಿತ್ತು. ಇಂಗ್ಲೆಂಡ್ ಗೆಲ್ಲಲು ಆ ಓವರ್ ನಲ್ಲಿ ಬೌಂಡರಿಗಳ ಅಗತ್ಯವಿತ್ತು. ಆದರೆ ಬುಮ್ರಾ ರನ್ ಬಿಟ್ಟುಕೊಡುತ್ತಿರಲಿಲ್ಲ.

ಇದು ಅಭಿಮಾನಿಗಳ ಹರ್ಷೋದ್ಘಾರಕ್ಕೆ ಕಾರಣವಾಯಿತು. ಇದೇ ಸಂದರ್ಭದಲ್ಲೇ ಇಂಗ್ಲೆಂಡ್ ನ ಸ್ಯಾಮ್ ಕರನ್ ಭಾರಿಸಿದ ಚಂಡನ್ನು ಬುಮ್ರಾ ಎಗರಿ ಹಿಡಿದರು. ಇದನ್ನು ನೋಡಿ ಗ್ಯಾಲರಿಯಲ್ಲಿದ್ದ ಸಾಕ್ಷಿ ಅವರು ‘ಕ್ಲೀನ್ ಕ್ಯಾಚ್’ ಎಂದು ಭಾವಿಸಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದರು. ಆದರೆ, ಆ ಚೆಂಡು ಬುಮ್ರಾ ಕೈ ಸೇರುವ ಮೊದಲು ನೆಲಕ್ಕೆ ತಗುಲಿತ್ತು. ಆದರೆ ಧೋನಿ ಪತ್ನಿ ಸಾಕ್ಷಿ ಅದನ್ನು ಔಟ್ ಎಂದು ತಪ್ಪಾಗಿ ಭಾವಿಸಿ ಸಂಭ್ರಮಿಸಿದರು.

ಆದರೆ ಹಿಂದೆ ಇದ್ದ ಧೋನಿ ಅದು ಔಟ್ ಅಲ್ಲ.. ಬಂಪ್ ಶಾಟ್.. ರನ್ ಸೇವಾಗಿದ್ದಕ್ಕೇ ಅಭಿಮಾನಿಗಳು ಹರ್ಷೋದ್ಘಾರ ಮಾಡುತ್ತಿದ್ದಾರೆ ಎಂದು ತಿಳಿ ಹೇಳಿದರು. “ಅದು ಔಟ್ ಅಲ್ಲ, ಸುಮ್ಮನೆ ಕುಳಿತುಕೋ” ಎಂಬಂತೆ ಧೋನಿ ಸನ್ನೆ ಮಾಡಿದ್ದು, ಧೋನಿಯ ಈ ಮುಗುಳ್ನಗೆಯ ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾವೇರಿ ಕಗ್ಗಂಟಿಗೆ ಸರ್ವಪಕ್ಷ ಒಗ್ಗಟ್ಟು: 'ರಾಜಕೀಯಕ್ಕಿಂತ ರಾಜ್ಯದ ಹಿತ ಮುಖ್ಯ' ಎಂದ CM ಡಿ.ಕೆ. ಶಿವಕುಮಾರ್

ಮಧ್ಯಪ್ರಾಚ್ಯ ರಾಷ್ಟ್ರಗಳ ಮನವಿಗೆ ಮಣಿದ Trump: ಕೊನೆ ಕ್ಷಣದಲ್ಲಿ Iran ಮೇಲಿನ ದಾಳಿಗೆ ಬ್ರೇಕ್‌; ಒಪ್ಪಂದವಾದರೆ ಯುದ್ಧ ಅಂತ್ಯ, ಇಲ್ಲದಿದ್ದರೆ ಭಾರೀ ದಾಳಿ ಎಚ್ಚರಿಕೆ..!

'ನೀರು-ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ'; ನಿಮ್ಮ ದುರ್ವರ್ತನೆಯಿಂದಲೇ ಸಿಂಧು ಜಲ ಒಪ್ಪಂದ ಅಮಾನತು: ಪಾಕಿಸ್ತಾನಕ್ಕೆ ಭಾರತ ತಿರುಗೇಟು

ಭಾರತ-ಚೀನಾ ಗಡಿ ವ್ಯಾಪಾರಕ್ಕೆ ಮರುಜೀವ: 6 ವರ್ಷಗಳ ಬಳಿಕ ನಾಥೂ ಲಾ ಗಡಿಯಲ್ಲಿ ವ್ಯಾಪಾರ ಚಟುವಟಿಕೆ ಪುನರಾರಂಭ..!

ಸಕಲೇಶಪುರ: ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತ; ರೈಲು ಸಂಚಾರ ಸಂಪೂರ್ಣ ಸ್ಥಗಿತ; ಕಾನ್ಸ್ಟೇಬಲ್ ಪರೀಕ್ಷಾರ್ಥಿಗಳ ಪರದಾಟ