ಶುಭ್ ಮನ್ ಗಿಲ್ 
ಕ್ರಿಕೆಟ್

IPL 2026: ಮದುವೆಯಾಗುತ್ತಿದ್ದೀರಾ? ಟಾಸ್ ವೇಳೆ ಶುಭ್ ಮನ್ ಗಿಲ್ ಕೆಣಕಿದ ಡ್ಯಾನಿ ಮಾರಿಸನ್! ಫ್ಯಾನ್ಸ್ ಗರಂ!

ಕೀಟಲೆ ಮಾಡುವುದಕ್ಕೆ ಹೆಸರುವಾಸಿಯಾದ ಮಾಜಿ ಕ್ರಿಕೆಟಿಗ ಡ್ಯಾನಿ, ಮದುವೆಯ ಸದ್ದು ಕೇಳಿಬರುತ್ತಿವೆ ಎಂದು ಕೇಳುವ ಮೂಲಕ ಶುಭಮನ್ ಗಿಲ್ ಅವರನ್ನು ಅಚ್ಚರಿಗೊಳಿಸಿದ್ದಾರೆ.

ಅಹಮದಾಬಾದ್: ಪಂಜಾಬ್ ಕಿಂಗ್ಸ್ ವಿರುದ್ಧ ಗುಜರಾತ್ ಪಂದ್ಯದ ಟಾಸ್ ವೇಳೆ ನ್ಯೂಜಿಲೆಂಡ್ ಕ್ರಿಕೆಟ್ ನಿರೂಪಕ ಮತ್ತು ಮಾಜಿ ಕ್ರಿಕೆಟಿಗ ಡ್ಯಾನಿ ಮಾರಿಸನ್ ಕೇಳಿದ ಪ್ರಶ್ನೆಗೆ ಗುಜರಾತ್ ಟೈಟನ್ಸ್ ತಂಡದ ನಾಯಕ ಶುಭ್ ಮನ್ ಗಿಲ್ ಸ್ವಲ್ಪ ಸಿಟ್ಟಾದ ಘಟನೆ ನಡೆದಿದೆ.

ಹೌದು. ಡ್ಯಾನಿ ಮಾರಿಸನ್ ಆಟದ ಬದಲು ವೈಯಕ್ತಿಕ ವಿಚಾರವನ್ನು ಕೆಣಕಿದ್ದಾರೆ. ಕೀಟಲೆ ಮಾಡುವುದಕ್ಕೆ ಹೆಸರುವಾಸಿಯಾದ ಮಾಜಿ ಕ್ರಿಕೆಟಿಗ ಡ್ಯಾನಿ, ಮದುವೆಯ ಸುದ್ದಿ ಕೇಳಿಬರುತ್ತಿವೆ ಎಂದು ಕೇಳುವ ಮೂಲಕ ಶುಭಮನ್ ಗಿಲ್ ಅವರನ್ನು ಅಚ್ಚರಿಗೊಳಿಸಿದ್ದಾರೆ.

ಸಾಮಾನ್ಯವಾಗಿ ಇಂತಹ ಮಾತುಕತೆ ವೇಳೆ ಶಾಂತ ಸ್ವಭಾವದಿಂದ ಇರ್ತೀದ್ದ ಗಿಲ್, ಈ ಬಾರಿ ತಮಾಷೆ ಮಾಡಲಿಲ್ಲ. ಹಾಗೇನಿಲ್ಲ ಅಂತಾ ಹೇಳಿ, ಯಾವುದೇ ಪ್ರತಿಕ್ರಿಯೆ ನೀಡದೆ ದೂರ ಸರಿದಿದ್ದಾರೆ.

ಮಾರಿಸನ್ ಈ ರೀತಿಯ ಪ್ರಶ್ನೆ ಕೇಳಿದ್ದು ಇದೇ ಮೊದಲೇನಲ್ಲಾ. ಕಳೆದ ಬಾರಿಯ ಐಪಿಎಲ್ ವೇಳೆಯೂ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯಗೂ ಮುನ್ನ ಗಿಲ್ ಗೆ ಇದೇ ರೀತಿಯ ಪ್ರಶ್ನೆ ಕೇಳಿದ್ದರು. ಆದರೆ ಆಗ ಗಿಲ್ ಪ್ರತಿಕ್ರಿಯೆ ನೀಡಿದ್ದರು.

ಈಗ ಮತ್ತೆ ಅದೇ ಪ್ರಶ್ನೆ ಕೇಳಿರುವುದಕ್ಕೆ ಫ್ಯಾನ್ಸ್ ಗರಂ ಆಗಿದ್ದಾರೆ. ನಿರೂಪಕರು ಪಂದ್ಯದ ಟಾಸ್ ವೇಳೆ ಅಂತಹ ವೈಯಕ್ತಿಕ ಪ್ರಶ್ನೆ ಕೇಳಬಾರದು ಎಂದು ಅನೇಕ ಮಂದಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕ ಮಿಲಿಟರಿ ಕಾರ್ಯಾಚರಣೆ 'ಅಸಾಧ್ಯ', ವಿಮಾನವಾಹಕ ನೌಕೆ ಹೊಂದಿರುವ ಏಕೈಕ ಕಡಲ್ಗಳ್ಳ: Iran ಹೇಳಿಕೆ!

ಕೆಟ್ಟ ಮೇಲೆ ಬುದ್ದಿ: Khalistan 'ರಾಷ್ಟ್ರೀಯ ಭದ್ರತಾ ಬೆದರಿಕೆ' ಎಂದು ಘೋಷಿಸಿದ ಕೆನಡಾ

Cheap, Invisible, Accurate: ಇಸ್ರೇಲ್ ವಿರುದ್ಧ ಹೆಜ್ಬೊಲ್ಲಾದ ಹೊಸದಾದ ಮಾರಕ ಶಸ್ತ್ರಾಸ್ತ್ರ! ಸದ್ದಿಲ್ಲದೆ ಅನೇಕರ ಬಲಿ; Video

ಕುದುರೆ ವ್ಯಾಪಾರದ ಭೀತಿ: ಚುನಾವಣೆ ಫಲಿತಾಂಶದ ಬಳಿಕ TVK ವಿಜೇತರು ರೆಸಾರ್ಟ್‌ ಸೇರಲು ವಿಜಯ್ ಸೂಚನೆ!

Video: ವಿವಸ್ತ್ರಗೊಳಿಸಿ, ಬೆನ್ನಟ್ಟಿ ಹಲ್ಲೆ-ಅತ್ಯಾಚಾರ; ನೈಜೀರಿಯಾದ ವಿಲಕ್ಷಣ Rape Festival ವಿರುದ್ಧ ಜಾಗತಿಕ ಆಕ್ರೋಶ

SCROLL FOR NEXT