ಲಖನೌ: ಚೆನ್ನೈ ಸೂಪರ್ ಕಿಂಗ್ಸ್(CSK) ವಿರುದ್ಧ ಶುಕ್ರವಾರ ಏಳು ವಿಕೆಟ್ ಗಳ ಭರ್ಜರಿ ಜಯ ಸಾಧಿಸಿ, ಗೆಲುವಿನ ಉತ್ಸಾಹದಲ್ಲಿದ್ದ ಲಖನೌ ಸೂಪರ್ ಜೈಂಟ್ಸ್ ತಂಡ(LSG)ಕ್ಕೆ ಬಿಸಿಸಿಐ ಬಿಗ್ ಶಾಕ್ ನೀಡಿದ್ದು, ಪಂದ್ಯದ ವೇಳೆ ನಿಧಾನಗತಿಯ ಓವರ್ ದರಕ್ಕಾಗಿ ನಾಯಕ ರಿಷಭ್ ಪಂತ್ ಅವರಿ 12 ಲಕ್ಷ ರೂಪಾಯಿಗಳ ಭಾರಿ ದಂಡ ವಿಧಿಸಲಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ರಿಷಭ್ ಪಂತ್ ಅವರಿ ಭಾರಿ ದಂಡ ವಿಧಿಸಲಾಗಿದೆ.
ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಅಡಿಯಲ್ಲಿ ಕನಿಷ್ಠ ಓವರ್-ರೇಟ್ ನಿಬಂಧನೆಗಳನ್ನು ಪಾಲಿಸಲು ರಿಷಭ್ ಪಂತ್ ವಿಫಲರಾಗಿದ್ದಾರೆ. ಈ ಸೀಸನ್‌ನಲ್ಲಿ ರಿಷಭ್ ಪಂತ್ ಮೊದಲ ಬಾರಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ 12 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.
ಇದೇ ತಪ್ಪು ಪುನರಾವರ್ತನೆಯಾದರೆ, ಪಂತ್‌ಗೆ 24 ಲಕ್ಷ ರೂ. ದಂಡ ವಿಧಿಸಲಾಗುತ್ತದೆ ಮತ್ತು ತಂಡದ ಉಳಿದ ಆಟಗಾರರಿಗೆ ಪಂದ್ಯದ ಶುಲ್ಕದ ಶೇ. 25 ಅಥವಾ 6 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಇವುಗಳಲ್ಲಿ ಯಾವುದು ಕಡಿಮೆಯೋ ಅದು ವಿಧಿಸಲಾಗುತ್ತದೆ ಎಂದು ಕ್ರೀಡಾ ತಜ್ಞರು ಹೇಳುತ್ತಾರೆ.