ಟ್ರಾವಿಸ್ ಹೆಡ್ ಗೆ 'ಹ್ಯಾಂಡ್‌ಶೇಕ್' ಮಾಡದ ವಿರಾಟ್ ಕೊಹ್ಲಿ 
ಕ್ರಿಕೆಟ್

IPL 2026: RCB ಬ್ಯಾಟಿಂಗ್ ವೇಳೆ ಮಾತಿನ ಚಕಮಕಿ, ಟ್ರಾವಿಸ್ ಹೆಡ್ ಗೆ 'ಹ್ಯಾಂಡ್‌ಶೇಕ್' ಮಾಡದ ವಿರಾಟ್ ಕೊಹ್ಲಿ! Video

ಸನ್ ರೈಸರ್ಸ್ ಹೈದರಾಬಾದ್ ನೀಡಿದ 256ರ ಬೃಹತ್ ಮೊತ್ತವನ್ನು ಚೇಸ್ ಮಾಡುವ ವೇಳೆ, ಕೊಹ್ಲಿ ಮತ್ತು ಟ್ರಾವಿಸ್ ನಡುವೆ ಮಾತಿನ ಚಕಮಕಿ ನಡೆದಿದೆ. ಟ್ರಾವಿಸ್ ಹೆಡ್ ಹೇಳಿದ ಯಾವುದೋ ಒಂದು ಮಾತು ಕೊಹ್ಲಿಯನ್ನು ಕೆರಳಿಸಿದೆ.

ಹೈದರಾಬಾದ್: ಶುಕ್ರವಾರ ಹೈದರಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾತ್ರವಲ್ಲದೇ, ಮೈದಾನದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಟ್ರಾವಿಸ್ ಹೆಡ್ ನಡುವಿನ ಮಾತಿನ ಚಕಮಕಿಯಿಂದಲೂ ಗಮನ ಸೆಳೆದರು.

ಅಂದಹಾಗೆ ಮಾತಿನ ಚಕಮಕಿ ಯಾಕೆ ನಡೆಯಿತು ಎಂಬುದು ಸ್ಪಷ್ಟವಾಗಿಲ್ಲ. ಇದು ನಡೆದಾಗ ಕೊಹ್ಲಿ ಕೇವಲ ಎರಡು ಬೌಂಡರಿಗಳನ್ನು ಬಾರಿಸಿದ್ದರು. ಕೊಹ್ಲಿ 11 ರನ್‌ಗಳಿಗೆ ಔಟಾದರು. ಬಳಿಕ RCB ಪಂದ್ಯವನ್ನು 55 ರನ್‌ಗಳಿಂದ ಸೋತರು. ಅದರ ಹೊರತಾಗಿಯೂ, RCB ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿತು.

ಸನ್ ರೈಸರ್ಸ್ ಹೈದರಾಬಾದ್ ನೀಡಿದ 256ರ ಬೃಹತ್ ಮೊತ್ತವನ್ನು ಚೇಸ್ ಮಾಡುವ ವೇಳೆ, ಕೊಹ್ಲಿ ಮತ್ತು ಟ್ರಾವಿಸ್ ನಡುವೆ ಮಾತಿನ ಚಕಮಕಿ ನಡೆದಿದೆ. ಟ್ರಾವಿಸ್ ಹೆಡ್ ಹೇಳಿದ ಯಾವುದೋ ಒಂದು ಮಾತು ಕೊಹ್ಲಿಯನ್ನು ಕೆರಳಿಸಿದೆ.

ಇದಕ್ಕೆ ಪ್ರತಿಕ್ರಿಯಿಸಿದ್ದ ಕೊಹ್ಲಿ, ‘ಕೆಲವು ಓವರ್ ಬೌಲಿಂಗ್ ಮಾಡು ನೋಡೋಣ’ ಎಂದು ಸವಾಲು ಹಾಕಿದ್ದರು, ಆದರೆ, ಕೊಹ್ಲಿ, ಕೇವಲ ಹದಿನೈದು ರನ್ ಗಳಿಸಿ ಔಟಾಗಿದ್ದರು. ಇದು ಕೂಡ ಕೊಹ್ಲಿ ಅವರನ್ನು ನಿರಾಸೆ ಮಾಡಿತ್ತು ಎನ್ನಲಾಗಿದೆ. ಆದರೆ, ನಂತರ, ‘ನಾನು ಬೌಲಿಂಗ್ ಮಾಡಲು ಬರುವ ಮೊದಲೇ ನೀನು ಔಟ್ ಆಗಿ ಹೋದಿಯಲ್ಲಾ’ ಎಂದು ಟ್ರಾವಿಸ್ ಹೆಡ್, ಮತ್ತೆ ಕೊಹ್ಲಿಯನ್ನು ಕೆಣಕಿದ್ದಾರೆ. ಇದು ವಿರಾಟ್ ಕೊಹ್ಲಿ ಕೋಪಕ್ಕೆ ಕಾರಣವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಇದರಿಂದ ಸಿಟ್ಟಿನಲ್ಲಿದ್ದ ಕೊಹ್ಲಿ ಪಂದ್ಯದ ನಂತರವೂ ಹಸ್ತಲಾಘವ ಮಾಡುವಾಗ ಹೆಡ್ ಅವರನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ವರದಿಯಾಗಿದೆ. ಹ್ಯಾಂಡ್‌ಶೇಕ್ ಮಾಡಲು ಬಂದ ಟ್ರಾವಿಸ್ ಹೆಡ್ ಮುಂದೆ ಬಂದಿದ್ದಾರೆ. ಆದರೆ ಕೊಹ್ಲಿ ನಿರ್ಲಕ್ಷಿಸಿದ್ದಾರೆ. ಹೊರಗಡೆ ನೋಡಿದ್ದಾರೆ. ಹೆಡ್ ಗಿಂತ ಮುನ್ನಾ ಇತರ ಆಟಗಾರರಿಗೆ ಕೊಹ್ಲಿ ಹ್ಯಾಂಡ್ ಶೇಕ್ ನೀಡಿದ್ದರು. ಹೆಡ್ ನಂತರ ಬಂದ ಇಶಾನ್ ಕಿಶಾನ್ ಗೂ ಹ್ಯಾಂಡ್ ಶೇಕ್ ಮಾಡಿದ್ದಾರೆ.

ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಇಶಾನ್ ಕಿಶನ್ (79), ಅಭಿಷೇಕ್ ಶರ್ಮಾ (56) ಮತ್ತು ಹೆನ್ರಿಚ್ ಕ್ಲಾಸೆನ್ ಅವರ ಸ್ಫೋಟಕ ಇನ್ನಿಂಗ್ಸ್‌ನ ನೆರವಿನಿಂದ, SRH 255 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೇವಲ 200 ರನ್‌ ಗಳಿಸಲಷ್ಟೇ ಶಕ್ತವಾಯಿತು. ಇದರಿಂದಾಗಿ 55 ರನ್ ಗಳಿಂದ ಸೋತಿತು. ಹಾಲಿ ಚಾಂಪಿಯನ್ ಆರ್‌ಸಿಬಿ ಈ ವರ್ಷ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್