IPL 2026: SRH ಕನಸಿಗೆ ಕೊಳ್ಳಿ ಇಟ್ಟ RCB, ಗೆಲುವಿನ ಹೊರತಾಗಿಯೂ Eliminater ಅನಿವಾರ್ಯ!

ಆರ್ ಸಿಬಿ 18 ಅಂಕಗಳೊಂದಿಗೆ +0.783 ನೆಟ್ ರನ್ ರೇಟ್ ನೊಂದಿಗೆ ಅಗ್ರಸ್ಥಾನದಲ್ಲಿದ್ದು, +0.695 ನೆಟ್ ರನ್ ರೇಟ್ ಹೊಂದಿರುವ ಗುಜರಾತ್ ಟೈಟನ್ 2ನೇ ಸ್ಥಾನದಲ್ಲಿದೆ.
SRH to play play off despite of huge win against RCB
ಆರ್ ಸಿಬಿ ವಿರುದ್ಧ ಗೆದ್ದ ಸನ್ ರೈಸರ್ಸ್ ಹೈದರಾಬಾದ್
Updated on

ಹೈದರಾಬಾದ್: ಐಪಿಎಲ್ ಟೂರ್ನಿಯ ಇಂದಿನ ಮಹತ್ವದ ಪಂದ್ಯ ಅಕ್ಷರಶಃ ಮದಗಜಗಳ ಕಾದಾಟವಾಗಿತ್ತು. ಆದರೆ ಈ ಕಾದಾಟದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಗೆದ್ದಿದೆಯಾದರೂ ಅದರ ಮುಖದಲ್ಲಿ ನಿರಾಶೆ ಹಾಗೆಯೇ ಇದೆ.

ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ನೀಡಿದ್ದ 256 ರನ್ ಗಳ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗಧಿತ 20 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 200 ರನ್ ಗಳನ್ನು ಮಾತ್ರ ಕಲೆಹಾಕಿತು. ಆ ಮೂಲಕ 55 ರನ್ ಗಳ ಅಂತರದಲ್ಲಿ ಸೋಲು ಕಂಡಿತು.

ಈ ಸೋಲಿನ ಹೊರತಾಗಿಯೂ ಆರ್ ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದ್ದು ಮಾತ್ರವಲ್ಲದೇ ಕ್ವಾಲಿಫೈಯರ್ ಗೆ ಲಗ್ಗೆ ಇಟ್ಟಿದೆ.

SRH to play play off despite of huge win against RCB
IPL 2026: SRH ವಿರುದ್ಧ RCB ಗೆ ಸೋಲು, ಸೋತರೂ ಅಗ್ರ ಸ್ಥಾನ ಅಬಾಧಿತ! ಕ್ವಾಲಿಫೈಯರ್ ಗೆ ಲಗ್ಗೆ

ಈ ಪಂದ್ಯದಲ್ಲಿ ಫಲಿತಾಂಶ ಮುಖ್ಯವಾಗಿಯೇ ಇರಲಿಲ್ಲ. ಕಾರಣ ಬೆಂಗಳೂರು ಮತ್ತು ಹೈದರಾಬಾದ್ ಎರಡೂ ತಂಡಗಳು ಈಗಾಗಲೇ ಪ್ಲೇಆಫ್ ಗೆ ಅರ್ಹತೆ ಗಿಟ್ಟಿಸಿದ್ದವು. ಈ ಪಂದ್ಯದಲ್ಲಿ ಆರ್ ಸಿಬಿ 55 ರನ್ ಗಳ ಭಾರಿ ಅಂತರದಲ್ಲಿ ಸೋತರೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ.

ಆರ್ ಸಿಬಿ 18 ಅಂಕಗಳೊಂದಿಗೆ +0.783 ನೆಟ್ ರನ್ ರೇಟ್ ನೊಂದಿಗೆ ಅಗ್ರಸ್ಥಾನದಲ್ಲಿದ್ದು, +0.695 ನೆಟ್ ರನ್ ರೇಟ್ ಹೊಂದಿರುವ ಗುಜರಾತ್ ಟೈಟನ್ 2ನೇ ಸ್ಥಾನದಲ್ಲಿದೆ.

ಹೀಗಾಗಿ ಗುಜರಾತ್ ಮತ್ತು ಆರ್ ಸಿಬಿ ನಡುವೆ ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದ್ದು, ಇದೇ ಮೇ 26ರಂದು ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದ್ದು ಅಲ್ಲಿಯೂ ಗೆದ್ದರೆ ಆರ್ ಸಿಬಿ ನೇರವಾಗಿ ಫೈನಲ್ ಗೇರಲಿದೆ.

SRH ಕನಸಿಗೆ ಕೊಳ್ಳಿ ಇಟ್ಟ RCB

ಇನ್ನುಅಗ್ರಸ್ಥಾನದಲ್ಲಿದ್ದ ಆರ್ ಸಿಬಿಯನ್ನು ಇಂದು ಸನ್ ರೈಸರ್ಸ್ ಹೈದರಾಬಾದ್ 80 ಅಥವಾ ಅದಕ್ಕಿಂತ ಹೆಚ್ಚು ರನ್ ಗಳ ಅಂತರದಲ್ಲಿ ಸೋಲಿಸಿದ್ದರೆ ಅದರ ನೆಟ್ ರನ್ ರೇಟ್ ಹೆಚ್ಚಳವಾಗಿ ಅಗ್ರ ಅಥವಾ 2ನೇ ಸ್ಥಾನಕ್ಕೇರುವ ಸಾಧ್ಯತೆ ಇತ್ತು. ಆದರೆ ಆರ್ ಸಿಬಿ 200 ರನ್ ಗಳಿಸಿ ಅದರ ಕನಸಿಗೆ ತಣ್ಣೀರೆರಚಿತು.

ಇದೀಗ ಸನ್ ರೈಸರ್ಸ್ ಹೈದರಾಬಾದ್ ತಂಡ ಎಲಿಮಿನೇಟರ್ ಆಡಿ ಅಲ್ಲಿ ಗೆದ್ದು ಮತ್ತೆ 2ನೇ ಕ್ವಾಲಿಫೈಯರ್ ಆಡಿ ಅಲ್ಲಿಯೂ ಗೆದ್ದರೆ ಮಾತ್ರ ಫೈನಲ್ ಗೇರಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com