ಜೆಸ್ಸಿಕಾ ಹೆಡ್ 
ಕ್ರಿಕೆಟ್

IPL 2026: ಕೊಹ್ಲಿ ಜೊತೆಗೆ ಕಿರಿಕ್; ಟ್ರಾವಿಸ್ ಹೆಡ್ ಪತ್ನಿಗೆ ಆನ್ ಲೈನ್ ನಲ್ಲಿ ನಿಂದನೆ; ಯಾರಿದು ಜೆಸ್ಸಿಕಾ ಹೆಡ್?

ಆಸ್ಟ್ರೇಲಿಯಾದ ಮಾಧ್ಯಮ ಸಂಸ್ಥೆ ದಿ ಅಡ್ವರ್ಟೈಸರ್ ಜೊತೆ ಮಾತನಾಡಿದ ಜೆಸ್ಸಿಕಾ, ಮತ್ತೆ ಇಂತಹ ಆನ್‌ಲೈನ್ ಕಿರುಕುಳದ ಬಗ್ಗೆ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ.

ಇತ್ತೀಚಿಗಿನ ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಿನ ಪಂದ್ಯದಲ್ಲಿ ನಡೆದ ಮಾತಿನ ಚಕಮಕಿ ಆನ್ ಲೈನ್ ನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ ಹಾಗೂ ಟ್ರಾವಿಸ್ ಹೆಡ್ ನಡುವೆ ಯಾವುದೋ ಕಾರಣಕ್ಕೆ ಮಾತಿನ ಚಕಮಕಿ ನಡೆದಿದೆ.

ಇದರಿಂದ ಸಿಟ್ಟಿನಲ್ಲಿದ್ದ ಕೊಹ್ಲಿ ಪಂದ್ಯದ ನಂತರವೂ ಹಸ್ತಲಾಘವ ಮಾಡುವಾಗ ಹೆಡ್ ಅವರನ್ನು ನಿರ್ಲಕ್ಷ್ಯ ಮಾಡಿದ್ದರು. ಹೆಡ್ ಗಿಂತ ಮುನ್ನಾ ಇತರ ಆಟಗಾರರಿಗೆ ಕೊಹ್ಲಿ ಹ್ಯಾಂಡ್ ಶೇಕ್ ನೀಡಿದ್ದರು. ಹೆಡ್ ನಂತರ ಬಂದ ಇಶಾನ್ ಕಿಶಾನ್ ಗೂ ಹ್ಯಾಂಡ್ ಶೇಕ್ ಮಾಡಿದ್ದಾರೆ. ಆದರೆ ಟ್ರಾವಿಸ್ ಹೆಡ್ ಗೆ ಹ್ಯಾಂಡ್ ಶೇಕ್ ಮಾಡಿರಲಿಲ್ಲ. ಇದು ಆನ್ ಲೈನ್ ನಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಟ್ರಾವಿಸ್ ಹೆಡ್ ಅವರ ಪತ್ನಿ ಜೆಸ್ಸಿಕಾ ಡೇವಿಸ್ ಅವರನ್ನು ನಿಂದಿಸಲಾಗುತ್ತಿದೆ. ಅವರ ಮದುವೆ ಮತ್ತು ಕುಟುಂಬದ ಫೋಟೋ ಹಾಕಿ ಕೆಟ್ಟ ರೀತಿಯ ಕಾಮೆಂಟ್ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.

ಆಸ್ಟ್ರೇಲಿಯಾದ ಮಾಧ್ಯಮ ಸಂಸ್ಥೆ ದಿ ಅಡ್ವರ್ಟೈಸರ್ ಜೊತೆ ಮಾತನಾಡಿದ ಜೆಸ್ಸಿಕಾ, ಮತ್ತೆ ಇಂತಹ ಆನ್‌ಲೈನ್ ಕಿರುಕುಳದ ಬಗ್ಗೆ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ.

ವಿಶ್ವಕಪ್ ನಂತರ ಮತ್ತೆ ನಿಂದನೆಯ ಕಾಮೆಂಟ್ ಮಾಡಲಾಗುತ್ತಿದೆ. ನಾವು ಚೆನ್ನಾಗಿದ್ದೇವೆ. ಆದರೆ, ನನ್ನ ಸ್ನೇಹಿತರು ಮತ್ತು ಕುಟುಂಬದವರ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಮೈದಾನದಲ್ಲಿ ನಡೆಯುವ ಘಟನೆಗಳಿಂದ ಪ್ರಭಾವಿತರಾಗುವ ಅಭಿಮಾನಿಗಳು ಆಟಗಾರರು ಹಾಗೂ ಅವರ ಕುಟುಂಬವನ್ನು ಸಾರ್ವಜನಿಕವಾಗಿ ಎಳೆದುತರುವುದು ಸರಿಯಾದ ನಡವಳಿಕೆ ಅಲ್ಲ ಎಂದಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ದಯೆ ಮತ್ತು ಹೆಚ್ಚು ಜವಾಬ್ದಾರಿಯುತವಾಗಿ ತೊಡಗಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ಏಪ್ರಿಲ್ 2023 ರಲ್ಲಿ ಟ್ರಾವಿಸ್ ಹೆಡ್ ಹಾಗೂ ಜೆಸ್ಸಿಕಾ ಡೇವಿಸ್ ಹೆಡ್ ವಿವಾಹವಾಗಿದ್ದು, ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಜೆಸ್ಸಿಕಾ ಮಾಡೆಲ್ ಮತ್ತು ಉದ್ಯಮಿಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಸಂಖ್ಯೆಯ ಫಾಲೋವರ್ಸ್ ಹೊಂದಿದ್ದಾರೆ. ತಮ್ಮ ಕುಟುಂಬ ಜೀವನದ ಫೋಟೋಗಳನ್ನು ಆಗ್ಗಾಗೆ ಆನ್‌ಲೈನ್‌ನಲ್ಲಿ ಹಂಚಿಕೊಳ್ಳುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್