ಆರ್ ಸಿಬಿ ಐತಿಹಾಸಿಕ ದಾಖಲೆ 
ಕ್ರಿಕೆಟ್

IPL 2026 Qualifier 1: ಐಪಿಎಲ್ ಅಷ್ಟೇ ಅಲ್ಲ.. ಜಾಗತಿಕ ಟಿ20 ಕ್ರಿಕೆಟ್ ನಲ್ಲೂ RCB ಐತಿಹಾಸಿಕ ದಾಖಲೆ, ರೆಕಾರ್ಡ್ ಗಳ ಪಟ್ಟಿ!

2024ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 262 ರನ್ ಕಲೆಹಾಕಿತ್ತು. ಇದೀಗ ಗುಜರಾತ್ ವಿರುದ್ಧ 254 ರನ್ ಪೇರಿಸಿದೆ.

ಧರ್ಮಶಾಲಾ: ಐಪಿಎಲ್ ಟೂರ್ನಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ತನ್ನ ಸ್ಫೋಟಕ ಬ್ಯಾಟಿಂಗ್ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಮಾತ್ರವಲ್ಲದೇ ಜಾಗತಿಕ ಟಿ20 ಕ್ರಿಕೆಟ್ ನಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿದೆ.

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ನಿಗಧಿತ 20 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 254 ರನ್ ಗಳಿಸಿದ್ದು, ಗುಜರಾತ್ ಗೆ ಗೆಲ್ಲಲು 255 ರನ್ ಗಳ ಬೃಹತ್ ಗುರಿ ನೀಡಿದೆ.

ಆರ್ ಸಿಬಿ ವಿರಾಟ್ ಕೊಹ್ಲಿ (43), ರಜತ್ ಪಟಿದಾರ್ (93), ಕೃನಾಲ್ ಪಾಂಡ್ಯಾ (43) ಮತ್ತು ದೇವದತ್ ಪಡಿಕ್ಕಲ್ (30) ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಉಳಿದಂತೆ ವೆಂಕಟೇಶ್ ಅಯ್ಯರ್ 19, ಟಿಮ್ ಡೇವಿಡ್ 4 ಮತ್ತು ಜಿತೇಶ್ ಶರ್ಮಾ 15 ರನ್ ಕಲೆಹಾಕಿದರು.

RCBಗೆ 3ನೇ ಗರಿಷ್ಠ ಸ್ಕೋರ್

ಇನ್ನು ಐಪಿಎಲ್ ಇತಿಹಾಸದಲ್ಲಿ ಇಂದು ಆರ್ ಸಿಬಿ ಗಳಿಸಿದ 254 ರನ್ ಗಳು ಆ ತಂಡದ 3ನೇ ಗರಿಷ್ಠ ಸ್ಕೋರ್ ಆಗಿದೆ. ಈ ಹಿಂದೆ 2013ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ 20 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 263 ರನ್ ಕಲೆಹಾಕಿತ್ತು. ಇದು ಆರ್ ಸಿಬಿ ಇತಿಹಾಸದ ಗರಿಷ್ಟ ಮೊತ್ತವಾಗಿದೆ. ಇದಾದ ಬಳಿಕ 2024ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 262 ರನ್ ಕಲೆಹಾಕಿತ್ತು. ಇದೀಗ ಗುಜರಾತ್ ವಿರುದ್ಧ 254 ರನ್ ಪೇರಿಸಿದೆ.

Highest totals for RCB

  • 263/5 vs PWI Bengaluru 2013

  • 262/7 vs SRH Bengaluru 2024

  • 254/5 vs GT Dharamsala 2026 *

  • 250/3 vs CSK Bengaluru 2026

  • 248/3 vs GL Bengaluru 2016

ಜಾಗತಿಕ ಟಿ20 ಕ್ರಿಕೆಟ್ ನಲ್ಲೂ ದಾಖಲೆ

ಇಂದು ಆರ್ ಸಿಬಿ ಗಳಿಸಿದ 254 ರನ್ ಗಳು ಐಪಿಎಲ್ ಮಾತ್ರವಲ್ಲದೇ ಜಾಗತಿಕ ಟಿ20 ಕ್ರಿಕೆಟ್ ನಲ್ಲೂ ಪ್ಲೇಆಫ್ ಅಥವಾ ನಾಕೌಟ್ ಹಂತದಲ್ಲಿ ತಂಡವೊಂದರ 4ನೇ ಗರಿಷ್ಠ ಮೊತ್ತವಾಗಿದೆ.

ಈ ಹಿಂದೆ 2022ರಲ್ಲಿ ಟಿ20 ಬ್ಲಾಸ್ಟ್ ಸಿರೀಸ್ ನ ಕ್ವಾರ್ಟರ್ ಫೈನಲ್ ನಲ್ಲಿ ಸೋಮರ್ಸೆಟ್ ತಂಡ ಡರ್ಬಿಶೈರ್ ವಿರುದ್ಧ 265ರನ್ ಕಲೆಹಾಕಿತ್ತು. ಬಳಿಕ ಭಾರತದ ದೇಶೀ ಕ್ರಿಕೆಟ್ ಟೂರ್ನಿ SMAT ಫೈನಲ್ ನಲ್ಲಿ ಹರ್ಯಾಣ ವಿರುದ್ಧ ಜಾರ್ಖಂಡ್ 262 ರನ್ ಕಲೆಹಾಕಿತ್ತು.

ಇದಾದ ಬಳಿಕ 2026ರ ಟಿ20 ವಿಶ್ವಕಪ್ ಫೈನಲ್ ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 255 ರನ್ ಕಲೆಹಾಕಿತ್ತು.

Highest totals in a knockout/Play Offs game in T20 cricket

  • 265/5 Somerset vs Derbyshire Taunton 2022 (QF T20 Blast)

  • 262/3 Jharkhand vs Haryana Pune 2025 (Final SMAT)

  • 255/5 India vs NZ Ahmedabad 2026 (Final T20 WC)

  • 254/5 RCB vs GT Dharamsala 2026 (Q1 IPL)

  • 253/7 India vs England Wankhede 2026 (SF T20 WC)

Four of the five 250+ totals by Indian teams – all since Dec 2025.

ಗರಿಷ್ಟ ಬೌಂಡರಿಗಳು

ಇಂದು ಆರ್ ಸಿಬಿ ಬೌಂಡರಿಗಳಿಂದಲೂ ದಾಖಲೆ ನಿರ್ಮಿಸಿದ್ದು, ಐಪಿಎಲ್ ಇತಿಹಾಸದಲ್ಲೇ ತಂಡವೊಂದರ ಗರಿಷ್ಟ ಬೌಂಡರಿಗಳ ಕಂಡ ಪಂದ್ಯ ಇದಾಗಿದೆ. ಗುಜರಾತ್ ವಿರುದ್ಧ ಆರ್ ಸಿಬಿ 14 ಸಿಕ್ಸರ್ ಮತ್ತು 24 ಫೋರ್ ಗಳನ್ನು ಸಿಡಿಸಿದ್ದು ಆ ಮೂಲಕ ಒಟ್ಟಾರೆ 38 ಬೌಂಡರಿಗಳನ್ನು ಸಿಡಿಸಿತು. ಇದು ಐಪಿಎಲ್ ಇತಿಹಾಸದಲ್ಲೇ ತಂಡವೊಂದು ಗಳಿಸಿದ ಗರಿಷ್ಠ ಬೌಂಡರಿಗಳಾಗಿವೆ. ಇದಕ್ಕೂ ಮೊದಲು 212ರಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 33 ಬೌಂಡರಿಗಳನ್ನು ಕಲೆಹಾಕಿತ್ತು.

Most boundaries in IPL knockouts/Playoffs

  • 38 RCB vs GT Dharamsala 2026 *

  • 33 CSK vs DC Chennai 2012

  • 32 PBKS vs CSK Wankhede 2014

  • 31 GT vs MI Ahmedabad 2023

  • 31 MI vs GT New Chandigarh 2025

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಖ್ಯಮಂತ್ರಿ ಬದಲಾವಣೆ: ದೆಹಲಿಯಲ್ಲಿ ಕಾಂಗ್ರೆಸ್‌ ಮ್ಯಾರಥಾನ್‌ ಮೀಟಿಂಗ್ ಬಳಿಕ ಕೆ.ಸಿ ವೇಣುಗೋಪಾಲ್ ಹೇಳಿದ್ದೇನು? Video

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

ಬಕ್ರೀದ್ ಮೇಕೆ ವಿಷಯವಾಗಿ ಮುಂಬೈ ಸೊಸೈಟಿಯಲ್ಲಿ ಭಾರಿ ವಿವಾದ; VHP ಕಾರ್ಯಕರ್ತರ ಮೇಲೆ ಬ್ಲೇಡ್ ನಿಂದ ಹಲ್ಲೆ!

IPL 2026 Qualifier 1: ರಜತ್ ಪಟಿದಾರ್ ಸ್ಫೋಟಕ ಬ್ಯಾಟಿಂಗ್, GTಗೆ ಗೆಲ್ಲಲು 255 ರನ್ ಬೃಹತ್ ಗುರಿ ನೀಡಿದ RCB

ಬೆಂಗಳೂರು: ದೃಷ್ಟಿಹೀನ ಸ್ನೇಹಿತೆ ಬಳಿ ಇದ್ದ 49.5 ಲಕ್ಷ ರೂ. ನಗದು, ಚಿನ್ನ ಕದ್ದ ಖದೀಮ ದಂಪತಿ ಬಂಧನ!

SCROLL FOR NEXT