ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡುತ್ತಿರುವ ಭಾರತದ ಯುವ ವೇಗಿ ಗುರ್ನೂರ್ ಬ್ರಾರ್ ಹೊಸ ದಾಖಲೆ ಬರೆದಿದ್ದು, ಕುಂಬ್ಳೆ, ಶ್ರೀನಾಥ್ ಇರುವ ಎಲೈಟ್ ಗ್ರೂಪ್ ಸೇರ್ಪಡೆಯಾಗಿದ್ದಾರೆ.
ನ್ಯೂಜಿಲೆಂಡ್ ನೆಲದಲ್ಲಿ ಭಾರತದ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದವರ ಪಟ್ಟಿಯಲ್ಲಿ ಇದೀಗ ಬ್ರಾರ್ ಮೂರನೇ ಸ್ಥಾನಕ್ಕೇರಿದ್ದಾರೆ. ಈ ಮೂಲಕ ಕನ್ನಡಿಗ ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಅವರಂತಹ ದಿಗ್ಗಜರ ಸಾಲಿಗೆ ಸೇರ್ಪಡೆಯಾಗಿದ್ದಾರೆ.
26 ವರ್ಷದ ಗುರ್ನೂರ್ ಬ್ರಾರ್ ಆಡಿರುವುದು ಕೇವಲ 11 ಏಕದಿನ ಪಂದ್ಯಗಳು. ಆದರೆ ಈಗಾಗಲೇ 21 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದಾರೆ. ಅದರಲ್ಲೂ ನ್ಯೂಜಿಲೆಂಡ್ ವಿರುದ್ಧದ ಸರಣಿಯ ಮೊದಲ ಎರಡು ಪಂದ್ಯಗಳಲ್ಲೇ ಏಳು ವಿಕೆಟ್ ಪಡೆದು ಎದುರಾಳಿ ಬ್ಯಾಟರ್ಗಳಿಗೆ ಸಿಂಹಸ್ವಪ್ನವಾಗಿದ್ದಾರೆ.
ಶನಿವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಗುರ್ನೂರ್ 10 ಓವರ್ಗಳಲ್ಲಿ ಕೇವಲ 30 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದ್ದರು. ಮಳೆಯಿಂದ ಅಡಚಣೆಯಾದ ಈ ಪಂದ್ಯದಲ್ಲಿ ಭಾರತ ಡಕ್ವರ್ತ್ ಲೂಯಿಸ್ (DLS) ನಿಯಮದಡಿ ನಾಲ್ಕು ರನ್ಗಳ ರೋಚಕ ಗೆಲುವು ಸಾಧಿಸಿತ್ತು.
3ನೇ ಅತ್ಯುತ್ತಮ ಸಾಧನೆ
ಗುರ್ನೂರ್ ಅವರ 4/30 ಬೌಲಿಂಗ್ ಪ್ರದರ್ಶನ ನ್ಯೂಜಿಲೆಂಡ್ ನೆಲದಲ್ಲಿ ಭಾರತದ ಬೌಲರ್ಗಳ ಮೂರನೇ ಅತ್ಯುತ್ತಮ ಸಾಧನೆಯಾಗಿದೆ. 1994ರಲ್ಲಿ ವೆಲ್ಲಿಂಗ್ಟನ್ನಲ್ಲಿ ಅನಿಲ್ ಕುಂಬ್ಳೆ 33 ರನ್ ನೀಡಿ ಐದು ವಿಕೆಟ್ (5/33) ಪಡೆದಿದ್ದರು. 2002ರಲ್ಲಿ ಆಕ್ಲೆಂಡ್ನಲ್ಲಿ ಜಾವಗಲ್ ಶ್ರೀನಾಥ್ 23 ರನ್ ನೀಡಿ ನಾಲ್ಕು ವಿಕೆಟ್ (4/23) ಪಡೆದಿದ್ದರು. ಇವರಿಬ್ಬರನ್ನು ಹೊರತುಪಡಿಸಿದರೆ ಗುರ್ನೂರ್ ಅವರೇ ಈ ಪಟ್ಟಿಯಲ್ಲಿ ಮುಂದಿದ್ದಾರೆ.
ಆದರೆ ಗುರ್ನೂರ್ ಅವರ ಕ್ರಿಕೆಟ್ ಪಯಣ ಯಾವಾಗಲೂ ಸುಲಭವಾಗಿರಲಿಲ್ಲ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯಗಳಲ್ಲಿ ಏಳು ವಿಕೆಟ್ ಹಾಗೂ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳಲ್ಲಿ ನಾಲ್ಕು ವಿಕೆಟ್ ಪಡೆದು ಉತ್ತಮ ಆರಂಭ ಕಂಡಿದ್ದರು. ಆದರೆ ವೆಸ್ಟ್ ಇಂಡೀಸ್ ವಿರುದ್ಧದ ತವರಿನ ಸರಣಿಯಲ್ಲಿ ಅವರ ಬೌಲಿಂಗ್ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ.
ಗುವಾಹಟಿಯಲ್ಲಿ 96 ರನ್ ನೀಡಿ ಎರಡು ವಿಕೆಟ್ ಪಡೆದಿದ್ದ ಅವರು, ತಿರುವನಂತಪುರಂನಲ್ಲಿ 60 ರನ್ ಬಿಟ್ಟುಕೊಟ್ಟರೂ ವಿಕೆಟ್ ಪಡೆಯಲು ವಿಫಲರಾಗಿದ್ದರು. ಮುಲ್ಲನ್ಪುರದಲ್ಲಿ 64 ರನ್ ನೀಡಿ ಒಂದು ವಿಕೆಟ್ ಪಡೆದಿದ್ದರು. ಈ ಕಳಪೆ ಪ್ರದರ್ಶನದಿಂದ ಸ್ವಲ್ಪ ಬೇಸರವಾಗಿತ್ತು. ಆದರೆ ಆ ಅನುಭವದಿಂದ ಪಾಠ ಕಲಿತು ನ್ಯೂಜಿಲೆಂಡ್ನಲ್ಲಿ ಮತ್ತೆ ಉತ್ತಮ ಪ್ರದರ್ಶನ ನೀಡುತ್ತಿದ್ದೇನೆ ಎಂದು ಗುರ್ನೂರ್ ಹೇಳಿದ್ದಾರೆ.
ಬ್ರಾರ್ ಹೇಳಿದ್ದೇನು?
ತಂಡದ ಆಡಳಿತ ಮಂಡಳಿ, ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಶುಭಮನ್ ಗಿಲ್ ನೀಡಿದ ಬೆಂಬಲವೇ ಕಷ್ಟದ ಸಮಯದಲ್ಲಿ ಆತ್ಮವಿಶ್ವಾಸ ಮರಳಿ ಪಡೆಯಲು ನೆರವಾಯಿತು ಎಂದು ಅವರು ತಿಳಿಸಿದ್ದಾರೆ.
'ಪ್ರತಿಯೊಬ್ಬ ಆಟಗಾರನಿಗೂ ತಂಡದ ಬೆಂಬಲ ಬಹಳ ಮುಖ್ಯ. ಇಲ್ಲಿ ಪ್ರತಿಯೊಬ್ಬರಿಗೂ ಬೆಂಬಲ ಸಿಗುತ್ತಿದೆ. ಭಾರತದಲ್ಲಿ ಬ್ಯಾಟರ್ಗಳಿಗೆ ಅನುಕೂಲಕರವಾದ ಫ್ಲಾಟ್ ಪಿಚ್ಗಳಿದ್ದವು. ಆದರೂ ಉತ್ತಮ ಲೈನ್ ಮತ್ತು ಲೆಂಗ್ತ್ನಲ್ಲಿ ಬೌಲಿಂಗ್ ಮಾಡುವಂತೆ ಕೋಚ್ ಗಂಭೀರ್ ನಮಗೆ ಸಲಹೆ ನೀಡಿದ್ದರು' ಎಂದು ಗುರ್ನೂರ್ ಹೇಳಿದ್ದಾರೆ.
'ನ್ಯೂಜಿಲೆಂಡ್ಗೆ ಬಂದ ಮೇಲೂ ಗಂಭೀರ್ ಅದೇ ಮಾತನ್ನು ಹೇಳಿದರು. ನಿಮ್ಮ ಬಲವನ್ನು ನಂಬಿ ಬೌಲಿಂಗ್ ಮಾಡಿ. ಚೆಂಡು ಸಿಕ್ಸರ್ ಅಥವಾ ಬೌಂಡರಿಗೆ ಹೋದರೂ ಚಿಂತಿಸಬೇಡಿ. ಯಾವುದೇ ಭಯವಿಲ್ಲದೆ ಸ್ವತಂತ್ರವಾಗಿ ಬೌಲಿಂಗ್ ಮಾಡಿ ಎಂದು ಪ್ರೋತ್ಸಾಹಿಸಿದರು. ನಾನು ಅದನ್ನೇ ಮಾಡುತ್ತಿದ್ದೇನೆ. ಈಗ ಉತ್ತಮ ಫಲಿತಾಂಶ ಸಿಗುತ್ತಿದೆ' ಎಂದು ತಿಳಿಸಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಈ ಪ್ರದರ್ಶನದ ಮೂಲಕ 2027ರ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಭರವಸೆಯನ್ನೂ ಗುರ್ನೂರ್ ಹೆಚ್ಚಿಸಿಕೊಂಡಿದ್ದಾರೆ.3ನೇ ಅತ್ಯುತ್ತಮ ಸಾಧನೆ

ನ್ಯೂಜಿಲೆಂಡ್ ವಿರುದ್ಧದ ಈ ಪ್ರದರ್ಶನದ ಮೂಲಕ 2027ರ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಭರವಸೆಯನ್ನೂ ಗುರ್ನೂರ್ ಹೆಚ್ಚಿಸಿಕೊಂಡಿದ್ದಾರೆ.