ಕ್ರಿಕೆಟ್

'ನನ್ ಹೆಂಡ್ತಿ ಜೊತೆಗಿನ ಜಗಳಕ್ಕೆ ಅವನೇ ಕಾರಣ': ವೈರಲ್ ವಿಡಿಯೋ ಹಿಂದಿನ ಅಸಲಿ ಕಾರಣ ಬಿಚ್ಚಿಟ್ಟ ಆಸ್ಟ್ರೇಲಿಯಾ ನಾಯಕ Pat Cummins!, ಯಾರು ಆ ಕ್ರಿಕೆಟಿಗ?

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಮತ್ತು ಅವರ ಪತ್ನಿ ಬೆಕಿ ನಡುವೆ ವಾಗ್ವಾದ ನಡೆದಿದೆ ಎನ್ನಲಾದ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಮತ್ತು ಪತ್ನಿ ಬೆಕಿ ನಡುವೆ ಇತ್ತೀಚೆಗೆ ನಡೆದಿದ್ದ ಜಗಳದ ವಿಡಿಯೋ ವ್ಯಾಪಕ ವೈರಲ್ ಆಗಿತ್ತು. ಇದೀಗ ಇದೇ ಮೊದಲ ಬಾರಿಗೆ ಪ್ಯಾಟ್ ಕಮಿನ್ಸ್ ಈ ಜಗಳದ ಕುರಿತು ಕೊನೆಗೂ ಮೌನ ಮುರಿದಿದ್ದಾರೆ.

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಮತ್ತು ಅವರ ಪತ್ನಿ ಬೆಕಿ ನಡುವೆ ವಾಗ್ವಾದ ನಡೆದಿದೆ ಎನ್ನಲಾದ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಈ ವಿಡಿಯೋ ಹಿಂದಿನ ಅಸಲಿ ಕಾರಣವನ್ನು ಸ್ವತಃ ಕಮಿನ್ಸ್ ಬಹಿರಂಗಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ಯಾಟ್ ಕಮಿನ್ಸ್, ಅದು ಪತಿ-ಪತ್ನಿಯರ ನಡುವಿನ ಜಗಳವಲ್ಲ, ಬದಲಿಗೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗನ ಅವರ ಹೇಳಿಕೆಗಳ ಬಗ್ಗೆ ಬೆಕಿ ತೀವ್ರ ಅಸಮಾಧಾನಗೊಂಡಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ.

ಯಾರು ಆ ಕ್ರಿಕೆಟಿಗ?

ಬೆಕಿ ಕೆಂಡಾಮಂಡಲಕ್ಕೆ ಆಸಿಸ್ ಮಾಜಿ ಕ್ರಿಕೆಟಿಗ ಉಸ್ಮಾನ್ ಖವಾಜಾ ಕಾರಣ ಎಂದು ಹೇಳಲಾಗಿದೆ. 2018ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ನಡೆದಿದ್ದ ಬಾಲ್ ಟ್ಯಾಂಪರಿಂಗ್ (ಚೆಂಡು ವಿರೂಪ) ವಿವಾದಕ್ಕೆ ಸಂಬಂಧಿಸಿದಂತೆ ಉಸ್ಮಾನ್ ಖವಾಜಾ ತಮ್ಮ ಆತ್ಮಕಥೆ 'ಸಬ್ರ್'ನಲ್ಲಿ ಮಾಡಿರುವ ಹೊಸ ಆರೋಪಗಳು ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ ಮತ್ತೆ ಚರ್ಚೆಗೆ ಕಾರಣವಾಗಿವೆ. ಇದೇ ವಿಚಾರವಾಗಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಮಿನ್ಸ್, ಖವಾಜಾ ಅವರ ಆರೋಪಗಳನ್ನು ತಳ್ಳಿಹಾಕಿದರು.

ಪತ್ರಿಕಾಗೋಷ್ಠಿಗೂ ಕೆಲವೇ ಗಂಟೆಗಳ ಮೊದಲು ಕಮಿನ್ಸ್ ಮತ್ತು ಅವರ ಪತ್ನಿ ಬೆಕಿ ನಡುವೆ ಬಿಸಿಬಿಸಿ ಚರ್ಚೆ ನಡೆಯುತ್ತಿರುವಂತೆ ಕಾಣುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಕಮಿನ್ಸ್, ತಮ್ಮ ವೈಯಕ್ತಿಕ ಜೀವನದ ವಿಚಾರಗಳನ್ನು ಸಾರ್ವಜನಿಕವಾಗಿ ಚರ್ಚಿಸುತ್ತಿರುವುದು ಹಾಸ್ಯಾಸ್ಪದ ಎಂದರು.

ಜಗಳ ಅಲ್ಲ.. ಅವನ ವಿರುದ್ಧ ಪತ್ನಿ ಕೋಪಗೊಂಡಿದ್ದಳು

“ನಮ್ಮ ನಡುವೆ ಯಾವುದೇ ಜಗಳ ನಡೆದಿರಲಿಲ್ಲ. ಬೆಕಿ ಉಸ್ಮಾನ್ ಖವಾಜಾ ವಿರುದ್ಧ ತೀವ್ರ ಅಸಮಾಧಾನಗೊಂಡಿದ್ದರು. ಅವರ ಹೇಳಿಕೆಗಳಿಂದ ಬೆಕಿ ಬೇಸರಗೊಂಡು ಆಕ್ರೋಶ ವ್ಯಕ್ತಪಡಿಸಿದ್ದರು” ಎಂದು ಕಮಿನ್ಸ್ ಸ್ಪಷ್ಟಪಡಿಸಿದರು.

'ನಮಗೆ ಸ್ಯಾಂಡ್ ಪೇಪರ್ ಬಗ್ಗೆ ಗೊತ್ತಿರಲಿಲ್ಲ'

2018ರ ಬಾಲ್ ಟ್ಯಾಂಪರಿಂಗ್ ವಿವಾದದ ಬಗ್ಗೆ ಖವಾಜಾ ಮಾಡಿರುವ ಆರೋಪಗಳನ್ನು ಕಮಿನ್ಸ್ ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ತಮ್ಮ ತಂಡದ ಬೌಲರ್‌ಗಳಾದ ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್‌ವುಡ್ ಮತ್ತು ನಾಥನ್ ಲಯನ್ ಸೇರಿದಂತೆ ಎಲ್ಲರಿಗೂ ಮೈದಾನಕ್ಕೆ ಸ್ಯಾಂಡ್ ಪೇಪರ್ ತೆಗೆದುಕೊಂಡು ಹೋಗುತ್ತಿರುವುದು ಗೊತ್ತಿತ್ತು ಎಂಬ ಖವಾಜಾ ಹೇಳಿಕೆ ಸತ್ಯಕ್ಕೆ ದೂರವಾಗಿದೆ ಎಂದಿದ್ದಾರೆ.

“ಸ್ಯಾಂಡ್ ಪೇಪರ್ ಅನ್ನು ಮೈದಾನಕ್ಕೆ ತೆಗೆದುಕೊಂಡು ಹೋಗುತ್ತಿರುವುದು ನಮಗೆಲ್ಲರಿಗೂ ಗೊತ್ತಿತ್ತು ಎಂದು ಉಸ್ಮಾನ್ ಹೇಳಿದ್ದರೆ, ಅದು ಶೇ.100ರಷ್ಟು ತಪ್ಪು. ಕಳೆದ ಎಂಟು ವರ್ಷಗಳಿಂದಲೂ ನಾನು ಇದೇ ಮಾತನ್ನು ಹೇಳುತ್ತಿದ್ದೇನೆ. ಆ ಘಟನೆ ನಡೆಯುತ್ತಿರುವುದು ನನಗೆ ತಿಳಿದಿರಲಿಲ್ಲ” ಎಂದು ಕಮಿನ್ಸ್ ಹೇಳಿದ್ದಾರೆ.

ಅಷ್ಟೇ ಅಲ್ಲ, ಸ್ಯಾಂಡ್ ಪೇಪರ್ ಬಳಸಿ ಚೆಂಡು ವಿರೂಪಗೊಳಿಸುವ ಯೋಜನೆಯಲ್ಲಿ ತಾನೂ ಸೇರಿದಂತೆ ಇತರ ಆಟಗಾರರು ಪ್ರಮುಖ ಪಾತ್ರ ವಹಿಸಿದ್ದರು ಎಂಬ ಆರೋಪವೂ ಸಂಪೂರ್ಣ ಅಸಂಬದ್ಧ ಎಂದು ಅವರು ಕಿಡಿಕಾರಿದ್ದಾರೆ.

'ಸ್ನೇಹಿತರ ಜೀವನ ಮತ್ತು ಗೌರವದ ಬಗ್ಗೆ ಹಗುರವಾಗಿ ಮಾತನಾಡಬಾರದು'

ಉಸ್ಮಾನ್ ಖವಾಜಾ ತಮ್ಮ ಸ್ನೇಹಿತನೇ ಆಗಿದ್ದರೂ, ತಮ್ಮ ಆತ್ಮಕಥೆಯಲ್ಲಿ ಇತರರ ಜೀವನ ಮತ್ತು ಗೌರವಕ್ಕೆ ಸಂಬಂಧಿಸಿದ ವಿಚಾರಗಳನ್ನು ಹಗುರವಾಗಿ ಪ್ರಸ್ತಾಪಿಸಿರುವುದು ಸರಿಯಲ್ಲ ಎಂದು ಕಮಿನ್ಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಉಸ್ಮಾನ್ ನನ್ನ ಸ್ನೇಹಿತ. ಆದರೆ ಸ್ನೇಹಿತರ ಜೀವನ ಮತ್ತು ಗೌರವದ ವಿಚಾರದಲ್ಲಿ ಯಾರೂ ಹಗುರವಾಗಿ ವರ್ತಿಸಬಾರದು. ತಮ್ಮ ಪುಸ್ತಕದಲ್ಲಿ ನನ್ನ ಜೀವನ, ಇತರರ ಜೀವನ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್‌ಗೆ ಸಂಬಂಧಿಸಿದ ವಿಚಾರಗಳನ್ನು ಅವರು ಲಘುವಾಗಿ ಹೇಳಿದ್ದಾರೆ. ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಹಕ್ಕು ಅವರಿಗೆ ಖಂಡಿತ ಇದೆ. ಆದರೆ ತಾವು ಹೇಳುವ ಮತ್ತು ಮಾಡುವ ವಿಚಾರಗಳಿಗೆ ಜವಾಬ್ದಾರಿಯೂ ಇರಬೇಕು” ಎಂದು ಕಮಿನ್ಸ್ ಹೇಳಿದ್ದಾರೆ.

2018ರ ಬಾಲ್ ಟ್ಯಾಂಪರಿಂಗ್ ವಿವಾದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರರು ಮತ್ತು ಅವರ ಕುಟುಂಬಗಳ ಮೇಲೂ ತೀವ್ರ ಪರಿಣಾಮ ಬೀರಿತ್ತು. ಎಂಟು ವರ್ಷಗಳ ಹಿಂದಿನ ಆ ಘಟನೆಯನ್ನು ಯಾವುದೇ ಜವಾಬ್ದಾರಿಯಿಲ್ಲದೆ ಮತ್ತೆ ಪ್ರಸ್ತಾಪಿಸುವುದು ಸರಿಯಲ್ಲ ಎಂದಿದ್ದಾರೆ.

“ನಾನು 15 ವರ್ಷಗಳಿಂದ ಕ್ರಿಕೆಟ್ ಆಡುತ್ತಿದ್ದೇನೆ. ಉಸ್ಮಾನ್ ನನ್ನ ವೃತ್ತಿಜೀವನದ ಆರಂಭದಿಂದಲೂ ನನ್ನ ಜೊತೆಗಿದ್ದಾರೆ. ಅವರು ನನಗೆ ಉತ್ತಮ ಸ್ನೇಹಿತರೂ ಹೌದು. ಆದರೆ ಇದು ನಿಜವಾದ ಜನರ ಜೀವನಕ್ಕೆ ಸಂಬಂಧಿಸಿದ ಗಂಭೀರ ವಿಚಾರ.

ಈ ಘಟನೆ ಆಟಗಾರರಷ್ಟೇ ಅಲ್ಲ, ಅವರ ಕುಟುಂಬಗಳ ಮೇಲೂ ಪರಿಣಾಮ ಬೀರಿದೆ. ಅಂದಿನ ಘಟನೆ ಎಲ್ಲರಿಗೂ ಆಘಾತಕಾರಿ ಅನುಭವವಾಗಿತ್ತು. ಹೀಗಾಗಿ ಈ ವಿಚಾರವನ್ನು ಹಗುರವಾಗಿ ಪ್ರಸ್ತಾಪಿಸುವುದು ಬೇಜವಾಬ್ದಾರಿಯ ನಡೆ” ಎಂದು ಕಮಿನ್ಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

PM Modi visit to Mysuru | ಮೈಸೂರಿಗೆ ಪ್ರಧಾನಿ ಮೋದಿ ಆಗಮನ; ಕಾಸ್ಮೋಸ್-ಮೈಸೂರು ತಾರಾಲಯ ಉದ್ಘಾಟನೆ

4th ODI: 'ಯಾರೂ ಸುಲಭವಾಗಿ ವಿಕೆಟ್ ಒಪ್ಪಿಸಲ್ಲ, ಮ್ಯಾಟ್ ಹೆನ್ರಿ ಬೌಲಿಂಗ್ ಅದ್ಭುತವಾಗಿತ್ತು': ಭಾರತದ ಕುಸಿತಕ್ಕೆ ನಾಯಕ ಶ್ರೇಯಸ್ ಅಯ್ಯರ್ ಹೇಳಿದ್ದೇನು?

ಜಿಎಸ್‌ಟಿ ಪಾಲು, ಬರ ಪರಿಹಾರ, ಕಬ್ಬು ಬೆಳೆಗಾರರ ಬೇಡಿಕೆ ವಿಷಯ ಪ್ರಸ್ತಾಪಿಸಿದ ಸಿಎಂ; Video

ವೇಶ್ಯಾವಾಟಿಕೆ ಆರೋಪ: ನಡು ರಸ್ತೆಯಲ್ಲೇ ಮಹಿಳೆಯರಿಗೆ ಥಳಿಸಿದ ಶಿವಸೇನೆ ಕಾರ್ಯಕರ್ತೆಯರು; ವಿಡಿಯೋ ವೈರಲ್​!

4th ODI: ನಾಯಕತ್ವ ವಹಿಸಿಕೊಂಡ ಮೊದಲ ಪಂದ್ಯದಲ್ಲೇ ಡಕೌಟ್; ಹೀನಾಯ ದಾಖಲೆ ಬರೆದ ಶ್ರೇಯಸ್ ಅಯ್ಯರ್