ವೈಭವ್ ಸೂರ್ಯವಂಶಿ 
ಕ್ರಿಕೆಟ್

T20 cricket: ನಾಯಕತ್ವದಲ್ಲೂ ಹೊಸ ವಿಶ್ವ ದಾಖಲೆ ಬರೆದ ವೈಭವ್ ಸೂರ್ಯವಂಶಿ!

ಇದಕ್ಕೂ ಮುನ್ನ ಟಿ20 ಕ್ರಿಕೆಟ್​ನ ಅತ್ಯಂತ ಕಿರಿಯ ಕ್ಯಾಪ್ಟನ್ ಎಂಬ ವಿಶ್ವ ದಾಖಲೆ ಕ್ರೊಯೇಷಿಯಾದ ಜಾಕ್ ವುಕುಸಿಕ್ ಅವರ ಹೆಸರಿನಲ್ಲಿತ್ತು.

ಇಂದೋರ್‌: ಉದಯೋನ್ಮುಖ ಪ್ರತಿಭೆ, ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಪ್ರಸ್ತುತ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ (SMAT) 2026ರಲ್ಲಿ ಬಿಹಾರ ತಂಡದ ನಾಯಕನಾಗಿ ನೇಮಕಗೊಳ್ಳುವ ಮೂಲಕ, ಪುರುಷರ ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ಕಿರಿಯ ವಯಸ್ಸಿನ(15 ವರ್ಷ) ನಾಯಕ ಎಂಬ ವಿಶ್ವ ದಾಖಲೆ ಬರೆದಿದ್ದಾರೆ.

ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ಶನಿವಾರ ಸೌರಾಷ್ಟ್ರ ವಿರುದ್ಧ ನಡೆದ 'ಎಲೈಟ್ ಗ್ರೂಪ್ ಬಿ' ಪಂದ್ಯದಲ್ಲಿ ಸೂರ್ಯವಂಶಿ ಬಿಹಾರ ತಂಡವನ್ನು ಮುನ್ನಡೆಸಿದರು. ಟಾಸ್ ಗೆದ್ದ ಬಿಹಾರ ತಂಡ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು.

ಈ ಪಂದ್ಯದಲ್ಲಿ ಅನುಭವಿ ಜಯದೇವ್ ಉನಾದ್ಕತ್ ನಾಯಕತ್ವದ ಸೌರಾಷ್ಟ್ರ ವಿರುದ್ಧ ಆರಂಭಿಕರಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ, 12 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಭರ್ಜರಿ ಸಿಕ್ಸರ್ ನೆರವಿನಿಂದ ಕೇವಲ 18 ರನ್ ಗಳಿಸಲಷ್ಟೇ ಶಕ್ತರಾದರು.

ನಾಯಕತ್ವದ ದಾಖಲೆ

ಬಿಹಾರ ತಂಡದ ನಾಯಕನಾಗುವ ಮೂಲಕ 15 ವರ್ಷದ ವೈಭವ್ ಸೂರ್ಯವಂಶಿ ಹಿಂದಿನ ಅನೇಕ ಯುವ ನಾಯಕರ ದಾಖಲೆಗಳನ್ನು ಮುರಿದು ಪುರುಷರ ಟಿ20 ಕ್ರಿಕೆಟ್‌ ಇತಿಹಾಸದಲ್ಲೇ ಅತ್ಯಂತ ಕಿರಿಯ ನಾಯಕ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡರು.

ಇದಕ್ಕೂ ಮುನ್ನ ಟಿ20 ಕ್ರಿಕೆಟ್​ನ ಅತ್ಯಂತ ಕಿರಿಯ ಕ್ಯಾಪ್ಟನ್ ಎಂಬ ವಿಶ್ವ ದಾಖಲೆ ಕ್ರೊಯೇಷಿಯಾದ ಜಾಕ್ ವುಕುಸಿಕ್ ಅವರ ಹೆಸರಿನಲ್ಲಿತ್ತು. 2025ರ ಆಗಸ್ಟ್‌ನಲ್ಲಿ ಸೈಪ್ರಸ್ ವಿರುದ್ಧ 17 ವರ್ಷದಲ್ಲಿ ಕ್ರೊಯೇಷಿಯಾ ತಂಡವನ್ನು ಮುನ್ನಡೆಸಿ ಅವರು ಈ ವಿಶ್ವ ದಾಖಲೆ ಬರೆದಿದ್ದರು. ಇದೀಗ ಈ ದಾಖಲೆಯನ್ನು 15 ವರ್ಷದ ವೈಭವ್ ಸೂರ್ಯವಂಶಿ ಅಳಿಸಿ ಹಾಕಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನಮಗೆ ಪಾಠ ಮಾಡುವ ಮೊದಲು ನಿಮ್ಮ ಪೂರ್ವಗ್ರಹ ಸರಿಪಡಿಸಿಕೊಳ್ಳಿ, ಆಂತರಿಕ ವಿಚಾರದಲ್ಲಿ ಮೂಗು ತೂರಿಸಬೇಡಿ': ಅಮೆರಿಕಕ್ಕೆ ಭಾರತ ಖಡಕ್ ತಿರುಗೇಟು!

'ಶೀಘ್ರದಲ್ಲೇ, ಬಾಹ್ಯಾಕಾಶದಿಂದಲೇ ನೇರವಾಗಿ ನಿಮ್ಮ ಮನೆಗೆ ವಿದ್ಯುತ್': ಆಂಧ್ರ CM ಚಂದ್ರಬಾಬು ನಾಯ್ಡು ಭರವಸೆ

ತಂದೆಯ ಕಿಡ್ನಿ ಕಸಿಗಾಗಿ ಅಂಡಾಣು ಮಾರಾಟ; ಯುವತಿ ಸೇರಿ 43 ಮಹಿಳೆಯರ ರಕ್ಷಣೆ, ಬೃಹತ್ IVF ದಂಧೆ ಬಟಾ ಬಯಲು!

ಕಷ್ಟ-ಸುಖ ಮಾತಾಡಿ ಸಂಕಷ್ಟಕ್ಕೆ ಸಿಲುಕಿದ ದರ್ಶನ್-ಪವಿತ್ರಾ: 2 ನಿಮಿಷದ ಸಂಭಾಷಣೆಯೇ SPPಗೆ ಹೊಸ ಅಸ್ತ್ರ! ಆಡಿಯೋ ಕ್ಲಿಪ್ ಜಡ್ಜ್ ಕೈಗೆ?

'ಟಾಪ್ ಆರ್ಡರ್ ಅಲ್ಲ.. ಮಧ್ಯಮ ಕ್ರಮಾಂಕವೇ ದುರ್ಬಲ': ನ್ಯೂಜಿಲೆಂಡ್ ವಿರುದ್ಧ 244 ರನ್ ಸೋಲಿನ ಬಳಿಕ ದಿನೇಶ್ ಕಾರ್ತಿಕ್ ಅಚ್ಚರಿ ಹೇಳಿಕೆ!