ಎಂಎಸ್ ಧೋನಿ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ 
ಕ್ರಿಕೆಟ್

IPLಗೆ ಧೋನಿ ನಿವೃತ್ತಿ; ರೋಹಿತ್ ಶರ್ಮಾ, ಬುಮ್ರಾ ಭಾವುಕ ವಿದಾಯ; ಅಚ್ಚರಿ ಮೂಡಿಸಿದ ವಿರಾಟ್ ಕೊಹ್ಲಿ ಮೌನ! RCB ಹೇಳಿದ್ದೇನು?

ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮಂಗಳವಾರ ಧೋನಿ 2027ರ ಐಪಿಎಲ್ ಆವೃತ್ತಿಯಿಂದ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಘೋಷಿಸಿತ್ತು. ಇದರೊಂದಿಗೆ 2008ರಲ್ಲಿ ಆರಂಭವಾದ ಧೋನಿ ಅವರ ಐಪಿಎಲ್..

ನವದೆಹಲಿ: ಐಪಿಎಲ್‌ನಲ್ಲಿ ಆಟಗಾರನಾಗಿ ತಮ್ಮ ವೃತ್ತಿಜೀವನಕ್ಕೆ ತೆರೆ ಎಳೆದಿರುವ ಮಹೇಂದ್ರ ಸಿಂಗ್ ಧೋನಿಗೆ ಕ್ರಿಕೆಟ್‌ ಲೋಕದಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದ್ದು, ಟೀಮ್ ಇಂಡಿಯಾದ ಮಾಜಿ ನಾಯಕನ ಈ ನಿರ್ಧಾರಕ್ಕೆ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಸೇರಿದಂತೆ ಹಲವು ಗಣ್ಯರು ಪ್ರತಿಕ್ರಿಯಿಸಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮಂಗಳವಾರ ಧೋನಿ 2027ರ ಐಪಿಎಲ್ ಆವೃತ್ತಿಯಿಂದ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಘೋಷಿಸಿತ್ತು. ಇದರೊಂದಿಗೆ 2008ರಲ್ಲಿ ಆರಂಭವಾದ ಧೋನಿ ಅವರ ಐಪಿಎಲ್ ಆಟಗಾರನ ವೃತ್ತಿಜೀವನ ಅಂತ್ಯಗೊಂಡಿದೆ.

ಸಿಎಸ್‌ಕೆ ಪರ 17 ಆವೃತ್ತಿಗಳಲ್ಲಿ ಆಡಿರುವ ಧೋನಿ, ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ನಿವೃತ್ತಿ ಘೋಷಣೆ ಬೆನ್ನಲ್ಲೇ ಕ್ರಿಕೆಟ್ ಅಭಿಮಾನಿಗಳು ಹಾಗೂ ಆಟಗಾರರು ತಮ್ಮ ನೆಚ್ಚಿನ ನಾಯಕನಿಗೆ ಶುಭಾಶಯ ಮತ್ತು ಧನ್ಯವಾದಗಳನ್ನು ತಿಳಿಸಿದ್ದಾರೆ.

'ಧೋನಿ ಭಾಯ್, ನಿಮ್ಮೊಂದಿಗಿನ ನೆನಪುಗಳು ಅಮೂಲ್ಯ' ಎಂದ ರೋಹಿತ್

ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ, ಧೋನಿ ಅವರಿಗೆ ವಿಶೇಷ ಸಂದೇಶ ನೀಡಿದ್ದಾರೆ. ಐಪಿಎಲ್‌ನಲ್ಲಿ ಹಲವು ವರ್ಷಗಳ ಕಾಲ ಇಬ್ಬರೂ ಎದುರಾಳಿಗಳಾಗಿ ಕಣಕ್ಕಿಳಿದಿದ್ದರು. ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯಗಳನ್ನು ಐಪಿಎಲ್‌ನ 'ಎಲ್ ಕ್ಲಾಸಿಕೊ' ಎಂದೇ ಕರೆಯಲಾಗುತ್ತದೆ.

'ಅದ್ಭುತ ಐಪಿಎಲ್ ವೃತ್ತಿಜೀವನಕ್ಕೆ ಅಭಿನಂದನೆಗಳು ಧೋನಿ ಭಾಯ್. ಹಲವು ವರ್ಷಗಳಿಂದ ನಿಮ್ಮೊಂದಿಗೆ ಮೈದಾನ ಹಂಚಿಕೊಂಡಿದ್ದು, ಸಾಕಷ್ಟು ನೆನಪುಗಳನ್ನು ಕಟ್ಟಿಕೊಂಡಿದ್ದು ಖುಷಿ ತಂದಿದೆ. ನಿಮ್ಮ ಬಗ್ಗೆ ಅಪಾರ ಗೌರವವಿದೆ' ಎಂದು ರೋಹಿತ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

'ನನ್ನ ನೆಚ್ಚಿನ ಕ್ರಿಕೆಟಿಗ, ನನಗೆ ಸ್ಫೂರ್ತಿ' ಎಂದ ಬುಮ್ರಾ

ವೇಗಿ ಜಸ್ಪ್ರೀತ್ ಬುಮ್ರಾ ಕೂಡ ಧೋನಿ ಅವರಿಗೆ ಭಾವುಕ ಸಂದೇಶ ನೀಡಿದ್ದಾರೆ. ಬುಮ್ರಾ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದಾಗ ಧೋನಿ ನಾಯಕನಾಗಿದ್ದರು. 'ನನ್ನ ನೆಚ್ಚಿನ ಕ್ರಿಕೆಟಿಗ ಮತ್ತು ನಾನು ಅತಿ ಹೆಚ್ಚು ಅನುಸರಿಸಿದ ವ್ಯಕ್ತಿ ನೀವೇ. ಇಷ್ಟೊಂದು ಸುಂದರ ನೆನಪುಗಳನ್ನು ನೀಡಿದ್ದಕ್ಕಾಗಿ ಧನ್ಯವಾದಗಳು. ಮುಂದಿನ ಹಾದಿಗೆ ಶುಭಾಶಯಗಳು' ಎಂದು ಬುಮ್ರಾ ಪೋಸ್ಟ್ ಮಾಡಿದ್ದಾರೆ.

ಅಚ್ಚರಿ ಮೂಡಿಸಿದ ವಿರಾಟ್ ಕೊಹ್ಲಿ ಮೌನ!

ಇನ್ನು MS ಧೋನಿ ಅವರ ಐಪಿಎಲ್ ನಿವೃತ್ತಿಯ ಕುರಿತು ವಿರಾಟ್ ಕೊಹ್ಲಿ ಇನ್ನೂ ಸಾರ್ವಜನಿಕವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಧೋನಿ ಅವರ ನಿವೃತ್ತಿಯ ಸುದ್ದಿಯ ಕುರಿತು ಕೊಹ್ಲಿ ಸ್ವತಃ ಯಾವುದೇ ಹೇಳಿಕೆ ನೀಡಿಲ್ಲವಾದರೂ, ಅವರ ಆಪ್ತ ವಲಯದ ಪ್ರತಿಕ್ರಿಯೆಗಳು ಮತ್ತು ಹಳೆಯ ಮಾತುಗಳು ಇವರಿಬ್ಬರ ನಡುವಿನ ಬಾಂಧವ್ಯವನ್ನು ಪ್ರತಿಬಿಂಬಿಸುತ್ತವೆ. ಕೊಹ್ಲಿ ಅವರ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ ಮತ್ತು ಸಹೋದರಿ ಭಾವನಾ ಕೊಹ್ಲಿ ಅವರು ಧೋನಿ ನಿವೃತ್ತಿಯನ್ನು ಒಂದು ಯುಗದ ಅಂತ್ಯ ಎಂದು ಬಣ್ಣಿಸಿ ಗೌರವ ಸಲ್ಲಿಸಿದ್ದಾರೆ.

ಆರ್‌ಸಿಬಿ ವಿಶೇಷ ಪೋಸ್ಟ್

ವಿರಾಟ್ ಕೊಹ್ಲಿ ಈವರೆಗೆ ಧೋನಿ ನಿವೃತ್ತಿ ಕುರಿತು ವೈಯಕ್ತಿಕವಾಗಿ ಯಾವುದೇ ಪೋಸ್ಟ್ ಹಂಚಿಕೊಂಡಿಲ್ಲವಾದರೂ ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಧೋನಿ ಅವರ ಸಾಧನೆಗಳನ್ನು ಸ್ಮರಿಸಿ ವಿಶೇಷ ಸಂದೇಶ ಪ್ರಕಟಿಸಿದೆ. 'ಓ ಮಾಹಿ, ಓ ಮಾಹಿ! ಸುಮಾರು ಎರಡು ದಶಕಗಳ ಪಯಣ, ಟ್ರೋಫಿಗಳು, ಸ್ಮರಣೀಯ ಕ್ಷಣಗಳು, ಕೊನೆಯ ಎಸೆತದ ರೋಚಕ ಗೆಲುವುಗಳು ಮತ್ತು ಎಂದಿಗೂ ಕಳೆದುಕೊಳ್ಳದ ತಾಳ್ಮೆ. ಪ್ರತಿಯೊಬ್ಬ ಅಭಿಮಾನಿಗೂ ನೀಡಿದ ಸಂತೋಷಕ್ಕಾಗಿ ಹಾಗೂ ಆಟವನ್ನು ಮುನ್ನಡೆಸಿದ ರೀತಿಗಾಗಿ ಧನ್ಯವಾದಗಳು ಮಾಹಿ ಭಾಯ್' ಎಂದು ಆರ್‌ಸಿಬಿ ಪೋಸ್ಟ್ ಮಾಡಿದೆ.

ಧೋನಿ ಸಾಧನೆ ಸ್ಮರಿಸಿದ ಬಿಸಿಸಿಐ ಉಪಾಧ್ಯಕ್ಷ

ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಕೂಡ ಧೋನಿ ಅವರ ಕೊಡುಗೆಯನ್ನು ಸ್ಮರಿಸಿದ್ದಾರೆ. 'ಐಪಿಎಲ್ ಬೆಳವಣಿಗೆ ಮತ್ತು ಯಶಸ್ಸಿನಲ್ಲಿ ಎಂ.ಎಸ್. ಧೋನಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ನಾಯಕತ್ವ ಮತ್ತು ಸಾಧನೆಗಳು ಅಸಂಖ್ಯಾತ ಯುವ ಕ್ರಿಕೆಟಿಗರಿಗೆ ಸ್ಫೂರ್ತಿ ನೀಡಿವೆ. ಅಭಿಮಾನಿಗಳಿಗೆ ಜೀವನಪೂರ್ತಿ ನೆನಪಿನಲ್ಲಿ ಉಳಿಯುವ ಕ್ಷಣಗಳನ್ನು ನೀಡಿದ್ದಾರೆ. ಅವರ ಮುಂದಿನ ಜೀವನಕ್ಕೆ ಶುಭವಾಗಲಿ' ಎಂದು ಶುಕ್ಲಾ ಶುಭ ಹಾರೈಸಿದ್ದಾರೆ.

ಐಪಿಎಲ್‌ನಲ್ಲಿ ಧೋನಿ ದಾಖಲೆ ಹೇಗಿದೆ?

ಧೋನಿ ಐಪಿಎಲ್‌ನಲ್ಲಿ ಒಟ್ಟು 278 ಪಂದ್ಯಗಳನ್ನಾಡಿದ್ದು, 5,439 ರನ್ ಗಳಿಸಿದ್ದಾರೆ. 38.30ರ ಸರಾಸರಿ ಮತ್ತು 137.45ರ ಸ್ಟ್ರೈಕ್‌ರೇಟ್ ಹೊಂದಿದ್ದಾರೆ. ಅವರ ಹೆಸರಿನಲ್ಲಿ 24 ಅರ್ಧಶತಕಗಳು ಹಾಗೂ 264 ಸಿಕ್ಸರ್‌ಗಳಿವೆ. ಮಧ್ಯಮ ಕ್ರಮಾಂಕದ ಬ್ಯಾಟರ್ ಹಾಗೂ ಅತ್ಯುತ್ತಮ ಫಿನಿಶರ್ ಆಗಿ ಧೋನಿ ಐಪಿಎಲ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Lateef Bhat ಎನ್‌ಕೌಂಟರ್‌; ಎ ಕೆಟಗರಿ ಉಗ್ರ, ಮರಗೆಲಸ ಮಾಡುತ್ತಿದ್ದವ ಉಗ್ರನಾಗಿದ್ದೇ ರೋಚಕ; LeT ಸೇರಿದ ಒಂದೇ ವರ್ಷಕ್ಕೆ ಹೆಡೆಮುರಿ ಕಟ್ಟಿದ ಭಾರತೀಯ ಸೇನೆ!

'ಜಟಾಯು' ಎಫೆಕ್ಟ್: ಕೇರಳಂನಲ್ಲಿ ಕಳೆದ ನಾಲ್ಕೇ ದಿನದಲ್ಲಿ 20 ಕೋಟಿ ಸೇರಿ ಒಟ್ಟಾರೆ ದಾಖಲೆಯ 50 ಕೋಟಿಗೂ ಹೆಚ್ಚು ಕಲೆಕ್ಷನ್!

'ಕೆಲವು ಲೆಕ್ಕಾಚಾರಗಳನ್ನು ತಣ್ಣಗೇ ಮುಗಿಸಬೇಕು': ಉಗ್ರ ಲತೀಫ್ ಭಟ್ ಎನ್ಕೌಂಟರ್ ಬೆನ್ನಲ್ಲೇ CRPF ಮುಖ್ಯಸ್ಥರ ಪೋಸ್ಟ್ ವೈರಲ್!

ICC ಏಕದಿನ ರ‍್ಯಾಂಕಿಂಗ್‌: ಭಾರತದ ಅರ್ಷ್ ದೀಪ್ ಸಿಂಗ್‌ಗೆ ಭರ್ಜರಿ ಮುಂಬಡ್ತಿ, ಜಿಂಬಾಬ್ವೆ ಆಟಗಾರರ ಭರ್ಜರಿ ಸಾಧನೆ!

'ಅಪರಿಚಿತರ ಜೊತೆ ಪ್ರಯಾಣಿಸಬೇಡಿ': ಎಚ್ಚರಿಕೆ ನಿರ್ಲಕ್ಷಿಸಿ ಸ್ಥಳೀಯರೊಂದಿಗೆ ಬ್ರೆಜಿಲ್ ಮಹಿಳೆ ಮರುಭೂಮಿಯಲ್ಲಿ ಕ್ಯಾಂಪಿಂಗ್, ಮುಂದೇನಾಯ್ತು?