ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!

ದೋಹಾದಲ್ಲಿ ಇಂದು ನಡೆದ ಗ್ರೂಪ್ ಬಿ ಪಂದ್ಯದಲ್ಲಿ ಯುಎಇ ನೀಡಿದ್ದ 250 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ ವೈಭವ್ ಸೂರ್ಯವಂಶಿ ಅವರ ವಿಶ್ವದಾಖಲೆಯ ದ್ವಿಶತಕದ ನೆರವಿನಿಂದ ಇನ್ನೂ 35.2 ಓವರ್ ಬಾಕಿ..

ಭಾರತಕ್ಕೆ ಅಮೋಘ ಜಯ
Srinivasa Murthy VN
Updated On : 24 Nov 2026, 6:08 pm

ದೋಹಾ: ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯಲ್ಲಿ ಯುಎಇ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್ ಭರ್ಜರಿ ಜಯ ಸಾಧಿಸಿದೆ.

ದೋಹಾದಲ್ಲಿ ಇಂದು ನಡೆದ ಗ್ರೂಪ್ ಬಿ ಪಂದ್ಯದಲ್ಲಿ ಯುಎಇ ನೀಡಿದ್ದ 250 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ ವೈಭವ್ ಸೂರ್ಯವಂಶಿ ಅವರ ವಿಶ್ವದಾಖಲೆಯ ದ್ವಿಶತಕದ ನೆರವಿನಿಂದ ಇನ್ನೂ 35.2 ಓವರ್ ಬಾಕಿ ಇರುವಂತೆಯೇ 7 ವಿಕೆಟ್ ಅಂತರದಲ್ಲಿ ದಾಖಲೆಯ ಜಯಭೇರಿ ಭಾರಿಸಿತು.

ಆ ಮೂಲಕ ಗ್ರೂಪ್ ಬಿ ಪಟ್ಟಿಯಲ್ಲಿ ಭಾರತ ತಂಡ 4 ಅಂಕ ಮತ್ತು +3.523 ನೆಟ್ ರನ್ ರೇಟ್ ನೊಂದಿಗೆ ಅಗ್ರಸ್ಥಾನಕ್ಕೇರಿದೆ.

Advertisement

Advertisement

Also Read

India A vs UAE: ಕೇವಲ 52 ಎಸೆತಗಳಲ್ಲಿ ದ್ವಿಶತಕ: ಹೊಸ ದಾಖಲೆ ಬರೆದ ವೈಭವ್ ಸೂರ್ಯವಂಶಿ!

ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್

ವೈಭವ್ ಸೂರ್ಯವಂಶಿ ಕೇವಲ 53 ಎಸೆತಗಳಲ್ಲಿ 28 ಸಿಕ್ಸರ್ ಮತ್ತು 7 ಬೌಂಡರಿ ಸಹಿತ 204 ರನ್ ಚಚ್ಚಿದರು. ಅಲ್ಲದೆ ಕೇವಲ 52 ಎಸೆತಗಳಲ್ಲೇ ದ್ವಿಶತಕ ಸಿಡಿಸುವ ಮೂಲಕ ವೇಗದ ದ್ವಿಶತಕ ಸಿಡಿಸಿ ಹೊಸ ದಾಖಲೆ ಬರೆದರು.

15 ವರ್ಷದ ವೈಭವ್, ಏಳು ಓವರ್‌ಗಳಿಗಿಂತ ಕಡಿಮೆ ಅವಧಿಯಲ್ಲಿ ಶತಕ ಪೂರೈಸುವ ಮೂಲಕ 'ಲಿಸ್ಟ್ ಎ' (List A) ಕ್ರಿಕೆಟ್ ಇತಿಹಾಸದಲ್ಲೇ ಅತಿ ವೇಗದ ಶತಕ ದಾಖಲಿಸಿದ್ದಾರೆ.

ಉಳಿದಂತೆ ಭಾರತದ ಪರ ಅಭಿಷೇಕ್ ಶರ್ಮಾ 12, ಪ್ರಭ್ ಸಿಮ್ರನ್ ಸಿಂಗ್ 3, ರಿಂಕೂ ಸಿಂಗ್ ಅಜೇಯ 27 ಮತ್ತು ಕುಮಾರ್ ಕುಶಾಗ್ರ ಅಜೇಯ 1 ರನ್ ಗಳಿಸಿದರು. ಅತ್ತ ಯುಎಇ ಪರ ಜಹೀದ್ ಅಲಿ, ಇಬ್ರಾರ್ ಅಹ್ಮದ್ ಮತ್ತು ನಾಯಕ ಬಸಿಲ್ ಹಮೀದ್ ತಲಾ 1 ವಿಕೆಟ್ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement