ಶಫಾಲಿ ವರ್ಮಾ 
ಕ್ರಿಕೆಟ್

ಏಷ್ಯಾಕಪ್ 2026: ಪಾಕ್‌ ಆಟಗಾರ್ತಿ ವಿಕೆಟ್‌ ಪಡೆದು 'ಗೇಟ್‌ ಔಟ್‌' ಎಂದ ಶಫಾಲಿ ವರ್ಮಾ! 3 ವಿಶ್ವ ದಾಖಲೆ ಉಡೀಸ್ -Video

ಶಫಾಲಿ ಸ್ಟಂಪ್ ಗಳತ್ತ ನಿಖರವಾಗಿ ಬೌಲ್ ಮಾಡಿದ ನಂತರ ಮುನೀಬಾ ಅಲಿ ಕ್ಲೀನ್ ಬೌಲ್ಡ್ ಆದರು. ಇದರಿಂದಾಗಿ ಮುನೀಬಾ 15 ಎಸೆತಗಳಲ್ಲಿ 13 ರನ್‌ಗಳ ಇನ್ನಿಂಗ್ಸ್ ಅಂತ್ಯಗೊಂಡಿತು.

ದುಬೈ: ಇಲ್ಲಿನ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ಶನಿವಾರ ರಾತ್ರಿ ನಡೆದ ಮಹಿಳೆಯರ ಏಷ್ಯಾ ಕಪ್ ಟೂರ್ನಿಯಲ್ಲಿ ಪಾಕ್ ಆಟಗಾರ್ತಿ ಮುನೀಬಾ ಅಲಿ ವಿಕೆಟ್ ಪಡೆದ ಭಾರತದ ಶಫಾಲಿ ವರ್ಮಾ, ವಿಶಿಷ್ಟ ರೀತಿಯಲ್ಲಿ ಸನ್ನೆ ಮಾಡುವ ಮೂಲಕ ಸಂಭ್ರಮಿಸಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೇ ಮೂರು ಹೊಸ ದಾಖಲೆ ಬರೆದಿದ್ದಾರೆ.

ಪಾಕಿಸ್ತಾನದ ಆರಂಭಿಕ ಜೋಡಿಯಾಗಿ, ಮುನೀಬಾ ಅಲಿ ಮತ್ತು ಶವಾಲ್ ಜುಲ್ಫಿಕರ್ 4.3 ಓವರ್‌ಗಳಲ್ಲಿ 27 ರನ್‌ಗಳ ಜೊತೆಯಾಟ ಹಂಚಿಕೊಂಡರು. ಈ ಹಂತದಲ್ಲಿ ಶಫಾಲಿ ಸ್ಟಂಪ್ ಗಳತ್ತ ನಿಖರವಾಗಿ ಬೌಲ್ ಮಾಡಿದ ನಂತರ ಮುನೀಬಾ ಅಲಿ ಕ್ಲೀನ್ ಬೌಲ್ಡ್ ಆದರು. ಇದರಿಂದಾಗಿ ಮುನೀಬಾ 15 ಎಸೆತಗಳಲ್ಲಿ 13 ರನ್‌ಗಳ ಇನ್ನಿಂಗ್ಸ್ ಅಂತ್ಯಗೊಂಡಿತು.

ಈ ವಿಕೆಟ್ ಭಾರತಕ್ಕೆ ಇನ್ನಿಂಗ್ಸ್‌ನ ಮೊದಲ ಯಶಸ್ಸನ್ನು ತಂದುಕೊಟ್ಟಿತು. ಭಾರತದ ಆಟಗಾರ್ತಿ, ಗೇಟ್ ಔಟ್ ಎಂದು ಸನ್ಹೆ ಮಾಡುವ ಮೂಲಕ ಸಂಭ್ರಮಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ.

ನಂತರ ಭಾರತ ಕೇವಲ 8.4 ಓವರ್‌ಗಳಲ್ಲಿ ಗುರಿಯನ್ನು ತಲುಪಿ ಏಳು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಹರ್ಮನ್‌ಪ್ರೀತ್ ಕೌರ್ ಅಜೇಯರಾಗಿ ಉಳಿದರು ಮತ್ತು ಭಾರತವು ಟೂರ್ನಿಯಲ್ಲಿ ತಮ್ಮ ಗೆಲುವಿನ ಓಟವನ್ನು ಮುಂದುವರಿಸಿತು. ಈ ಪಂದ್ಯವು ಶಫಾಲಿ ಅವರಿಗೆ ಮತ್ತೊಂದು ಮೈಲಿಗಲ್ಲಾಯಿತು. ಅವರು ಭಾರತದ ರನ್ ಚೇಸ್ ಅನ್ನು ಸಿಕ್ಸರ್‌ನೊಂದಿಗೆ ಪ್ರಾರಂಭಿಸಿದರು.

ಮಹಿಳಾ ಟಿ20 ಕ್ರಿಕೆಟ್ ಇತಿಹಾಸದಲ್ಲೇ 2 ಬಾರಿ ಇನಿಂಗ್ಸ್​ನ ಮೊದಲ ಎಸೆತದಲ್ಲಿ ಸಿಕ್ಸ್ ಬಾರಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಟಿ-20ಯಲ್ಲಿ ಅತಿ ಕಡಿಮೆ ಎಸೆತದಲ್ಲಿ 3,000 ರನ್‌ಗಳನ್ನು ಪೂರೈಸಿದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಶಫಾಲಿ ವರ್ಮಾ ಕೇವಲ 2,182 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪುವ ಮೂಲಕ ಆಸ್ಟ್ರೇಲಿಯಾದ ಮಾಜಿ ನಾಯಕಿ ಅಲಿಸ್ಸಾ ಹೀಲಿ (2,321 ಎಸೆತಗಳು) ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

ಹಾಗೆಯೇ ಅತಿ ಕಿರಿಯ ವಯಸ್ಸಿನಲ್ಲಿ 3,000 ರನ್ ಕಲೆಹಾಕಿದ ಹೆಗ್ಗಳಿಕೆಯನ್ನೂ ಕೂಡ ತಮ್ಮದಾಗಿಸಿಕೊಂಡಿದ್ದಾರೆ. ಕೇವಲ 22 ವರ್ಷ 220 ದಿನಗಳ ಪ್ರಾಯದಲ್ಲಿ ಶಾಫಾಲಿ ಈ ಸಾಧನೆ ಮಾಡುವ ಮೂಲಕ ಐರ್ಲೆಂಡ್‌ನ ಗ್ಯಾಬಿ ಲೂಯಿಸ್ (24 ವರ್ಷ 347 ದಿನಗಳು) ಹೊಂದಿದ್ದ ದಾಖಲೆಯನ್ನು ಮುರಿದಿದ್ದಾರೆ. ಈ ಮೂಲಕ ಒಂದೇ ಪಂದ್ಯದಲ್ಲಿ ಶಫಾಲಿ ಮೂರು ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Hormuz ಜಲಸಂಧಿಯಲ್ಲಿ ಮಹಾ ಸಂಘರ್ಷ: Iran 3 ತೈಲ ಟ್ಯಾಂಕರ್‌ಗಳ ಮೇಲೆ ಅಮೆರಿಕಾ ದಾಳಿ; 'ಕಠಿಣ ಪ್ರತೀಕಾರ'ದ ಶಪಥ ಮಾಡಿದ ಟೆಹ್ರಾನ್!

100 ದಿನಗಳ ಹೊಸ್ತಿಲಲ್ಲಿ ಡಿಕೆಶಿ ಸರ್ಕಾರ: ಸಾಧನೆಗಳ ಪಟ್ಟಿ ಹಿಡಿದು ಕಾಂಗ್ರೆಸ್ ಅಖಾಡಕ್ಕೆ, ‘ಯು-ಟರ್ನ್’ ಅಸ್ತ್ರದೊಂದಿಗೆ ವಿಪಕ್ಷಗಳ ಕೌಂಟರ್‌..!

ಕೆಲವರಿಗೆ ಜೀರ್ಣಿಸಿಕೊಳ್ಳಲು ಕಷ್ಟವಾಗಿದೆ: 7.8ರಷ್ಟು GDP ಬೆಳವಣಿಗೆಯ ಟೀಕಾಕಾರರನ್ನು ಖಂಡಿಸಿದ ಪ್ರಧಾನಿ ಮೋದಿ!

ಜಾರ್ಖಂಡ್: ಸಚಿವ ಸುದಿವ್ಯ ಸೋನು ಹೃದಯಾಘಾತದಿಂದ ನಿಧನ!

ಏಷ್ಯಾಕಪ್ 2026: ಪಾಕಿಸ್ತಾನ ನೀಡಿದ ಅಲ್ಪಮೊತ್ತದ ರನ್ ಬೆನ್ನಟ್ಟಿ ಗೆದ್ದ ಭಾರತ